Tata Punch CNG: ಮಾರುಕಟ್ಟೆಗೆ ಬಂತು ಟಾಟಾ ಪಂಚ್ CNG, ಇಲ್ಲಿದೆ ವಿಶೇಷತೆಗಳು

Image Credit: Carwale

TATA Punch CNG: ಭಾರತದ ಬಹು ದೊಡ್ಡ ಮಾರ್ಕೆಟ್ ಬೇಡಿಕೆಯನ್ನು ಹೊಂದಿರುವ ಟಾಟಾ (Tata Motors) ಮೋಟಾರ್ಸ್ ಇತ್ತೀಚಿಗೆ ಆಟೋ ಎಕ್ಸ್ ಪೋ 2023ರಲ್ಲಿ ತನ್ನ ಸಿ ಎನ್ ಜಿ ರೂಪಾಂತರಗಳ (CNG)ಎರಡು ಕಾರುಗಳನ್ನ ಪ್ರದರ್ಶಿಸಿದೆ.

ಈಗಾಗಲೇ ಜನರ ಕೈ ಸೇರಿರುವ ಆಲ್ಟೋಸ್ ಸಿಎನ್ ಜಿ ಜನರ ಮೆಚ್ಚುಗೆಯನ್ನು ಗಳಿಸಿಕೊಂಡಿದ್ದು ಇದೀಗ ಟಾಟಾ ಪಂಚ್(Tata Punch) ಸೆಟ್ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯ.

ಸ್ಲೈಡ್ ಟೆಸ್ಟಿಂಗ್ ನಲ್ಲಿಯೂ ಕೂಡ ಪಾಸ್ ಆಗಿರುವ ಪಂಚ್ ಮೈಕ್ರೋ ಎಸ್ ಯುವಿ ಜೂನ್ ಜುಲೈ ಹೊತ್ತಿಗೆ ಗ್ರಾಹಕರ ಕೈ ಸೇರಬಹುದು. ಜೂನ್ ಆರಂಭದಲ್ಲಿ ಬುಕಿಂಗ್ ತೆರೆಯಲಾಗುವುದು ಎಂದು ಕಂಪನಿ ತಿಳಿಸಿದೆ.

ಡುಯಲ್ ಸಿ ಎನ್ ಜಿ ಟ್ಯಾಂಕ್ ಸೆಟಪ್:
ಇದು ಎರಡು ಟ್ಯಾಂಕುಗಳನ್ನು ಹೊಂದಿರುವ ಸಿ ಎನ್ ಜಿ ರೂಪಾಂತರವಾಗಿದ್ದು ಇದರ ಸಾಮರ್ಥ್ಯ ಸುಮಾರು 60 ಕೆಜಿಗಳಷ್ಟು. ಇನ್ನು ಪ್ರಯಾಣಿಕರ ಲಗೇಜ್ ಇಡಲು ಸಾಧ್ಯವಾಗುವ ರೀತಿಯಲ್ಲಿ ಟ್ರಂಕ್ ವಿನ್ಯಾಸವನ್ನು ಕೂಡ ಮಾಡಲಾಗಿದೆ.

ಕಾರಿನ ವಿಶೇಷತೆ

ಈ ಕಾರಿನ ವೈಶಿಷ್ಟ್ಯತೆ ಬಗ್ಗೆ ಹೇಳುವುದಾದರೆ ಆರು ಏರ್ ಬ್ಯಾಗ್ ಗಳನ್ನು ಸುರಕ್ಷತೆಯ ದೃಷ್ಟಿಯಿಂದ ಅಳವಡಿಸಲಾಗಿದೆ. ಎಲೆಕ್ಟ್ರಿಕ್ ಸೆಂಟ್ರಲ್ ಪ್ರಾಜೆಕ್ಟರ್, ಹೆಡ್ ಲ್ಯಾಂಪ್, 16 ಇಂಚಿನ ಅಲಾಯಿ ವೀಲ್ ಗಳು ಹಿಂಭಾಗದಲ್ಲಿ ಎಸಿ ವೆಂಟ್ ಮೊದಲಾದ ವೈಶಿಷ್ಟ್ಯಗಳನ್ನು ಇದರಲ್ಲಿ ಕಾಣಬಹುದು.

ಟಾಟಾ ಪಂಚ್ ಸಿ ಎನ್ ಜಿ ಎಂಜಿನ್!


ಇದರಲ್ಲಿ 1.2 ಲೀಟರ್ 3 ಸಿಲಿಂಡರ್ ಎಂಜಿನ್ ಅನ್ನು ಕಾಣಬಹುದು ಐದು ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಕೂಡ ಅಳವಡಿಸಲಾಗಿದ್ದು 86 ಬಿ ಹೆಚ್, 113 ಎನ್ ಎಮ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅದೇ ರೀತಿ ಸಿಎನ್‌ಜಿ ಮಾದರಿಯಲ್ಲಿ 76 ಹೆಚ್ ಪಿ ಹಾಗೂ 97 ಎನ್ ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಹೊಂದಿದೆ. ಇನ್ನು ನೇರವಾಗಿ ಸಿಎನ್‌ಸಿ ಪವರ್ ನಲ್ಲಿಯೇ ಈ ಕಾರನ್ನು ಸ್ಟಾರ್ಟ್ ಮಾಡಬಹುದು.

ಸದ್ಯ ಟಾಟಾ ಅಲ್ಟೋಜ್ ಹಾಗೂ ಪಂಚ್ ಗೆ ಪ್ರತಿಸ್ಪರ್ಧಿ ಆಗಿರುವ ಯಾವುದೇ ಕಾರುಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ ಹಾಗಾಗಿ ಸದ್ಯದಲ್ಲಿಯೇ ಟಾಟಾ ಪಂಚ್ ಹೆಚ್ಚಿನ ಯೂನಿಟ್ ಮಾರಾಟವಾಗಲಿದೆ.