ಬೆಳಗಾವಿಯಲ್ಲಿ ಕಾರ್ಮಿಕನ ಹತ್ಯೆ ಪ್ರಕರಣದಲ್ಲಿ ಇಬ್ಬರ ಬಂಧನ.

ಬೆಂಗಳೂರು:

ಸುನೀಲ್  (ವಯಸ್ಸು 33)  ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಜೈನಾಪುರ ಗ್ರಾಮದವರು. ಈತ ಕಬ್ಬು ವ್ಯಾಪಾರಿಯಾಗಿದ್ದು . ಈತ   ಅ.6ರಂದು ಜೈನಾಪುರ ಸಮೀಪದ ಕರೋಶಿ ಎಂಬ ಗ್ರಾಮದಲ್ಲಿ ಸುನೀಲ್ ರಕ್ತದ ಪ್ರವಾಹದಲ್ಲಿ ಶವವಾಗಿ ಪತ್ತೆಯಾಗಿದ್ದರು. ಆತನನ್ನು ನಿಗೂಢ ವ್ಯಕ್ತಿಗಳು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಚಿಕ್ಕೋಡಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಚಿಕ್ಕೋಡಿ ಪೊಲೀಸರು ಸುನೀಲ್ ನನ್ನು ಕೊಲೆ ಮಾಡಿದ್ದಕ್ಕೆ ಆತನ ಸ್ನೇಹಿತ ಮಹಾಂತೇಶ್  ಹಾಗೂ ಆತನ ಸಂಬಂಧಿ ರಾಜು ಎಂಬುವವರನ್ನು ಬಂಧಿಸಿದ್ದಾರೆ.

ತನಿಖೆಯಲ್ಲಿ ಮಹಾಂತೇಶ್ 6 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು.ಆಗಾಗ್ಗೆ ಮನೆಗೆ ಬರುತ್ತಿದ್ದ ಸುನಿಲ್ ಮಹಾಂತೇಶ್ ನ ಹೆಂಡತಿಯನ್ನು ಇಷ್ಟಪಟ್ಟಿದ್ದನು .

ಸುನಿಲ್ ಮಹಾಂತೇಶ್ ಪತ್ನಿಯ ಮೇಲೆ ಕಣ್ಣಿತ್ತಿದ್ದು ,  ಸುನಿಲ್  ಮಹಾಂತೇಶ್ ಗೆ ಸಾಲದ ಹಣ  ತೀರಿಸಲು ನಾನು ಸಹಾಯ ಮಾಡುತ್ತೇನೆ. ನೀನು ನಿನ್ನ ಹೆಂಡತಿಯನ್ನು ನನ್ನೊಂದಿಗೆ ಮೋಜು ಮಾಡಲು ಕಳುಹಿಸಬೇಕು ಎಂದನು. ಈ ವಿಚ್ಛ್ರಾಕ್ಕೆ ಕೋಪಗೊಂಡ ಮಹಾಂತೇಶ್ ಸುನೀಲನನ್ನು ರಾಜು ಎಂಬುವವರೊಂದಿಗೆ ಸೇರಿ  ಕೊಲೆ ಮಾಡಿರುವುದು ಬಯಲಾಗಿದೆ.ವಿಷಯ ತಿಳಿಯುತ್ತಿದ್ದಂತೆ  ಪೊಲೀಸರು ಇಬ್ಬರನ್ನು ಬಂಧಿಸಿದ್ದು , ಇಬ್ಬರ ವಿರುದ್ಧ ಚಿಕ್ಕೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.