Gas Cylinder Price: ಭಾರೀ ಇಳಿಕೆಯತ್ತ ಸಿಲಿಂಡರ್ ಬೆಲೆ ಇಲ್ಲಿದೆ ಹೊಸ ದರ

ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್(Gas Cylinder) ಬೆಲೆ ಏರಿಕೆಯಾಗಿದ್ದು ಜನರಿಗೆ ಜೀವನ ನಡೆಸಲು ಕಷ್ಟಕರವಾಗಿದೆ. ಹೌದು ಇತ್ತೀಚಿನ ಗ್ಯಾಸ್ ಬೆಲೆಯಲ್ಲಿ ಮನೆಯಲ್ಲಿ ಗ್ಯಾಸ್ ಬಳಸಲು ಹತ್ತು ಬಾರಿ ಯೋಚಿಸುವ ಪರಿಸ್ಥಿತಿ ಬಂದಿದೆ. ಮನೆಯಲ್ಲಿ ನಾವು ಎಷ್ಟೇ ಕಡಿಮೆ ಗ್ಯಾಸ್ ಉಪಯೋಗಿಸುತ್ತೇವೆ ಎಂದರೂ ದಿನನಿತ್ಯದ ಅಗತ್ಯ ಗಳಿಗೆ ಗ್ಯಾಸ್ ಬಳಸಲೇ ಬೇಕಾಗುತ್ತದೆ.

ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ:

ಗ್ಯಾಸ್ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು, ಇದು ಸಂತಸ ಪಡುವ ವಿಷಯವಾಗಿದೆ. ಹೌದು ನಿನ್ನೆ ಮೇ 1 ಕಾರ್ಮಿಕರ ದಿನದಂದು ಗ್ಯಾಸ್ ಬೆಲೆಯಲ್ಲಿ ಇಳಿಕೆ ಕಂಡಿದ್ದು ಎಲ್ಲರಿಗೂ ಸಂತಸದ ಸುದ್ದಿಯಾಗಿದೆ.

gas cylinder price down
Image Source: News18

ವಾಣಿಜ್ಯ ಬಳಕೆಯ ಸಿಲಿಂಡರ್ ಗೆ ಅನ್ವಯ:

ಗ್ಯಾಸ್ ಬೆಲೆಯಲ್ಲಿ ಇಳಿಕೆ ಆಗೀದೆ ಎಂದು ಕೇಂದ್ರ ಸರ್ಕಾರ ಘೋಷಿಸಿ ನಿನ್ನೆಯಿಂದ ಜಾರಿಗೆ ಬಂದಿದ್ದೇನೊ ನಿಜ ಆದರೆ ಅದು ಕೇವಲ ವಾಣಿಜ್ಯ ಬಳಕೆಯ ಸಿಲಿಂಡರಿಗೆ ಅನ್ವಯವಾಗುತ್ತದೆ. ಇದು ಮನೆ ನಡೆಸುವವರಿಗೆ ಬೇಸರವಾಗಿದ್ದರೂ ಮುಂದಿನ ಜೂನ್ ತಿಂಗಳಿನಿಂದ ಗ್ಯಾಸ್ ಬೆಲೆ ಕಮ್ಮಿಯಾಗುತ್ತದೆ ಎನ್ನುವ ಸುದ್ದಿಯಿಂದ ಸಂತಸದಲ್ಲಿದ್ದಾರೆ.