Electric Bike: ಭಾರತದಲ್ಲಿ ಲಭ್ಯವಿರುವ Top 10 ಎಲೆಕ್ಟ್ರಿಕ್ ಬೈಕುಗಳು ಹಾಗೂ ಮೈಲೇಜ್ ವಿವರ

ಇಂದು ಯುವಕರಿಗೆ ಬೈಕ್ ಕ್ರೇಜ್ ಹೆಚ್ಚು, ಅದರಲ್ಲೂ ರೈಡ್ ಹೋಗಲು‌ ಬೈಕ್ ಒಂದು ಇದ್ದರೆ ಯಾವ ಪ್ಲೇಸ್ ಕೂಡ ಬಿಡದೆ ಎಂಜಾಯ್ ಮಾಡ್ಬಿಟ್ಟು ಬರ್ತಾರೆ, ಇಂದು ಅದರಲ್ಲೂ‌ ಪೆಟ್ರೋಲ್ , ಡೀಸೆಲ್‌ ಗೆ ದಿನ‌ದಿಂದ ದಿನಕ್ಕೆ ಬೆಲೆ ಎರಿಕೆ ಯಾಗಿದ್ದು, ಇದೀಗ ಹೆಚ್ಚಾಗಿ ‌ಎಲೆಕ್ಟ್ರಿಕ್(Electric) ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ, ಮಾರುಕಟ್ಟೆ ‌ಗೂ ವಿವಿಧ ಮಾದರಿಯ ಬೈಕ್ ಗಳು ಲಗ್ಗೆ ಇಟ್ಟಿವೆ, ಭಾರತದಲ್ಲಿ ಅತ್ಯುತ್ತಮ ಎಲೆಕ್ಟ್ರಿಕ್ ಬೈಕ್‌ಗಳು ಬಂದಿದ್ದು ಬೈಕ್‌ ಪ್ರೀಯರನ್ನು ಗಮನ ಸೆಳೆದಿವೆ, ಅದರಲ್ಲೂ 2023 ರಲ್ಲಿ ಟಾಪ್ ಎಲೆಕ್ಟ್ರಿಕ್ ಬೈಕ್‌ಗಳ ಮಾಹಿತಿ‌‌‌ ಇಲ್ಲಿದೆ ಅಲ್ಟ್ರಾವೈಲೆಟ್, ರಿವೋಲ್ಟ್, ಒಡಿಸ್ಸೆ, ಹೀಗೆ‌ ಹಲವು ಮಾದರಿಯ ಹೊಸ ಮಾಡೆಲ್ ಬೈಕ್ ಇದೆ,

ಅಲ್ಟ್ರಾವಾಯಿಲೇಟ್‌ F77 (Ultraviolette F77 )

ಅಲ್ಟ್ರಾವಾಯಿಲೇಟ್‌ F77 F77 ಇಂದು ಹೆಚ್ಚು ಬೇಡಿಕೆ ಯಲ್ಲಿರುವ ಬೈಕ್ ಇದಾಗಿದ್ದು, ಎಲೆಕ್ಟ್ರಿಕ್ ಮೋಟರ್ ಸಾಮರ್ಥ್ಯ 29kW ಇದೆ, ನೋಡಲು ಕೂಡ ಬಹಳಷ್ಟು ಆಕರ್ಷಣೀಯ ವಾಗಿದ್ದು, ಇದು ಯುವಕರ ಕ್ರೇಜ್ ಅನ್ನು ಮತ್ತಷ್ಟು ಹೆಚ್ಚು ಮಾಡಿದೆ, 95 Nm ಟಾರ್ಕ್ ಶಕ್ತಿ ನೀಡಿ ಉತ್ತಮ ಚಲಿಸುವ ಸಾಮರ್ಥ್ಯ ಹೊಂದಿದೆ. ಈ ಬೈಕಿನ ರೂ ಬೆಲೆ 5. 50,0 00 ಆಗಿದೆ, ಉತ್ತಮ‌ ಎಲೆಕ್ಟ್ರಿಕ್ ಬೈಕ್ ಇದಾಗಿದ್ದು ಬೈಕ್ ಪ್ರೀಯರನ್ನು ಮತ್ತಷ್ಟು ಸೆಳೆಯಲಿದೆ.

Electric Bike
Image Source: Bike Dekho

ಒಬೆನ್ ರೋರ್ (Oben Rorr)

ಒಬೆರಾನ್ ರೋರ್ ಎಲೆಕ್ಟ್ರಿಕ್ ಮೋಟರ್‌ನಿಂದ ಕೂಡಿದ್ದು, ಇದರಲ್ಲಿ ಉತ್ತಮ‌ ಬ್ಯಾಟರಿ ಪ್ಯಾಕ್‌ ಇದೆ, ಇದರ ಗರಿಷ್ಠ ವೇಗ ಗಂಟೆಗೆ 100 ಕಿ.ಮೀ. ಈ ಬೈಕ್ ಪ್ರತಿ ಚಾರ್ಜ್ ಗೆ 200 ಕಿ.ಮೀ. ಮೈಲೇಜ್ ನೀಡುತ್ತದೆ. ವಿವಿಧ ಕಲರ್ ಗಳಲ್ಲಿ‌ಇದು ಇದ್ದು ಗ್ರಾಹ ಕರನ್ನು ಮತ್ತಷ್ಟು ಸೆಳೆಯಲಿದೆ, ಇದರ ಎಕ್ಸ್ ಶೋ ರೂಂ ಬೆಲೆ 1.02 ಲಕ್ಷ ರೂ.ಇದ್ದು ಉತ್ತಮ ಚಾಯ್ಸ್ ಇದು ಆಗಿದೆ.

ರಿವೋಲ್ಟ್​ ಆರ್​ವಿ 400(Revolt RV 400 )

ಈ ಬೈಕ್ ಕೂಡ‌ ಉತ್ತಮ ಕ್ರೇಜ್ ಹೊಂದಿದ್ದು ಯುವಕರನ್ನು ಮತ್ತಷ್ಟು ಸೆಳೆಯಲಿದೆ, ಒಂದು ಬಾರಿ ಚಾರ್ಜ್ ಮಾಡಿದರೆ ಈ ಬೈಕ್ ಅನ್ನು 150 ಕಿಲೋಮೀಟರ್ ವರೆಗೆ ಪ್ರಯಾಣ ಮಾಡಿ, ಉತ್ತಮ ಅನುಭವ ವನ್ನು ಕೂಡ ಇದು ನೀಡಲಿದೆ, ಬೈಕಿನ ವೇಗ ಗಂಟೆಗೆ 85 ಕಿಲೋಮೀಟರ್. ಬ್ಯಾಟರಿಯನ್ನು ನೀಡಿ, ಚಾರ್ಜ್ ಮಾಡಲು 4.5 ಗಂಟೆಗಳನ್ನು ಪಡೆದು ಕೊಳ್ಳುತ್ತದೆ, ಇದು ಕಲರ್ ನಲ್ಲಿ ರೆಡ್ ಬಹಳಷ್ಟು ಆಕರ್ಷಣ ವಾಗಿದ್ದು ಖರೀದಿ ಕೂಡ ಮಾಡಬಹುದಾಗಿದೆ

Revolt RV 400
Image Source: BikeWale

ಟಾರ್ಕ್ ಕ್ರಾಟೋಸ್ ಆರ್(Torq Kratos)

ಇದು ಕೂಡ ಎಲೆಕ್ಟ್ರಿಕ್ ಬೈಕ್ ನಲ್ಲಿ ಟಾಪ್​ ಎಲೆಕ್ಟ್ರಿಕ್​ ಬೈಕ್​ ಆಗಿದೆ ಇದರ ಬೆಲೆ ರೂ. 1.68 ಲಕ್ಷ. ಆಗಿದ್ದು ರೈಡ್ ಮಾಡಲು ಸೂಕ್ತ, ಟ್ರಿ‌ಪ್ ಹೋಗು ವವರಿಗೂ ಆರಾಮ‌ ರೈಡ್ ಅನುಭವ ವನ್ನು ಇದು ನೀಡಲಿದೆ, ಈ ಬೈಕ್ ಚಾರ್ಜ್ ಮಾಡಿದರೆ 180 ಕಿಲೋಮೀಟರ್ ವರೆಗೆ ಚಲಿಸುತ್ತದೆ.

ಜಾಯ್ ಇ-ಬೈಕ್ ಮಾನ್‌ಸ್ಟರ್ (Joy e-bike Monster) ಉತ್ತಮ ಕ್ರೇಜ್ ಹೊಂದಿರುವ ಬೈಕ್ ಜಾಯ್ ಮಾನ್‌ಸ್ಟರ್. ಇದು ಕೂಡ ಇಂದು ಉತ್ತಮ ಬೇಡಿಕೆ ಯನ್ನು ಹೊಂದಿದೆ, ಇದರ ಬೆಲೆ ಆಫರ್ ಗೆ 1 ಲಕ್ಷ ರೂ.ಇದ್ದು ಈ ಬೈಕ್ ಒಮ್ಮೆ ಚಾರ್ಜ್​ ಮಾಡಿದ್ರೆ 75 ಕಿಮೀ ವರೆಗೆ ಚಲಿಸಬಹುದು. ಆದರೆ ಈ ಬೈಕ್​ನ ವೇಗ ಗಂಟೆಗೆ 25 ಕಿಮೀ ಇದ್ದು ಆರಾಮ ದಾಯಕ ಅನುಭವ ಕೂಡ ನೀಡಲಿದೆ..

Torq Kratos
Image Source: BikeWale

komaki ರೇಂಜರ್ (komaki ranger) ಇದು ಬೈಕ್ ಕೂಡ ಅಗ್ರ ಶ್ರೆಣಿಯನ್ನು ಪಡೆದಿದೆ, ಕೊಮಾಕಿ ರೇಂಜರ್ ಬೈಕ್‌ನ ಬೆಲೆ 1.68 ಲಕ್ಷ ರೂಪಾಯಿ ಆಗಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 220 ಕಿ.ಮೀ.ವರೆಗೆ ಪ್ರಯಾಣ ‌ಮಾಡಬಹುದಾಗಿದ್ದು, ರೈಡ್ ಮಾಡುವ ರಿಗೆ ಉತ್ತಮ ಅನುಭವ ನೀಡಲಿದ್ದು ವಿವಿಧ ಬಣ್ಣ ದಲ್ಲಿ‌ ಇದು ಲಭ್ಯ ವಿದೆ

ಒಟ್ಟಾರೆ ಇಂದು ಎಲೆಕ್ಟ್ರಿಕ್ ವಾಹನಗಳು ಉತ್ತಮ‌ಅನುಭವ ನೀಡಲಿದ್ದು ವಾಹನ ಪ್ರೀಯರ ಬೇಡಿಕೆ ಯನ್ನು ಹೆಚ್ಚು ಮಾಡಿದೆ, ಪೆಟ್ರೋಲ್ ಮತ್ತು ಡೀಸೆಲ್ ವಾಹನ ಅದಕ್ಕೆ ಪರ್ಯಾಯ ಎಂಬಂತೆ ಈ ಎಲೆಕ್ಟ್ರಿಕ್ ವಾಹನಗಳು (Electric Vehicle) ಕ್ರೇಜ್ ಹುಟ್ಟಿಸಿವೆ ಹೇಳಬಹುದು. ಈಗ ಅನೇಕ ವಾಹನ‌ಪ್ರೀಯರು ಈ ಎಲೆಕ್ಟ್ರಿಕ್ ಬೈಕ್ ಮತ್ತು ಕಾರುಗಳನ್ನು ಖರೀದಿ ಮಾಡಿ ಪ್ರಯಾಣ ಬೆಳೆಸುತ್ತಾರೆ