WhatsApp New Rule: ಚಾಟಿಂಗ್ ನಲ್ಲಿ ಹೊಸ ವಿಶೇಷತೆ ಪರಿಚಯಸಿದ ವಾಟ್ಸಾಪ್

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಮುಂದುವರೆದಿದ್ದು, ಈ ತಂತ್ರಜ್ಞಾನದಿಂದ ಅನೇಕ ರೀತಿಯ ಉಪಯೋಗಗಳಿದೆ. ಹೀಗೆ ಮೊಬೈಲ್ ಫೋನ್‌ನಲ್ಲಿ ಹೊಸ ರೀತಿಯ ಆವಿಷ್ಕಾರವನ್ನು ತರುತ್ತಿದ್ದು ಎಲ್ಲಾ ಕ್ಷೇತ್ರಗಳಲ್ಲಿ ಮೊಬೈಲ್ ಪೋನ್ ಉಪಯೋಗಿಸುವುದಕ್ಕೆ ಸಹಕಾರಿಯಾಗಿದೆ.
ವಾಟ್ಸ್ ಆಪ್ ನ ಪ್ರಾಮುಖ್ಯತೆ:
ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವಾಟ್ಸ್ ಆಪ್ ಒಂದು ಪ್ರತಿಯೊಬ್ಬರು ಉಪಯೋಗಿಸುವ ಅಪ್ಲಿಕೇಶನ್(Application) ಆಗಿದ್ದು ನಮ್ಮ ದಿನ ನಿತ್ಯದ ಜೀವನದಲ್ಲಿ ಬಹಳ ಅಗತ್ಯವಾಗಿದೆ. ಈ ವಾಟ್ಸ್ ಆಪ್(Whatsapp) ಎನ್ನುವ ಅಪ್ಲಿಕೇಶನ್ ನಲ್ಲಿ ಕೇವಲ ಆತ್ಮೀಯರೊಂದಿಗೆ ಚಾಟ್(Chat) ಮಾಡುವುದಲ್ಲದೆ ವೀಡಿಯೋ ಕಾಲ್, ಆಡಿಯೋ ಕಾಲ್ ಹೀಗೆ ಮುಂತಾದ ರೀತಿಯಲ್ಲಿ ಇದು ದೂರ ಇರುವುವರ ಜೊತೆ ನಮ್ಮ ಸಂಬಂಧವನ್ನು ಇನ್ನಷ್ಟು ಬೆಸೆಯುವಂತೆ ಮಾಡಲು ಸಹಕಾರಿಯಾಗಿದೆ.

ವಾಟ್ಸ್ ಆಪ್ ನಲ್ಲಿ ಮುಂದುವರಿದ ಆವಿಷ್ಕಾರ:
ಹೌದು ಸ್ನೇಹಿತರೇ, ವಾಟ್ಸ್ ಆಪ್ ನಲ್ಲಿ ದಿನೇ ದಿನೇ ಹೊಸ ಆವಿಷ್ಕಾರಗಳು ಕಂಡುಬರುತ್ತಿದ್ದು, ನಿಮಗೆಲ್ಲ ತಿಳಿದಿರುವ ಹಾಗೆ
ವಾಟ್ಸ್ಯಾಪ್ ನಲ್ಲಿ ಆಡಿಯೋ ಕಾಲ್ ಸಹ ಒಂದಾಗಿದೆ. ಆದರೆ ನೀವು ಬೇರೆ ಕೆಲಸಗಳನ್ನು ಮಾಡುವಾಗ ಕಾಲ್ ಅಟೆಂಡ್ ಮಾಡಲು ಆಗದಿದ್ದಾಗ ರಿಪ್ಲೈ ವಿತ್ ಮೆಸೇಜ್ ಎನ್ನುವ ಆಪ್ಷನ್ ಇದ್ದು ನೀವು ಕಾಲ್ ಮಾಡಿದವರಿಗೆ ಸಂದೇಶವನ್ನು ತಲುಪಿಸಬಹುದಾಗಿದೆ. ನಿಮ್ಮ ವಾಟ್ಸ್ಯಾಪ್ ಅಪ್ಡೇಟ್ ಮಾಡಿ ಈ ಫೀಚರ್ ಪಡೆದುಕೊಳ್ಳಿ.