Second Hand Cars : ಯಾವುದೇ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ಮುನ್ನ ಈ 10 ಅಂಶ ನೆನಪಿರಲಿ.

ಇಂದು ಜನಸಾಮಾನ್ಯರಿಗೆ ಓಡಾಟಕ್ಕೆ ಅನುಕೂಲ ಆಗುವ ವಾಹನ ಎಂದರೆ ಅದು ಮೋಟಾರ್ ಬೈಕ್(Bike). ಸಾರಿಗೆ ಬಸ್ ಓಡಾಟಮಾಡುವುದಕ್ಕಿಂತಲೂ ಒಂದು ಕೈ ಹೆಚ್ಚಾಗಿ ಬೈಕ್ ಕ್ರೇಜ್ ಇಂದಿನ ಜನಾಂಗಕ್ಕೆ ಇದ್ದೇ ಇರುತ್ತದೆ. ಹಾಗಾಗಿ ಮಾರುಕಟ್ಟೆಯಲ್ಲಿ ತರಾತರಿಯ ವಾಹನ ಬಂದರೂ ತಮ್ಮ ಬಜೆಟ್ ಮತ್ತು ಕಂಫರ್ಟ್ ಕಂಡು ಆಯ್ಕೆ ಮಾಡಿಕೊಳ್ಳುವ ಜನರು ನಮ್ಮಲ್ಲಿ ತುಂಬಾ ಇದ್ದಾರೆ ಎಂದು ಹೇಳಬಹುದು. ಹಾಗಾಗಿ ಬೈಕ್ ಕೊಂಡುಕೊಳ್ಳಬೇಕು ಎಂಬ ಕನಸ್ಸು ಹೊತ್ತ ಜನರಿಗೆ ಈ ಒಂದು ಮಾಹಿತಿ ಬಹಳ ಉಪಯುಕ್ತವಾಗಲಿದೆ.
ಇಂದು ಕಾರು, ಬಸ್ , ಆಟೋ ಓಡಾಡದಂತಹ ಪ್ರದೇಶಗಳಿಗೂ ಬೈಕ್ ಆರಾಮವಾಗಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಮೂಲಕ ಹೊಲ, ಬೈಲು ಕಿರಿದಾದ ರಸ್ತೆಗೂ ಸಾಗಾಟ ಮಾಡಲು ಮೋಟಾರ್ ಬೈಕ್ ತುಂಬಾ ಅನುಕೂಲಕರವಾಗಿದೆ. ಅಪಘಾತ ಮುಂತಾದ ಸಂದರ್ಭದಲ್ಲಿ ಬೈಕ್ ವಿಮೆ ನಿಮ್ಮ ನೆರವಿಗೆ ಬರಲಿದ್ದು ನಿಮ್ಮ ಬಜೆಟ್ ಆಧಾರದಲ್ಲಿ ಬೈಕ್ ಕೊಳ್ಳಬಹುದು ಆದರೆ ಹೆಚ್ಚಿನ ಸಂದರ್ಭದಲ್ಲಿ ಬೈಕ್ ಕೊಳ್ಳುವಾಗ ಹಣ ಕಡಿಮೆ ಇರುವ ಕಾರಣಕ್ಕೆ ಫಸ್ಟ್ ಹ್ಯಾಂಡ್ ಬದಲು ಸೆಕೆಂಡ್ ಹ್ಯಾಂಡ್ ಬೈಕ್ ಕೊಳ್ಳಲು ಮನಸ್ಸು ಮಾಡುತ್ತಾರೆ. ಇಂತಹ ಬೈಕ್ ಗಳಿಗೆ ವಿಮೆ (insurance) ಇರುತ್ತದಾ ಇದು ಕೊಳ್ಳುವುದು ಸುರಕ್ಷಿತವೇ ಇಲ್ಲವೇ ಎಂಬುದು ಅನುಮಾನ ಹಾಗಾಗಿ ಈ ಮಾಹಿತಿ ನೀವು ಶೇರ್ ಮಾಡಿಕೊಳ್ಳುವುದರಿಂದ ಇತರರಿಗೂ ಉಪಯುಕ್ತ ಆಗಲಿದೆ.

ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿ ಮಾಡುವಾಗ ಹಣ ಇದೆ ಅಷ್ಟಕ್ಕೆ ನಾನು ಬೈಕ್ ಖರೀದಿ ಮಾಡುತ್ತೇನೆಂದು ಮಾಡುತ್ತಾರೆ ಆದರೆ ಅದು ನಿಮ್ಮ ತಪ್ಪು ಆಯ್ಕೆ ಕೂಡ ಇರಬಹುದು. ಯಾಕೆಂದರೆ ಸೆಕೆಂಡ್ ಹ್ಯಾಂಡ್ ಬೈಕ್ ಕೊಳ್ಳುವಾಗ ಅನೇಕ ವಿಚಾರದ ಬಗ್ಗೆ ನೀವು ಚಿಂತನೆ ಮಾಡಲೇಬೇಕು. ಅಂತಹ ವಿಚಾರ ಯಾವುದು ಎಂದು ನಾವು ತಿಳಿಸುತ್ತೇವೆ.
ಈ ಎಲ್ಲ ಮಾಹಿತಿ ತಿಳಿದಿರಿ
ಉದ್ದೇಶದನ್ವಯವೇ ಆಯ್ಕೆ ಮಾಡಿ
ನಿಮಗೆ ಯಾವ ಉದ್ದೇಶಕ್ಕಾಗಿ ಬೈಕ್ ಬೇಕಿದೆ. ತಿರುಗಾಟವೇ , ಪ್ರಯಾಣವೇ ಇನ್ನಿತರ ಅಂಶಗಳ ಬಗ್ಗೆ ಸರಿಯಾದ ನಿಲುವು ಹೊಂದಿರಬೇಕು. ಮೈಲೇಜ್ ಎಷ್ಟಿರಬೇಕು , ಬಜೆಟ್ ಫ್ರೆಂಡ್ಲಿ (budget friendly) ಬೇಕಾ ಅಥವಾ ಟ್ರೆಂಡ್ ಬೈಕ್ ಬೇಕಾ ಇನ್ನಿತರ ಪೂರ್ವ ಯೋಜನೆ ಮಾಡಿಕೊಳ್ಳುವುದು ತುಂಬಾ ಮುಖ್ಯ. ಯಾಕೆಂದರೆ ಇಂದು ತರತರದ ಬೈಕ್ ಮುಗಿ ಬೀಳುವಾಗ ನಿಮ್ಮ ಮೂಲ ಉದ್ದೇಶವೇ ಕಣ್ಮರೆಯಾಗಲಿದೆ.
ಸಂಶೋಧನಾ ಕಾರ್ಯ
ಇದು ಎರಡನೇ ಹಂತ ಎನ್ನಬಹುದು. ಬೈಕ್ ಖರೀದಿ ಮಾಡುವುದೇ ಹೌದಾದರೇ ಯಾವ ವಿಧವಾದ ಬೈಕ್ ಬ್ರ್ಯಾಂಡ್ (brand) ಇತರ ಮಾಹಿತಿ ತಿಳಿದಿರಬೇಕು. ನಿಮಗೆ ಈ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಕೊರತೆ ಇದ್ದಲ್ಲಿ ಆಗ ನೀವು ಸಾಮಾಜಿಕ ಜಾಲತಾಣಗಳ ನೆವರಿನಿಂದ ಮಾಹಿತಿ ಪಡೆಯಿರಿ ಇಲ್ಲವೇ ನಿಮ್ಮ ಸ್ನೇಹಿತರ ಬಳಿ ಸಲಹೆ ಪಡೆದು ಸಂಶೋಧನಾ ಕಾರ್ಯ ಮಾಡಿರಿ.

ಬಜೆಟ್ ಫ್ರೆಂಡ್ಲಿ ಇರಲಿ
ಬೈಕ್ ಖರೀದಿ ಮಾಡುವಾಗ ನಿಮ್ಮ ಬಜೆಟ್ ಗೆ ಎಟಕುವುದೆ ಎಂದು ಖಾತರಿ ಮಾಡಿಕೊಳ್ಳಿ ಇಲ್ಲವಾದರೆ ಮತ್ತೆ ಸಾಲ ಲೋನ್ ಎಲ್ಲ ಮಾಡುವ ತಾಪತ್ರಯ ಕೂಡ ಎದುರಾಗಲಿದೆ.ಹಾಗಾಗಿ ಇಂತಿಷ್ಟು ಬಜೆಟ್ ಒಳಗೆ ಎಂಬ ಒಂದು ಸರಳ ಲೆಕ್ಕಾಚಾರದ ಸೂತ್ರ ಅನುಸರಿಸಿ.
ಬೈಕ್ ಪರಿಶೀಲನೆ
ಬೈಕ್ ಕೊಳ್ಳುವಾಗ ಅದು ಸೆಕೆಂಡ್ ಹ್ಯಾಂಡ್ (second hand bike) ಆಗಿದ್ದರೆ ಸ್ಕ್ರ್ಯಾಚ್ ಆಗಿದೆಯಾ,ಗೇರು ಹೇಗಿದೆ ಉತ್ತಮವೆ ಇಲ್ಲವೇ ಇನ್ನಿತರ ಮಾಹಿತಿಯನ್ನು ಸರಿಯಾಗಿ ಪರಿಶೀಲನೆ ಮಾಡಿ. ಇಂಧನ ಸೋರಿಕೆ, ತುಕ್ಕು ಹಿಡಿಯುವುದು, ಬಣ್ಣ ಬದಲಾಗುವುದು, ಕೆಲ ಭಾಗಗಳು ಸುಸ್ಥಿತಿಯಲ್ಲಿಲ್ಲದೆ ಮುರಿದು ಬಿಟ್ಟಿದ್ದರೆ, ಕೇಬಲ್, ಸರಪಳಿ, ಲೈಟ್, ಸೀಟ್, ಕ್ಲಚ್, ಬ್ರೇಕ್ ಇತರಗಳನ್ನಜ ಕೂಲಂಕುಷವಾಗಿ ಪರಿಶೀಲಿಸಿ. ಅನುಮಾನ ಇದ್ದರೆ ಮೆಕಾನಿಕ್ ಅವರ ಸಹಾಯ ಪಡೆದೆ ಉತ್ತಮ ಬೈಕ್ ಆಯ್ದುಕೊಳ್ಳಿ.
ಟೆಸ್ಟ್ ರೈಡ್
ಸಾಮಾನ್ಯವಾಗಿ ಯಾವುದೇ ಹಳೆ ಅಥವಾ ಹೊಸ ವಾಹನ ಖರೀದಿ ಮಾಡುವಾಗ ಟೆಸ್ಟ್ ರೈಡ್ (test ride) ಮಾಡಿಯೇ ಮಾಡುತ್ತಾರೆ ಇಲ್ಲಿಯೂ ಕೂಡ ನೀವು ಒಮ್ಮೆ ಟೆಸ್ಟ್ ರೈಡ್ ಪ್ರಯೋಗವನ್ನು ಮಾಡಬಹುದು. ಇದರಿಂದಾಗಿ ಆ ಬೈಕ್ ನಲ್ಲಿ ಸಮಸ್ಯೆ ಇದ್ದರೆ ಆ ಕೂಡಲೇ ನಿಮ್ಮ ಅರಿವಿಗೆ ಬರಲಿದೆ. ಅನುಮಾನ ಇದ್ದರೆ ಅಲ್ಲಿಯೇ ಕೇಳಿದಾಗ ಮಾಲಕರೆ ಉತ್ತರಿಸಲಿದ್ದು ನಿಮಗೆ ಆ ಬೈಕ್ ಸೂಟ್ ಆಗುತ್ತಾ ಇಲ್ಲವಾ ಎಂದು ತಿಳಿಯಲಿದೆ.

VIN ಪರಿಶೀಲಿಸಿ
ವಾಹನದ ಗುರುತು ಅಥವಾ ಚಾಸಿಸ್ ಸಂಖ್ಯೆಯನ್ನು ಪರಿಶೀಲಿಸಲು ಎಂದಿಗೂ ಮರೆಯದಿರಿ.ಪ್ಲೇಟ್ ಮತ್ತು ಇಂಜಿನ್ ಸಂಖ್ಯೆ ಒಂದಕ್ಕೊಂದು ಹೊಂದಿಕೆಯಾಗಬೇಕು.ಈ ಒಂದು ಸಂಖ್ಯೆ ಯಿಂದ ಬೈಕ್ ಎಷ್ಟು ವರ್ಷ ಬಾಳ್ವಿಕೆ ಬರಬಹುದೆಂಬ ಒಂದು ಲೆಕ್ಕಾಚಾರ ಸಹ ಮಾಡಬಹುದು.
ದಾಖಲೆಗಳ ಪರಿಶೀಲನೆ
ಬೈಕ್ ನ ನಿರ್ವಹಣಾ ದಾಖಲೆಗಳನ್ನು ನೀವು ಪರಿಶೀಲನೆ ಮಾಡಬೇಕು ಯಾಕೆಂದರೆ ಕೆಲ ಕದ್ದ ಬೈಕ್ ಅನ್ನು ಸೆಕೆಂಡ್ ಹ್ಯಾಂಡ್ ಮಾರುವ ಸಾಧ್ಯತೆ ತುಂಬಾ ಇರುತ್ತದೆ. ಯಾವುದೇ ದಾಖಲೆಗಳ ಪರಿಶೀಲನೆ ಮಾಡದೇ ಖರೀದಿ ಮಾಡಿದರೆ ನಿಮೆಗೆ ಅಪಾಯ ಆಗುವ ಸಾಧ್ಯತೆ ಇದೆ ಇದರಿಂದಾಗಿ ನೀವು ಮೋಸ ಹೋಗಲು ಬಹುದು. ನಿಮಗೆ ಆ ಬೈಕ್ ಇಷ್ಟ ಆದದ್ದೇ ಆದರೆ ಅದರ ಬೆಲೆ ಇನ್ನಿತರ ಅಂಶಗಳ ಬಗ್ಗೆ ಮಾಲಿಕರನ್ನು ಭೇಟಿ ಮಾಡಿ ಬೆಲೆ ಮಾತುಕತೆ ಮಾಡಿ ಹಾಗೇ ಮಾಹಿತಿ ದಾಖಲಾತಿ ಎಲ್ಲವೂ ಪರಿಶೀಲಿಸಿದ ಬಳಿಕವೇ ಬೈಕ್ ಖರೀದಿ ಮಾಡಿ.
ಮಾಲಿಕತ್ವ ವರ್ಗಾವಣೆ ಮಾಡಿಸಿ
ಮೂಲ ಮಾಲಿಕರಿಂದ ನಿಮ್ಮ ಹೆಸರಿಗೆ ಮಾಲಿಕತ್ವ ವರ್ಗಾವಣೆ ಶೀಘ್ರ ಮಾಡಿಸಿಕೊಳ್ಳುವುದನ್ನು ಮಾತ್ರ ಮರೆಯದಿರಿ. ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರದಿಂದ ದಿಚಕ್ರವಾಹನದ ವಿಮಾ ವರೆಗೆ ಎಲ್ಲವೂ ನಿಮ್ಮ ಮಾಲಿಕತ್ವಕ್ಕೆ ಬರುವಂತೆ ಮಾಡಬೇಕು.

ಈ ಎಲ್ಲ ದಾಖಲೆಗಳ ಪುರಾವೆ ಪರಿಶೀಲಿಸಿ
ಮೂಲ ನೋಂದಣಿ ಪ್ರಮಾಣ ಪತ್ರ(RC) ,ಬೈಕ್ ವಿಮಾ ಪಾಲಿಸಿ, RTO ನಮೂನೆಗಳು, ಬೈಕ್ ಮಾರಾಟ ಮತ್ತು ತೆರಿಗೆ ರಶೀದಿ, ಮಾರಾಟಗಾರರ ವಿಳಾಸದ ಪುರಾವೆ , ಪಾಸ್ ಪೋರ್ಟ್ ಫೋಟೋ ಇತರ ದಾಖಲೆ ಗಳ ಮೂಲಕ ನೀವು ಬೈಕ್ ಪರಿಶೀಲನೆ ಮಾಡಿ ಖರೀದಿಸಬಹುದಾಗಿದೆ.
ವಿಮಾ ವರ್ಗಾಯಿಸಿ
ಬೈಕ್ ಗಳಿಗೆ ಆನ್ಲೈನ್ ವಿಮಾ ಪಾಲಿಸಿ ಇರಲಿದ್ದು ನೀವು ಅಂತಹ ಮಾಲಿಕರ ಬೈಕ್ ವಿಮೆ ಯನ್ನು ನಿಮ್ಮ ಹೆಸರಿಗೆ ವರ್ಗಾಯಿಸಬೇಕು ಅಪಘಾತ ಆದ ಸಂದರ್ಭದಲ್ಲಿ ಇದು ನಿಮಗೆ ನೆರವಾಗಲಿದೆ. ಹಾಗಾಗಿ ಈ ವ್ಯವಸ್ಥೆ ಕಷ್ಟ ಎನಿಸಿದರೆ ಈಗ ಆನ್ಲೈನ್ ವಿಮೆ ಪಡೆಯಲು ಮರೆಯದಿರಿ. ಈ ಆನ್ಲೈನ್ (online) ವ್ಯವಸ್ಥೆ ಮೂಲಕವೇ ಮಾಲಿಕರಿಂದ ನಿಮ್ಮ ಹೆಸರಿಗೆ ವಿಮಾ ವರ್ಗಾವಣೆ ಮಾಡಲು ಸಾಧ್ಯವಿದೆ.
ಒಟ್ಟಾರೆಯಾಗಿ ನಮ್ಮ ಅನುಕೂಕಕ್ಕೆಂದು ಖರೀದಿ ಮಾಡುವ ಮೋಟಾರ್ ಬೈಕ್ ಸೆಕೆಂಡ್ ಹ್ಯಾಂಡ್ ಆಗಿದ್ದಾಗ ಸಾಕಷ್ಟು ತೊಂದರೆ ನೀಡುವ ಸಾಧ್ಯತೆ ಕೂಡ ಇದೆ ಹಾಗಾಗಿ ಈ ಎಲ್ಲ ಮಾಹಿತಿಯ ಅನ್ವಯ ಸರಿ ತಪ್ಪುಗಳ ಪರಿಶೀಲನೆ ಮಾಡಿ ಸೂಕ್ತ ಹಾಗೂ ಉತ್ತಮವಾದ ಆಯ್ಕೆಯನ್ನೇ ಮಾಡಿರಿ.