Car Loan: ಕಡಿಮೆ ಬಡ್ಡಿದರಕ್ಕೆ ಕಾರ್ ಲೋನ್ ಹೇಗೆ ಸಿಗುತ್ತೇ? ಬ್ಯಾಂಕ್ ನಿಯಮಗಳೇನು.

ಬಹುತೇಕರ ಜೀವನದ ಪ್ರಮುಖ ಕನಸ್ಸುಗಳಲ್ಲಿ ಒಂದೊಳ್ಳೆ ಕಾರು ಖರೀದಿ ಮಾಡಬೇಕೆಂಬ ಆಸೆಯನ್ನು ಕಾಣಬಹುದು ಹಾಗೆಂದು ಉಳ್ಳವರು ಹಣ ಹೊಂದಾಣಿಕೆ ಮಾಡಿ ಖರೀದಿ ಮಾಡಿದರೆ ಹಣ ಇಲ್ಲದವರು ಸಾಲ ಮಾಡಿ ಖರೀದಿ ಮಾಡುತ್ತಾರೆ. ಕಾರು ಸಾಲದ ಬಡ್ಡಿದರಗಳು ಸರಕಾರದನೀತಿ ನಿಯಮಾನುಸಾರ ಆಗಾಗ ಬದಲಾಗುತ್ತಿರುತ್ತಿದ್ದು ನೀವು ಲೋನ್ ಪಡೆದು ಕಾರು ಖರೀದಿ ಮಾಡಬೇಕೆಂಬ ಆಸೆ ಇದ್ದವರಾಗಿದ್ದರೆ ಈ ಒಂದು ಮಹತ್ವದ ಮಾಹಿತಿಯನ್ನು ಸಂಪೂರ್ಣ ಓದಿ.

ಇಂದು ಕಾರುಗಳು ದುಬಾರಿ ವಸ್ತುಗಳಾದರೂ ಕೂಡ ಕೊಳ್ಳ ಬೇಕೇಂಬ ಮನಸ್ಸು ಇದ್ದವರಿಗೆ ಅದೆಷ್ಟು ದುಬಾರಿಯಾದರೂ ಕೊಳ್ಳಲೇ ಬೇಕು ಎಂಬ ಮನಸ್ಸು ಇರುತ್ತದೆ. ಆಟೋ ಡ್ರೈವ್, ಪೆಟ್ರೋಲ್ (petrol, diesel, auto drive) ಹಾಗೂ ಡಿಸೆಲ್ ಅದ್ಯಾವ ಆವೃತ್ತಿ ಇದ್ದರೂ ಅದರ ಬೆಲೆ ಹಾಗೂ ಇತರ ಫೀಚರ್ ಮೇಲೆ ನಿಮ್ಮ ಆಯ್ಕೆ ನಿರ್ಧಾರವಾಗಿರುವುದು ಹಾಗಾಗಿ ಯಾವ ಕಾರು ಖರೀದಿಗೆ ಸೂಕ್ತ ಎಂಬುದನ್ನು ನಾವು ಮನಗಂಡರೂ ಲೋನ್ ಮಾಡುವವರು ಮೊದಲು ಎಲ್ಲಿ ಸಾಲ ಮಾಡಬೇಕು ಯಾವುದು ಸುರಕ್ಷಿತ ಇನ್ನಿತರ ಮಹತ್ವದ ಮಾಹಿತಿಯನ್ನು ಅರಿತಿರಬೇಕು. ಇಂದು ಇಂತಹ ಸಾಲ ನೀಡಲು ಅನೇಕ ಲೋನ್ ಆ್ಯಪ್ , ಕಂಪೆನಿ ಹಾಗೂ ಬ್ಯಾಂಕ್ ಗಳು (loan app, company and bank) ಮುಂದಾಗಿದೆ. ಹಾಗಾಗಿ ಎಲ್ಲಿ ಸಾಲ ಮಾಡಬೇಕು ಎಂಬ ಬಗ್ಗೆ ವ್ಯವಧಾನ ಕೂಡ ಇರಬೇಕು.

Car loan
Image Source: Kannada News Today

ಎಲ್ಲ ಕಾರಿಗೂ ಲೋನ್ ಇರಲಿದೆ

ಹೊಸ ಕಾರು ಖರೀದಿ ಮಾಡೋರಿಗೆ ಈ ಅನುಮಾನ ಸಾಮಾನ್ಯವಾಗಿ ಇರುತ್ತದೆ. ಜೀಪ್ , SUV, NUV, Sedon, Hatch back ಇನ್ನಿತರ ಯಾವುದೆ ವಿಧವಾದ ಕಾರನ್ನು ಖರೀದಿ ಮಾಡಲು ಸಾಲ ಸಿಗಲಿದೆ. ಇನ್ನು ಇಙತಹ ಕಾರಿಗಳಿಗೆ ಕಂಪೆನಿಯಿಂದ ಕೆಲ ಬಾರಿ ಆಫರ್ ಇರಲಿದೆ ಮತ್ತು ಬಹುತೇಕ ಕಂಪೆನಿಯ ಕಾರಿ ಇಎಂ ಐ ಖರೀದಿಯನ್ನು ಬೆಂಬಲಿಸುತ್ತಲೇ ಬಂದಿದೆ. ನೀವು ಸಾಲ ಪಡೆಯುವಾಗ ಬ್ಯಾಂಕ್ ಅಥವಾNBFc ಯಿಂದ ಪಡೆಯುತ್ತಿರಲಿ, ಉತ್ತಮ ಬಡ್ಡಿದರ ಮತ್ತು ಆಕರ್ಷಕ ಸಾಲದ ದರ ಎಲ್ಲವೂ ನಿಮಗೆ ಸಿಗಲಿದೆ. ಆದರೆ ಸಾಲ ಪಡೆಯುವ ಮುನ್ಮ ಅನೇಕ ವಿಚಾರಗಳ ಬಗ್ಗೆ ನೀವು ಗಮನಹರಿಸಬೇಕು. ಈ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

ಯಾರು ಅರ್ಹರು?

ಕಾರು ಲೋನ್ ಪಡೆಯಲು ಯಾರು ಅರ್ಹರು ಮತ್ತು ಅನರ್ಹರು ಎಂಬುದೇ ಒಂದು ಅನುಮಾನವಾಗಿದ್ದು ಆಯಾ ಸಾಲ ವಿತರಣಾ ವ್ಯವಸ್ಥೆಯ ಆಧಾರದ ಮೇಲೆ ಅರ್ಹರು ಯಾರೆಂಬುದು ತಿಳಿದು ಬರುತ್ತದೆ. ಹಾಗಿದ್ದರೂ ದೇಶಾದ್ಯಂತ ಇರುವ ಸಾಮನ್ಯ ನಿಯಮದ ಆಧಾರದ ಮೇಲೆ ಅರ್ಹತೆ ಏನೆಂಬುದನ್ನು ಈ ಕೆಳಕಂಡಂತೆ ತಿಳಿಸಲಾಗಿದೆ.
*18ವರ್ಷದಿಂದ 75ವರ್ಷ ಒಳಗಿರಬೇಕು.
*ಕನಿಷ್ಠ ನಿವ್ವಳ ಮಾಸಿಕ ಆದಾಯ 20,000ರೂ.
*ಪ್ರಸ್ತುತ ಸ್ವ ಉದ್ಯೋಗ ಅಥವಾ ಕಂಪೆನಿಯಲ್ಲಿದ್ದರೆ ಒಂದು ವರ್ಷದ ವೇತನ ಸಂಬಂಧಿತ ಮಾಹಿತಿಯನ್ನು ಹೊಂದಿರಬೇಕು. ಇಷ್ಟು ಇದ್ದು ಭಾರತೀಯ ಮೂಲ ಎನ್ನುವ ದಾಖಲೆ ಇದ್ದರೆ ಆಗ ನೀವು ಈ ಒಂದು ಸಾಲ ಪಡೆಯುವ ಅರ್ಹರು ಎಂದು ಉಲ್ಲಂಘಿಸಬಹುದು.

Car loan
Image Source: Hindustan Times

ಯಾವೆಲ್ಲ ದಾಖಲಾತಿ ಅಗತ್ಯ

ಕಾರ್ ಲೋನ್ ಪಡೆಯುವಾಗ ಕೆಲ ಅಗತ್ಯ ದಾಖಲೆಗಳನ್ನು ನೀವು ನೀಡಲೇ ಬೇಕಾಗುತ್ತದೆ ಹಾಗಾದರೆ ಆ ದಾಖಲಾತಿಗಳಯ ಯಾವುವು ಇತರ ಮಾಹಿತಿ ಈ ಕೆಳಗಿನಂತಿದೆ.
*ವಿಳಾಸೆ ಪುರಾವೆ.
*ಚಾಯಾಚಿತ್ರ, ಗುರುತಿನ ಚೀಟಿ
*KYC ದಾಖಲೆಗಳು.
*ಬ್ಯಾಂಕ್ ಹೇಳಿಕೆ
*ಆದಾಯ ಪುರಾವೆ
*ಉದ್ಯೋಗಸ್ಥರಾಗಿದ್ದರೆ ಒಂದು ವರ್ಷದ ಸಂಬಳ ದಾಖಲಾತಿ
*ಆದಾಯ ತೆರಿಗೆ ರಿಟನ್ಸ್ ಮಾಹಿತಿ
* ವ್ಯಾಪಾರದ ಸ್ಥಿರತೆ ಪುರಾವೆ
*ಉದ್ಯೋಗ ಸ್ಥಿರತೆಯ ಪುರಾವೆ
*ಮಾಲೀಕತ್ವದ ಪುರಾವೆ
*ಇತರೆ ದಾಖಲೆಗಳು ಅಗತ್ಯವಾಗಿದೆ.

ಬಡ್ಡಿದರಕ್ಕೂ ಇದೆ ಮಾನದಂಡ

ಕಾರು ಲೋನ್ ಬಡ್ಡಿದರ ಪಡೆಯಬೇಕೆಂಬ ಕನಸ್ಸು ಹೊಂದಿದ್ದವರಿಗೆ ಅನೇಕ ಅಂಶ ಪರಿಣಾಮ ಬೀರಲಿದೆ. ವಯಸ್ಸು, ಆದಾಯ, ಉದ್ಯೋಗದಾತರು, ಕ್ರೆಡಿಟ್ ಸ್ಕೋರ್ ಉತ್ಯಾದಿ ಮಾಹಿತಿಯ ಆಧಾರದ ಮೇಲೆ ಸಾಲ ನೀಡುವ ಮೇಲಿನ ಬಡ್ಡಿದರಗಳು ವಿಭಿನ್ನವಾಗಿರಲಿದೆ. ಬ್ಯಾಂಕ್ ಅಥವಾ NBFC ಯಿಂದ ಸಾಲ ಪಡೆಯುವಾಗ ಈ ಕೆಳಗಿನ ಅಂಶ ನಿಮ್ಮ ಬಡ್ಡಿದರಗಳ ಮೇಲೆ ಪ್ರಮುಖ ಪರಿಣಾಮ ಬೀರಲಿದೆ.

ಆದಾಯ ಸ್ಥಿತಿ

ಅಧಿಕ ಆದಾಯ ಇದ್ದವರಿಗೆ ಅಧಿಕ ಸಾಲ ನೀಡಲು ಬ್ಯಾಂಕ್ ಮುಂಬರುತ್ತದೆ ಅದರಿಂದ ಮರುಪಾವತಿ ಕೂಡ ಶೀಘ್ರ ಸಿಗುತ್ತದೆ ಎಂಬ ಒಂದು ಕಾತರಿ ಕೂಡ ಇರುವುದು. ಉದ್ಯೋಗಿ ಆಗಿದ್ದರೆ ಪ್ರತಿ ತಿಂಗಳ ಸಂಬಳ ಬರುತ್ತಿದ್ದಂತೆ ಇಎಂಐ ಕಟ್ ಆಗಬಹುದು ಆದರೆ ಸ್ವ ಉದ್ಯೋಗಿ ಯಾಗಿದ್ದರೆ ಆತನ ಹಣ ಕಾಸಿನ ಸ್ಥಿತಿ ಕಂಡು ಸಾಲ ನೀಡುತ್ತಾರೆ. ಆದಾಯ ಅಧಿಕ ಇದೆ ಎಂದು ಅಧಿಕ ಸಾಲ ಕೇಳಿ ಪಡೆದರೆ ಅಧಿಕ ಬಡ್ಡಿದರ ಬೀಳುವ ಸಾಧ್ಯತೆ ಇದೆ.

ವಯಸ್ಸು

ಸಾಲ ಪಡೆಯುವವರಿಗೆ ಎಷ್ಟು ವಯಸ್ಸು ಎಂಬ ಆಧಾರದ ಮೇಲೆ ಕೂಡ ಸಾಲದ ಮೇಲಿನ ಬಡ್ಡಿದರ ಇನ್ನಿತರ ಲಾಭ ಪೂರಿತ ಅಂಶಗಳು ಸಿಗುತ್ತದೆ. ಚಿಕ್ಕ ವಯಸ್ಸಿನಲ್ಲಿರುವ ಯುವಕರಿಗೆ ಸಾಲ ಮರುಪಾವತಿ ಮಾಡಲು ಹುಮ್ಮಸ್ಸು ಇರುವುದು ಹಾಗೇ ಸಾಲ ಮರುಪಾವತಿಗೆ ಇಂತಿಷ್ಟು ಸಮಯ ಎಂದು ನೀಡಿದರೂ ಕೂಡ ಮರುಪಾವತಿ ಮಾಡುವವರು ತಡ ಮಾಡಿದರೆ ಅಧಿಕ ಬಡ್ಡಿ ಹೊರೆ ಕೂಡ ಬೀಳಲಿದೆ. ವಯಸ್ಸು ಅಧಿಕ ಇದ್ದವರಿಗೆ ಸಾಲ ನೀಡಿ ಅವರಿಗೆ ವಯೋಸಹಜ ಖಾಯಿಲೆ ಬಂದಾಗ ಇದು ಬ್ಯಾಂಕ್ ಅಥವಾ ಸಂಸ್ಥೆ ಜಾಮೀನು ಹಾಕಿದವರ ಹಿಂದೆ ಬೀಳಬೇಕಾಗುತ್ತದೆ.

ಕ್ರೆಡಿಟ್ ಸ್ಕೋರ್

ಇದು ಸಾಲ ಪಡೆಯುವಾಗ ಬ್ಯಾಂಕ್ ಒಂದು ಪ್ರಮುಖವಾಗಿ ಗಮನಿಸುವ ಒಂದು ಅಂಶ ಎಂದು ಹೇಳಬಹುದು.ಉತ್ತಮ ಕ್ರೆಡಿಟ್ ಸ್ಕೊರ್ ಹೊಂದಿದ್ದಾರೆ ಎಂದರೆ ಸಾಲ ಮರುಪಾವತಿ ಮಾಡಲು ಅಷ್ಟೇ ವೇಗದಲ್ಲೇ ಸಾಲ ವಾಪಾಸ್ಸು ನೀಡುತ್ತಾರೆ ಎಂದರ್ಥ. ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಸಾಲ ಎಷ್ಟು ನೀಡಬೇಕು ಬಡ್ಡಿ ಎಷ್ಟು ಎಂಬ ಇತರ ಅಂಶಗಳು ನಿರ್ಧಾರವಾಗಲಿದೆ.

ಸಾಲದ ಅವಧಿ

ಸಾಲದ ಅವಧಿ ಧೀರ್ಘ ಅಥವಾ ಅಲ್ಪ ಎಂಬ ಆಧಾರ ಮೇಲೆ ಕೆಲ ನಿಯಮ ಬಡ್ಡಿಯ ಮೇಲೆ ಪರಿಣಾಮ ಬೀರಲಿದೆ. ಈ ಮೂಲಕ ಧೀಘಾವಧಿ ಸಾಲಕ್ಕೆ ಅಧಿಕ ಬಡ್ಡಿ ಹಾಗೂ ಅಲ್ಪಾವಧಿಗೆ ಕಡಿಮೆ ಬಡ್ಡಿ ಇರುವ ಸಾಧ್ಯತೆ ಇದೆ. ಇದು ಕೂಡ ಸಾಲ ಪಡೆಯುವವರು ತಿಳಿಯಬೇಕು.

ವಾಹನದ ಮಾದರಿ ಮತ್ತು ಬಳಕೆ

ಯಾವ ಮಾದರಿ ಕಾರನ್ನು ನೀವು ಖರೀದಿ ಮಾಡುತ್ತೀರಿ ಎಂಬ ಆಧಾರದ ಮೇಲೆ ಕೂಡ ಕೆಲ ಬಡ್ಡಿದರ ನಿರ್ಧಾರ ಆಗುವುದು. ಅದು ಈಗಷ್ಟೇ ಮಾರುಕಟ್ಟೆಗೆ ಬಂದ ಕಾರಾದರೆ ಅದಕ್ಕೆ ಬೇಡಿಕೆ ಅಧಿಕ ಇರುವ ಕಾರಣ ಬೆಲೆ ತುಂಬಾ ಹೆಚ್ಚಾಗಿರುತ್ತದೆ ಹಾಗೇ ಸಾಲ ಕೂಡ ಅಧಿಕ ಬೇಕು ಬಡ್ಡಿಯೂ ಅಧಿಕವಾಗುತ್ತದೆ ಆದರೆ ನೀವು ಹಳೆಯ ಮಾಡಲ್ ಕಾರು ಖರೀದಿ ಮಾಡುವವರಾದರೆ ಕಡಿಮೆ ಮೊತ್ತ ಕಡಿಮೆ ಬಡ್ಡಿ ಸಿಗಲಿದೆ. ಬಳಸಿದ ಕಾರುಗಳು ಹೆಚ್ಚಾಗಿ ಹೆಚ್ಚಿನ ಬಡ್ಡಿದರ ಬರಲಿದೆ ಎನ್ನಬಹುದು.

Car loan
Image Source: Carwale

ಸಂಸ್ಥೆಯ ಉದ್ಯೋಗದ ಪರಿಣಾಮ

ನೀವು ಪ್ರತಿಷ್ಠಿತ ಕಂಪೆನಿಯಲ್ಲಿ ಉದ್ಯೋಗಸ್ಥರಾಗಿದ್ದರೆ ನಿಮಗೆ ಅಧಿಕ ಪ್ರಾಮುಖ್ಯತೆ ನೀಡುತ್ತಾರೆ. ಕಾರು ಖರೀದಿ ಮಾಡಬೇಕೆಂದು ಸಾಲ ಮಾಡುವವರ ಉದ್ಯೋಗವು ಪ್ರತಿಷ್ಠಿತ ಕಂಪೆನಿಯಲ್ಲಿದ್ದರೆ ಸಾಲ ಮರುಪಾವತಿ ಕೂಡ ಇನ್ನು ಮುಂದೆ ಸುಲಭ ವಿಧಾನದಲ್ಲೆ ಆಗಲಿದ್ದು ಇದು ಕೂಡ ಪರಿಗಣಿಸಲ್ಪಡುವ ಒಂದು ಅಂಶ ಎನ್ನಬಹುದು.

ಉತ್ತಮ ಗ್ರಾಹಕನಾಗಿದ್ದರೆ

ಅನೇಕ ವರ್ಷದಿಂದ ನೀವು ಸಾಲ ಪಡೆಯುವ ಬ್ಯಾಂಕಿನ ಗ್ರಾಹಕನಾಗಿದ್ದರೆ ನಿಮ್ಮ ವ್ಯವಹಾರ ಆಡಳಿತ ಎಲ್ಲ ಪರಿಗಣಿಸಿ ಸಾಲ ನೀಡಲಾಗುವುದು. ನಿಮ ಕ್ರೆಡಿಟ್ ಕಾರ್ಡ್ ಶುಲ್ಕ, ನಿಮ್ಮ ಆರ್ಥಿಕ ಪರಿಸ್ಥಿತಿ ಪರಿಶೀಲನೆ ಮಾಡಿ ಬಡ್ಡಿದರದ ಮೇಲೆ ಸಾಲ ನೀಡಲಾಗುವುದು.

ಸಹ ಅರ್ಜಿದಾರರ ಆರ್ಥಿಕ ವ್ಯವಸ್ಥೆ

ನೀವು ಅರ್ಜಿ ಸಲ್ಲಿಸುವಾಗ ನಿಮ್ಮ ಕುಟುಂಬದ ಇನ್ನೊಬ್ಬರ ಆದಾಯದ ಮೇಲೆ ಕೂಡ ನಿಮಗೆ ಅಧಿಕ ಸಾಲ ನೀಡುವ ಸಾಧ್ಯತೆ ಇದೆ. ಅವರನ್ನು ಸಹ ಅರ್ಜಿ ದಾರರು ಎಂದು ಪರಿಗಣಿಸಿ ಇಬ್ಬರ ಆದಾಯ ಮರುಪಾವತಿ ಆಧಾರದ ಮೇಲೆ ಸಾಲ ನೀಡಲಾಗುವುದು.

ಡೌನ್ ಪೇಮೆಂಟ್ ಅಧಿಕ

ನೀವು ಉಳಿತಾಯ ಮಾಡಿದ್ದ ಹಣದಿಂದ ನಿಮ್ಮ ಕಾರು ಖರೀದಿ ಮಾಡಲು ಡೌನ್ ಪೇಮೆಂಟ್ ನೀಡಿದರೆ ಉಳಿದ ಬಾಕಿ ಮೊತ್ತಕ್ಕೆ ಮಾತ್ರ ಸಾಲ ಅವಲಂಬಿ ಆಗುವಿರಿ ಆಗ ಸಾಲದ ಪ್ರಮಾಣ ಹಾಗೂ ಬಡ್ಡಿ ಕೂಡ ಕಡಿಮೆ ಇರುವುದು ಈ ನಿಟ್ಟಿನಲ್ಲಿ ಕೂಡ ನೀವು ಅಧಿಕ ಡೌನ್ ಪೇಮೆಂಟ್ ಮಾಡುವವರಾದರೆ ಉತ್ತಮ ಎನ್ನಬಹುದು.
ಅದೇ ರೀತಿ ನೀವು ಈ ಹಿಂದೆ ಸಾಲ ಪಡೆದವರಾಗಿದ್ದರೆ ಆಗ ನೀವು ಅದರ ನಿರ್ವಹಣೆ ಹೇಗೆ ಮಾಡಿದ್ದೀರಿ ಎಂಬುದನ್ನು ಸಹ ಇಲ್ಲಿ ಲಕ್ಕಾಚಾರ ಮಾಡಲಾಗುತ್ತದೆ.

ನೀವು ಮಾಡಬೇಕಾದ ಜವಾಬ್ದಾರಿ

* ಬ್ಯಾಂಕ್ ನಿಮ್ಮ ಕ್ರೆಡಿಟ್ ಸ್ಕೋರ್ ನೋಡುವ ಕಾರಣ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಲು ಹಳೆ ಮೊತ್ತಪಾವತಿ ಮಾಡುವುದು ಇತರ ಪ್ರಕ್ರಿಯೆ ಮಾಡಬೇಕು. ಕ್ರೆಡಿಟ್ ಸ್ಕೋರ್ ಸುಧಾರಿಸಿದರೆ ಮಾತ್ರವೇ ಸಾಲ ಸಿಗುವ ಕಾರಣ ಈ ಅಂಶ ನೆಗ್ಲೆಟ್ ಮಾಡಬೇಡಿ.
*ಮೊದಲೇ EMI ಲೆಕ್ಕಾಚಾರ ಮಾಡಿದ್ದ ಬಳಿಕವೇ ನೀವು ಸಾಲ ಪಡೆಯಲು ಮುಂದಾಗಿ.
*ಕಾರು ವಿಮಾ ಮೊತ್ತವು ದುಬಾರಿ ಆಗಿರುವ ಕಾರಣ ಅದರ ಲೆಕ್ಕಾಚಾರ ಮೊದಲೇ ಮಾಡುವುದು ಅತ್ಯಂತ ಮುಖ್ಯ ಸಂಗತಿಯಾಗಿದೆ.
*ಕಾರು ಖರೀದಿ ಮಾಡುವ ಮುನ್ನ ದೀರ್ಘಾವಧಿ ಉಚಿತ ನಿರ್ವಹಣೆ ಹಾಗೂ ವಾರಂಟಿಯನ್ನಿ ನೀವು ಮೊದಲೇ ಲೆಕ್ಕಾಚಾರ ಮಾಡಬೇಕು.

ಪೂರ್ವ ಪಾವತಿ

ನಿಮ್ಮ ಬಳಿ ಉಳಿಕೆ ಹಣ ಇದ್ದರೆ ಅದನ್ನು ಬಡ್ಡಿ ಬೆಳೆಯಲು ಬಿಡದೇ ಮೊದಲೆ ಪಾವತಿ ಮಾಡಿ ಲೋನ್ ಕ್ಲೀಯರ್ ಮಾಡಬಹುದು. ಅದೇ ರೀತಿ ಕೆಲವೊಮ್ಮೆ ಮೊದಲೇ ಪಾವತಿ ಮಾಡಿದರೂ ಕೆಲ ಪ್ರಮುಖಬಡ್ಡಿ ದರ ಹಾಗೂ ಇಎಂಎ ಪಾವತಿ ಮಾಡಬೇಕಾಗುತ್ತದೆ. ಸಾಲದ ಮೇಲಿನ ಮರುಪಾವತಿ ನೀಡಿದಾಗ ಸ್ವತ್ತು ಮರು ಸ್ವಾದೀನಕ್ಕೆ ದಂಡ ಕೂಡ ವಿಧಿಸಲಾಗುತ್ತದೆ.

ಟಾಪ್ ಅಪ್ ಕಾರ್ ಲೋನ್

ನೀವು ಹೆಚ್ಚುವರಿಯಾಗಿ ಲೋನ್ ಪಡೆದು ಮದುವೆ, ವಿದ್ಯಾಭ್ಯಾಸ, ಮನೆ, ವೈದ್ಯಕೀಯ ಇನ್ನಿತರ ಖರ್ಚಿಗಾಗಿ ಬಳಸಿದರೆ ಆಗ ಅದು ಟಾಪ್ ಅಪ್ ಕಾರ್ ಲೋನ್ ಎಂದು ಪರಿಗಣಿಸಲಾಗುತ್ತದೆ. ಇಂತಹ ಲೋನ್ ಮಾಡಲು ಕೆಲ ನಿರ್ದಿಷ್ಟ ಮಾನದಂಡವಿದೆ ಮತ್ತು ಕನಿಷ್ಠ ದಾಖಲಾತಿಗಳನ್ನು ಬ್ಯಾಂಕ್ ಪರಿಗಣಿಸುತ್ತದೆ.

ಕಾರು ರಿಫೈನಿಂಗ್ಸ್

ಹಿಂದಿನ ಕಾರಿನ ಹಳೆ ಸಾಲ ತೀರಿಸಲು ಹೊಸದಾಗಿ ಮಾಡುವ ಸಾಲಕ್ಕೆ ಕಾರು ರಿಫೈನಿಂಗ್ ಎಂದು ಕರೆಯುತ್ತಾರೆ. ಇಲ್ಲಿ ಕಡಿಮೆ ಬಡ್ಡಿದರದ ದೀರ್ಘಾವಧಿಯ ಸಾಲಗಳು ನಿಮಗೆ ದೊರೆಯಲಿದೆ. ಇದನ್ನು ಮಾಸಿಕ ಇಎಂಐ ಕಂತಿನ ಪ್ರಕಾರವಾಗಿ ಬರಿಸಲು ಸಾಧ್ಯವಿದೆ‌. ಆದರೆ ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಒಟ್ಟಾರೆಯಾಗಿ ಒಂದೊಳ್ಳೆ ಕಾರು ಖರೀದಿ ಮಾಡಬೇಕೆಂಬ ಮನಸ್ಸು ಹೊಂದಿದ್ದವರು ಕೇವಲ ಕಾರು ಫೀಚರ್ಸ್ ನೋಡಿದರಷ್ಟೇ ಸಾಲದು ತಾವು ಯಾವ ಸಾಲ ಪಡೆದರೆ ಸೂಕ್ತ ಎಂಬ ಬಗ್ಗೆ ತಿಳಿದಿರಲೂ ಬೇಕು ಈ ಮಾಹಿತಿ ಇಷ್ಟ ಆದಲ್ಲಿ ಲೈಕ್ ಮಾಡುವುದನ್ನು ಮರೆಯದಿರಿ.