Second Hand Car: ಈ ರೀತಿ ಮಾಡಿದ್ರೆ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡುವಾಗ ನೀವು ಖಂಡಿತ ಮೋಸ ಹೋಗಲ್ಲ

ಇಂದು ಪ್ರತಿಯೊಂದು ಮನೆಗೂ ಒಂದೊಂದು ವಾಹನ ಬೇಕು, ಪ್ಯಾಮಿಲಿ (Family) ಅಂದಾಗ ಯಾವುದೋ ಪ್ರಯಾಣಕ್ಕೆ ಇಂದು ವಾಹನ ಅಗತ್ಯ ಸಾಧನ, ಇಂದು ಬಸ್ ಗಾಗಿ ಕಾದು ಕುಳಿತು ಪ್ರಯಾಣ ಮಾಡುವುದು ಕಷ್ಟ ಸಾದ್ಯ, ಅದರಲ್ಲೂ ಬೈಕ್ (Bike) ಗಿಂತಲೂ ಕಾರು ಖರೀದಿ ಮಾಡುವುದರಲ್ಲಿ ಜನರಿಗೆ ಹೆಚ್ಚು ಆಸಕ್ತಿ, ಇಂದು ಕಡಿಮೆ ಬಜೆಟ್‌ನಿಂದಾಗಿ ಜನಸಾಮಾನ್ಯರಿಗೆ ಕಾರು ಖರೀದಿಸುವುದು ಕಷ್ಟ, ಹೆಚ್ಚಿನ ಜನರು ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ಒಲವು ತೋರಿಸುತ್ತಾರೆ, ಇಂದು ಸ್ವಂತ ವಾಹನ ಬಳಕೆಗೆ ಜನ ಆದ್ಯತೆ ನೀಡುತ್ತಿದ್ದಾರೆ. ಇದು ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿಗೂ ಸಕಾರಾತ್ಮಕ, ಧನಾತ್ಮಕ ಪರಿಣಾಮ ಬೀರಿದೆ.

ಹೆಚ್ಚು ಕ್ರೇಜ್
ಮಕ್ಕಳು, ಪತಿ ಹಾಗೂ ಪತ್ನಿ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡಲು ಅಸಾಧ್ಯ. ಹೀಗಾಗಿ ಮಧ್ಯಮ ವರ್ಗದವರು ಕಾರೊಂದನ್ನು ಖರೀದಿಸುವ ಪ್ಲಾನ್ ಮಾಡುತ್ತಾರೆ, ಹೊಸ ಕಾರು ಖರೀದಿ ಮಾಡಲು ಆರ್ಥಿಕ ವಾಗಿ ಸದೃಡ ರಾಗಿರಬೇಕು, ಹೀಗಾಗಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿಯತ್ತ ಜನರು ಗಮನ ನೀಡುತ್ತಾರೆ.
ಉಪಯೋಗ ಇದೆ
ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವುದರಿಂದ ಹಲವು ಅನುಕೂಲಗಳಿವೆ. ನೀವು ಹೊಸ ಕಾರಿಗಿಂತ ಕಡಿಮೆ ಬೆಲೆಗೆ ಬಳಸಿದ ವಾಹನವನ್ನು ಖರೀದಿ ಮಾಡಬಹುದಾಗಿದ್ದು, ಹಳೆಯ ಕಾರು ಖರೀದಿಸುವ ಮುನ್ನ, ಅದರ ಸಾಮರ್ಥ್ಯ, ಮೈಲೆಜ್, ವೈಶಿಷ್ಟ್ಯ ಗಳನ್ನು ಗಮನಿಸಿ, ಕಾರಿನ ಕಂಡೀಷನ್, ಎಷ್ಟು ದೂರ ಚಲಿಸಿದೆ ಮಾಹಿತಿ ಯನ್ನು ಸರಿಯಾಗಿ ತಿಳಿದು ಕೊಳ್ಳಿ.

ಈ ಮಾಹಿತಿ ತಿಳಿಯಿರಿ
ಹಳೆಯ ಕಾರು ಖರೀದಿ ಮಾಡುವಾಗ ಯಾವ ಕಂಪೆನಿ ಕಾರು, ಮಾಡೆಲ್ ಹೇಗಿದೆ ಎಂದು ಗಮನಿಸಿ, ಹಳೆಯ ಕಾರಿನಲ್ಲಿ ಮೈಲೇಜ್ ಸಮಸ್ಯೆಯೂ ಬರುತ್ತದೆ. ಹಿಂದೆ ಬಳಕೆ ಮಾಡುತ್ತಿದ್ದ ಮಾಲೀಕರು ಸರಿಯಾಗಿ ನಿರ್ವಹಣೆ ಮಾಡದ, ಕಡಿಮೆ ಮೈಲೇಜ್ ನೀಡುವ ಕಾರನ್ನು ನೀವು ಪಡೆದು ಕೊಂಡಿದ್ದರೆ ಇದನ್ನು ಸರಿಯಾಗಿ ನೀವು ಗಮನಿಸಿ.
ವೈಯಕ್ತಿಕ ಮಾರಾಟಗಾರರು, ಡೀಲರ್‌ಶಿಪ್‌ಗಳು ಆಗಿದ್ದರೆ ಇದರ ಬೆಲೆಯನ್ನು ಸರಿಯಾಗಿ ನೋಡಿಕೊಳ್ಳುವುದು ಉತ್ತಮ, ನಿಮ್ಮ ಬಜೆಟ್ ಅನ್ನು ಮುಂಚಿತವಾಗಿ ನಿರ್ಧರಿಸಿ ಡೀಲರ್‌ಶಿಪ್‌ಗೆ ಬಂದ ನಂತರ ಮಾರಾಟಗಾರರಿಂದ ವಂಚಿತರಾಗುವ ಸಮಸ್ಯೆ ಯನ್ನು ತಪ್ಪಿಸಿ
ಇದರ ಜೊತೆ ಕಾರಿನ ವೈಶಿಷ್ಟ್ಯಗಳನ್ನು ಗಮನಿಸಿ, ಹೊಸ ಮಾಡೆಲ್ ಮಾದರಿಗಳನ್ನು ಖರೀದಿಸಲು ಅಯ್ಕೆ ಮಾಡಿ.
ತುಂಬ ಸಯಮದ ವರೆಗೆ ನಿಲ್ಲಿಸಿದ ಕಾರುಗಳನ್ನು ಖರೀದಿಮಾಡಬೇಡಿ, ಡ್ರೈವ್ ಮಾಡುತ್ತಿದ ಚಲಾವಣೆ ಮಾಡುತ್ತಿದ್ದ ಕಾರು ಖರೀದಿಸಿ, ಬ್ರೇಕ್, ಎಮಿಷನ್, ಲೈಟಿಂಗ್, ಇಂಜಿನ್ ಕೂಲಿಂಗ್, ಸರಿಯಾಗಿ ಇದೆಯೆ. ವಾಹನ ವ್ಯವಸ್ಥೆಗಳು ಉತ್ತಮ ಸ್ಥಿತಿಯಲ್ಲಿವೆಯೇ ಎಂದು ಖಚಿತಪಡಿಸಿಕೊಳ್ಳುವುದು ಉತ್ತಮ.
ಒಟ್ಟಾರೆ ಒಂದು ಕಾರನ್ನು ಖರೀದಿ ಮಾಡುವ ಮುನ್ನ ಅದರ ಫೀಚರ್ ಅನ್ನು ಗಮನಿಸಿ ಆಯ್ಕೆ ಮಾಡಿಕೊಳ್ಳಿ, ಮುಂದೆ ಭವಿಷ್ಯಕ್ಕೆ ಒಳಿತಾಗುವುದಾದರೆ , ಖರೀದಿ ಮಾಡಿ,