Govt Updates: ಕರೆಂಟ್ ಬಿಲ್ ಕಟ್ಟದಿರುವ ಬಗ್ಗೆ ಸಿದ್ದರಾಮಯ್ಯ ಮಹತ್ವದ ಘೋಷಣೆ

ಪ್ರತಿ ಪಕ್ಷದಂತೆ ಕಾಂಗ್ರೆಸ್(Congress) ಪಕ್ಷವು ಕೂಡ ಚುನಾವಣೆಯ ಮೊದಲು ಪ್ರಣಾಳಿಕೆಯನ್ನು ಹೊರಡಿಸಿತ್ತು. ಇದರಲ್ಲಿ ಐದು ಗ್ಯಾರಂಟಿ ಸೌಲಭ್ಯ ಒದಗಿಸುವುದಾಗಿ ಹೇಳಿಕೊಂಡಿತ್ತು. ಅದರಲ್ಲಿ ಪ್ರತಿ ಮನೆಗೆ 200 ಯೂನಿಟ್ ಗಳ ವರೆಗೆ ವಿದ್ಯುತ್ ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಲಾಗಿತ್ತು ತಾವು ಅಧಿಕಾರಕ್ಕೆ ಬಂದರೆ ಯಾರು ವಿದ್ಯುತ್ ಬಿಲ್ ಭರಿಸುವ ಅಗತ್ಯವಿಲ್ಲ ಎಂದು ಹೇಳಿಕೊಂಡಿದ್ದು ಇದೀಗ ಬಹುಮತದಿಂದ ಆಯ್ಕೆಗೊಂಡ ಕಾಂಗ್ರೆಸ್ ತನ್ನ ಸರ್ಕಾರ ರಚನೆ ಮಾಡುತ್ತಿದ್ದು ಇನ್ನು ಮುಂದೆ ಪ್ರತಿ ಮನೆಗೂ 200 ಯೂನಿಟ್ ಗಳ ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಹೇಳಿಕೊಂಡಿದೆ.
ಗೃಹ ಜ್ಯೋತಿ ಯೋಜನೆಯನ್ನು ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ ಅದೇ ರೀತಿ ಈ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಅನ್ನು ಕೇವಲ ದಲಿತರು, ಅಲ್ಪಸಂಖ್ಯಾತರು ಅಥವಾ ಹಿಂದುಳಿದವರಿಗೆ ಮಾತ್ರ ಸೀಮಿತ ಮಾಡದೆ ರಾಜ್ಯದ ಎಲ್ಲರೂ ಕೂಡ 200 ಯೂನಿಟ್ ಉಚಿತ ವಿದ್ಯುತ್ ಪಡೆದುಕೊಳ್ಳಲು ಸೌಲಭ್ಯ ಕಲ್ಪಿಸಲಾಗುವುದು ಎಂದು ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರದ ವೇಳೆ ತಿಳಿಸಿದ್ದರು. ಈಗಾಗಲೇ ವಿದ್ಯುತ್ ಬಿಲ್ಲು ಉಚಿತ ಮಾಡಿ ಎಂದು ಕಾಂಗ್ರೆಸ್ ಮೇಲೆ ಒತ್ತಡ ಹೇರಲಾಗುತ್ತಿದೆ.
ಇನ್ನು ನಮ್ಮ ಪ್ರಣಾಳಿಕೆಯಲ್ಲಿ ಹೊರಡಿಸಿದ ವಿಚಾರಗಳೇ ನಮ್ಮ ಗೆಲುವಿಗೆ ಕಾರಣ ಎಂದು ಹೇಳಿಕೊಂಡಿರುವ ಮಲ್ಲಿಕಾರ್ಜುನ್ ಖರ್ಗೆ ಅವರು ಸದ್ಯದಲ್ಲಿಯೇ 200 ಯೂನಿಟ್ ಉಚಿತ ವಿದ್ಯುತ್ ಸೌಲಭ್ಯವನ್ನು ರಾಜ್ಯದ ಜನರಿಗೆ ನೀಡಲಾಗುವುದು ಎಂದು ಹೇಳಿದ್ದಾರೆ. ಬಿಜೆಪಿ ದಿನದ 10ಗಂಟೆ 3 ಫೇಸ್ ವಿದ್ಯುತ್ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಅದನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಆದರೆ ನಾವು ಕೊಟ್ಟ ಮಾತಿನಂತೆ ಜನರಿಗೆ ಉಚಿತ ವಿದ್ಯುತ್ ನೀಡುತ್ತೇವೆ. ಎಂದು ಕಾಂಗ್ರೆಸ್ ಸರ್ಕಾರ ತಿಳಿಸಿದ್ದು ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಈಗಾಗಲೇ ಈ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ. ಆದರೆ ಈ ವಿದ್ಯುತ್ ಉಚಿತವಾಗಿ ಪಡೆದುಕೊಳ್ಳಲು ಯಾವ ಎಲ್ಲಾ ನಿಯಮಗಳು ಇವೆ ಅಥವಾ ಯಾರಿಗೆಲ್ಲ ಈ ಸೌಲಭ್ಯ ದೊರೆಯಲಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.