Best CNG Cars: ಕಡಿಮೆ ಬೆಲೆಗೆ ಟಾಪ್ ಮೈಲೇಜ್ ಕೊಡುವ CNG ಕಾರುಗಳ ಪಟ್ಟಿ ಹೀಗಿದೆ.

ಪ್ರತಿಯೊಬ್ಬರಿಗೂ ತನ್ನದೇ ಸ್ವಂತ ವಾಹನ ಇರಬೇಕು, ಖರೀದಿ ಮಾಡಬೇಕು, ಎಂಬ ಕನಸು ಇರುತ್ತದೆ, ಅದ್ರಲ್ಲೂ ಕಾರು ಕ್ರೇಜ್ ಹೆಚ್ಚು ಯುವಕರಲ್ಲಿ ಇರುತ್ತದೆ, ಅದರೆ ನಾವು ಖರೀದಿ ಮಾಡಬೇಕೆಂಬ ವಾಹನ ಖರೀದಿಸಲು ಹೆಚ್ಚು ಹಣ ಬೇಕು , ಇದರ ಜೊತೆ ಗೆ ಉತ್ತಮ ವೈಶಿಷ್ಟ್ಯ ಇರುವ ಕಾರನ್ನು ಖರೀದಿ ಮಾಡಬೇಕು, ಇಂದು ಮಾರುಕಟ್ಟೆಗೆ ನಾನಾ ರೀತಿಯ ವಾಹನಗಳು ಲಗ್ಗೆ ಇಟ್ಟಿವೆ, ಹೊಸ ಮಾಡೆಲ್ ನ (Model) ಕಡಿಮೆ ಖರ್ಚಿನ ಮೂಲಕ ನೀವು ಕಾರು ಖರೀದಿ ಮಾಡಬಹುದು, ಅದರಲ್ಲೂ ಏರುತ್ತಿರುವ ಪೆಟ್ರೋಲ್(Petrol) , ಡಿಸೇಲ್(Diesel) ಬೆಲೆಯಿಂದ ಪಾರಾಗುವುದಕ್ಕೆ ಇಂದು ಸಿ ಎನ್ ಜಿ(CNG) ವಾಹನಗಳು ಮಾರುಕಟ್ಟೆ ಗೆ ಬಂದಿವೆ, ಉತ್ತಮ ಇಂಧನ ದಕ್ಷತೆಯನ್ನು ನಿರ್ವಹಿಸುವುದಕ್ಕೆ ವಾಹನ ಪ್ರೀಯರಿಗೆ ಸದ್ಯ ಸಿಎನ್‌ಜಿ ವಾಹನಗಳೂ ಉತ್ತಮ ಆಯ್ಕೆ ಎನ್ನಬಹುದು, ಇದೇ ಕಾರಣದಿಂದ ಈಗ ಸಿಎನ್‌ಜಿ ಕಾರುಗಳು ಭಾರತದಲ್ಲಿ ಹೆಚ್ಚು ಬೇಡಿಕೆ ಸೃಷ್ಟಿ ಮಾಡಿವೆ, ಅದೆ ರೀತಿ ಉತ್ತಮ ಮೈಲೇಜ್ ನೀಡುವ ಮತ್ತು ಕೈಗೆಟಕುವ ದರದಲ್ಲಿ ಉತ್ತಮ ವೈಶಿಷ್ಟ್ಯದ ಸಿಎನ್‌ಜಿ ಕಾರುಗಳ ಮಾಹಿತಿ ಗಳು ಈ‌ ಲೇಖನದಲ್ಲಿ ಇವೆ.

zzzಯಾವೆಲ್ಲ ಕಾರು

ಮಾರುತಿ ಸುಜುಕಿ ವ್ಯಾಗನ್(Maruti Suzuki Wagon)

ಮಾರುತಿ ಸುಜುಕಿ ವ್ಯಾಗನ್ ಬಹಳಷ್ಟು ಬೇಡಿಕೆ ಯಲ್ಲಿರುವ ಸಿ ಎನ್ ಜಿ(CNG) ಕಾರು, ಈ ಸಿಎನ್‌ಜಿ ಕಾರು 998 ಸಿಸಿ ಕೆ10ಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ವ್ಯಾಗನ್ ಆರ್‌ ಸಿಎನ್‌ಜಿಯ ಮೈಲೇಜ್‌ 34.05km/kg. ಇದ್ದು ಉತ್ತಮ‌ ಪೀಚರ್ಸ್ ಕೂಡ ಈ ಕಾರಿ‌ನಲ್ಲಿದೆ, ಆರಾಮ ದಾಯಕ‌ ಪ್ರಯಾಣ ವನ್ನು ಈ ಕಾರು ನೀಡಲಿದೆ,ಇದರ ಬೆಲೆ 6.89 ಲಕ್ಷ ರೂಪಾಯಿ ಎನ್ನಲಾಗಿದೆ.

Maruti Suzuki Wagon
Image Courtesy: Autocar India

ಮಾರುತಿ ಸುಜುಕಿ ಸೆಲಾರಿಯೋ ಸಿಎನ್‌ಜಿ(Maruti Celerio CNG)

ಮಾರುತಿ ಸುಜುಕಿ ಸೆಲಾರಿಯೋ ಕಾರು ಕೂಡ ಬಹಳಷ್ಟು ಟ್ರೆಂಡ್‌ನಲ್ಲಿದೆ, ಈ ಕಾರು ಎಆರ್‌ಎಐ 34.43km/kg ಮೈಲೇಜ್ ಅನ್ನು ನೀಡಿ ಗ್ರಾಹಕರನ್ನು ಮತ್ತಷ್ಟು ಗಮನ ಸೆಳೆದಿದೆ. ಈ ಕಾರು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ AMT ಗೇರ್‌ಬಾಕ್ಸ್‌ ಆಯ್ಕೆಯೊಂದಿಗೆ ಬರಲಿದ್ದು 1.2-ಲೀಟರ್ ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ. ಉತ್ತಮ ಅನುಭವ ವನ್ನು ಈ ಕಾರು ನೀಡಲಿದೆ

ಮಾರುತಿ ಸುಜುಕಿ ಅಲ್ಟೊ 800 ಇತ್ತೀಚಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದ ವಾಹನಗಳಿಂದಾಗಿ ಆಲ್ಟೋ ಕಾರು ಕಡಿಮೆ ಬೇಡಿಕೆಯಲ್ಲಿತ್ತು, ಆದರೆ ಇದೀಗ ಮತ್ತಷ್ಟು ಸ್ಟೈಲೀ ಲುಕ್‌ನಲ್ಲಿ ಹೊಸ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಮಾರುತಿ ಸುಜುಕಿ ಕಾರುಗಳ ಪೈಕಿ ಮಾರುತಿ ಸುಜುಕಿ ಅಲ್ಟೋ 800 ಕಾರು ಕೂಡ ಒಂದು, ಇದರ ಬೆಲೆ 3.54 ಲಕ್ಷ ರೂಪಾಯಿ ಬೆಲೆಯಿಂದ ಆರಂಭಗೊಂಡು, ಗರಿಷ್ಠ 5.13 ಲಕ್ಷ ರೂಪಾಯಿ ಅನ್ನಲಾಗಿದೆ. ಅಲ್ಟೋ 800 ಕಾರು 796cc ಪೆಟ್ರೋಲ್ ಎಂಜಿನ್ ಸಾಮರ್ಥ್ಯ ಹೊಂದಿದ್ದು 48PS ಪವರ್ ಹಾಗೂ 69Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ, ಇದು ಕೂಡ ಉತ್ತಮ‌ ಸಿ ಎನ್ ಜಿ ಕಾರು ಎನಿಸಿಕೊಂಡಿದೆ.

Maruti Celerio CNG
Image Courtesy: Autocar India

ಮಾರುತಿ ಸುಜುಕಿ ಎರ್ಟಿಗಾ ಸಿಎನ್‌ಜಿ(Maruti Suzuki Ertiga CNG)

ಈ ಕಾರು ನೋಡಲು ಆಕರ್ಷಣ ವಾಗಿದೆ, ಮಾರುತಿ ಸುಜುಕಿ ಎರ್ಟಿಗವು ಇನ್ನೋವಾ ಗಿಂತಲೂ ಕ್ಯುರಾಸಿಟಿ ಯಾಗಿದ್ದು ಹೊಸ ಅನುಭವ ನೀಡಲಿದೆ , ಕಾರಿನೊಳಗೆ ಪರಿಷ್ಕೃತ ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, ಟಚ್‌ಸ್ಕ್ರೀನ್ ಡಿಸ್‌ಪ್ಲೇ ಹೊಂದಿದೆ, 26kmpl ಉತ್ತಮ ಮೈಲೇಜ್ ನೀಡಿದ್ದು, ಇದು ವಿವಿಧ ಬಣ್ಣಗಳ ಆಯ್ಕೆ ಯನ್ನು ಹೊಂದಿದೆ, ಎರ್ಟಿಗಾದ ಬೆಲೆ ರೂ.8,64,000 ಇದ್ದು CNG ಎಂಜಿನ್ 87bhp ಪವರ್ ಮತ್ತು 121.5Nm ಟಾರ್ಕ್ ಅನ್ನು 5-ಸ್ಪೀಡ್ ಸಾಮರ್ಥ್ಯವನ್ನು ಹೊಂದಿದೆ.

ಟಾಟಾ ಟಿಯಾಗೊ ಸಿಎನ್ ಜಿ(Tata Tiago CNG)

ಟಾಟಾ ಟಿಯಾಗೊ ಸಿಎನ್‌ಜಿ ಕಾರು ಕೂಡ‌ ಉತ್ತಮ‌ ಪೀಚರ್ಸ್ ಅನ್ನು ಹೊಂದಿದೆ, ಆಕರ್ಷಕ ವೈಶಿಷ್ಟ್ಯ ದೊಂದಿಗೆ ಈ ಕಾರು ಹೆಚ್ಚು ಬೇಡಿಕೆಯನ್ನು ಕೂಡ ಹೊಂದಿದೆ, ಟಾಟಾ ಟಿಯಾಗೊ ಸಿಎನ್‌ಜಿಯ ಮೈಲೇಜ್ 26.49 ಕಿಮೀ/ಕೆಜಿ, 72 ಬಿಎಚ್‌ಪಿ ಮತ್ತು 95 ಎನ್‌ಎಂ ಟಾರ್ಕ್‌ನೊಂದಿಗೆ ಇದ್ದು, 5-ಸ್ಪೀಡ್ ಮ್ಯಾನುವಲ್ ಹೊಂದಿದೆ, ಟಾಟಾ ಟಿಯಾಗೊ ಸಿಎನ್‌ಜಿ ಬೆಲೆಯು 6.10 ಲಕ್ಷ – 7.53 ಲಕ್ಷ ರೂ. ಇದ್ದು ಉತ್ತಮ ಸಿಎನ್‌ಜಿ ಮೈಲೇಜ್ ಅನ್ನು ಹೊಂದಿದೆ.

Best CNG Cars
Image Courtesy: Autocar India

ಮಾರುತಿ ಸುಜುಕಿ ಇಕೋ(Maruti Suzuki Eeco)

ಮಾರುತಿ ಸುಜುಕಿ Eeco ಕೂಡ‌ ನೋಡಲು ಆಕರ್ಷಕ ವಾಗಿದ್ದು, ಏಳು ಸೀಟರ್ ಕಾರು ಇದಾಗಿದೆ, ಉತ್ತಮ ಮೈಲೇಜ್ ಹೊಂದಿರುವ CNG ಕಾರು ಇದಾಗಿದ್ದು Eeco ಮೈಲೇಜ್ 20.88 km/kg ಇದ್ದು ಹೈ ಸ್ಪಿಡ್ ಟಾರ್ಕ್ ಅನ್ನು ಹೊಂದಿದೆ

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್(Maruti Suzuki Swift Dzire)

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ CNG ಕಾರು ಆಗಿದ್ದು, CNG ಮೈಲೇಜ್ 31.12 km/kg ಆಗಿದೆ ಇದರ ಬೆಲೆ 8.82 ಲಕ್ಷ ಆಗಿದ್ದು, ನೋಡಲು ಕೂಡ ಆಕರ್ಷಕ ವಾಗಿದೆ, ಇದರ ಎಂಜಿನ್ 1.2-ಲೀಟರ್ K12M DualJet ಎಂಜಿನ್‌ನಿಂದ ಚಾಲಿತವಾಗಿದ್ದು ಅದು 77 bhp ಪವರ್ ಮತ್ತು 98.5 Nm ಟಾರ್ಕ್ ಅನ್ನು ನೀಡುತ್ತದೆ ,ಇದರ ಬೇಡಿಕೆ ಕೂಡ ಈಗ ಹೆಚ್ಚಾಗಿದೆ

Best CNG Cars
Image Courtesy: Autocar India

ಮಾರುತಿ ಸುಜುಕಿ ವಿಟಾರಾ ಬ್ರೆಝಾ CNG(Maruti Suzuki Vitara Brezza)

ಮಾರುತಿ ಸುಜುಕಿ ವಿಟಾರಾ ಬ್ರೆಝಾ ಇಂದು ಹೆಚ್ಚು ಮಾರಾಟವಾಗುವ ಕಾರು ಇದಾಗಿದೆ, ಉತ್ತಮ‌ ಟಾರ್ಕ್ ನೀಡುವ ಕಾರು ಇದಾಗಿದ್ದು 91 bhp ಪವರ್ ಮತ್ತು 122 Nm ಟಾರ್ಕ್ ಅನ್ನು ನೀಡುತ್ತದೆ, ಇದು 26.2 ಕಿಮೀ/ ಮೈಲೇಜ್ ನೀಡಲಿದೆ , ಟಾಟಾ ಟಿಯಾಗೊ ಸಿಎನ್‌ಜಿ, ಹ್ಯುಂಡೈ ಸ್ಯಾಂಟ್ರೊ, ಕಾರುಗಳಿಗೂ ಪ್ರತಿ ಸ್ಪರ್ಧಿ ಯಾಗಿದೆ.

ಮಾರುತಿ ಬಲೆನೊ ಸಿಎನ್‌ಜಿ(Maruti Baleno CNG)

ಮಾರುತಿ ಬಲೆನೊ CNG ಐದು ಸೀಟರ್ ಕಾರು ಇದಾಗಿದ್ದು ಈ ಕಾರಿನ ಬೆಲೆಯು ರೂ. 7.50 ಲಕ್ಷ ದಿಂದ 8.50 ಲಕ್ಷ ಆಗಿದೆ, CNG ಎಂಜಿನ್ 88 bhp ಮತ್ತು 113 Nm ಟಾರ್ಕ್ ಅನ್ನು ನೀಡಿ, 26.08 km/kg ಗಿಂತಲೂ ಹೆಚ್ಚು ಮೈಲೇಜ್ ನೀಡುತ್ತದೆ.

Maruti Baleno CNG
Image Courtesy: Autocar India

ಹುಂಡೈ ಗ್ರಾಂಡ್ ಐ10 ನಿಯೋಸ್ ಸಿಎನ್‌ಜಿ(Hyundai Grand I10)

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಮಾರುಕಟ್ಟೆಯಲ್ಲಿ ಉತ್ತಮ‌ಕ್ರೇಜ್ ಅನ್ನು ಹುಟ್ಟಿಸಿದೆ, ಇದರ ಲುಕ್ ಕೂಡ ಆಕರ್ಷಕ ವಾಗಿದ್ದು, ಸಿಎನ್‌ಜಿ ಮೈಲೇಜ್ 32.52 ಕಿಮೀ/ ಆಗಿದೆ. ಗ್ರಾಂಡ್ ಐ10 ನಿಯೋಸ್ ಉತ್ತಮ‌ ವೈಶಿಷ್ಟ್ಯಗಳೊಂದಿಗೆ ಇದ್ದು ಏರ್ ಕಂಡಿಷನರ್, ಆಂಡ್ರಾಯ್ಡ್ ಆಟೋ ಪ್ರೊಜೆಕ್ಟರ್ ಫಾಗ್ ಲ್ಯಾಂಪ್‌ಗಳು ಮತ್ತು ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ವನ್ನು ಹೊಂದಿದೆ

ಒಟ್ಟಿನಲ್ಲಿ ಪ್ರಯಾಣಿಕರಿಗೆ ಉತ್ತಮ‌ಅನುಭವ ದೊಂದಿದೆ ಅನುಕೂಲಕರ ಪ್ರಯಾಣ ನೀಡುವ ಸಿ ಎನ್ ಜಿ ಕಾರುಗಳು ಬಹಳಷ್ಟು ಬೇಡಿಕೆ ಯನ್ನು ಸೃಷ್ಟಿ ಮಾಡಿದೆ ಕಡಿಮೆ ಬಜೆಟ್‌ನಲ್ಲಿ (Low Budget) ನಿಮಗೆ ಸಿ ಎನ್ ಜಿ ಕಾರುಗಳು ಲಭ್ಯವಿದ್ದು ಉತ್ತಮ‌ ಮೈಲೇಜ್ ನೀಡುವ ಕಾರು ಗಳಾಗಿವೆ, ಯಾರೆಲ್ಲ ಸಿ ಎನ್ ಜಿ ಕಾರು ಗಳನ್ನು ಖರೀದಿ ‌ಮಾಡಬೇಕೆಂಬ ಪ್ಲಾನ್ ಮಾಡಿದ್ದಿರೋ ಅವರು ಈ ಕಾರು ಗಳನ್ನು ಖರೀದಿ ಮಾಡಬಹುದು.

Hyundai Grand I10
Image Courtesy: Autocar India