Nayanthara : ಅವಳಿ ಮಕ್ಕಳಿಗೆ ಜನ್ಮ ನೀಡಿದ ನಯನತಾರಾ..!
ನಯನತಾರಾ ಅವಳಿ ಮಕ್ಕಳಿಗೆ ಜನ್ಮ ನೀಡಿ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ

ನಯನತಾರಾ : ಚಿರಂಜೀವಿ ಅವರ ಗಾಡ್ ಫಾದರ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ನಯನತಾರಾ ,ಈಗ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ. ಈ ಶುಭ ಸುದ್ದಿಯನ್ನು ಸ್ವತಃ ನಯನತಾರಾ ಪತಿ ವಿಘ್ನೇಶ್ ಶಿವನ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಆದರೆ ಮದುವೆಯಾಗಿ ಕೇವಲ 4 ತಿಂಗಳಾಗಿರುವುದರಿಂದ..ಅಭಿಮಾನಿಗಳು ಇದು ನಿಜವೇ? ಅಥವಾ ತಮಾಷೆಯೇ ? ಎಂಬ ಗೊಂದಲದಲ್ಲಿದ್ದಾರೆ.
ನಾಯನತಾರಾ ಅವರು ತಾಯಿಯಾಗುತ್ತಿಲ್ಲ ಬದಲಿಗೆ ಅವರು ಬಾಡಿಗೆ ತಾಯ್ತನದ ಮೂಲಕ ಎರಡು ಅವಳಿ ಮಕ್ಕಳನ್ನು ದತ್ತು ಪಡೆದಿದ್ದಾರೆ .ಈ ನಿರ್ಧಾರಕ್ಕೆ ತಮ್ಮ ಪತಿ ವಿಘ್ನೇಶ್ ಶಿವನ್ ಅವರ ಅನುಮತಿ ಕೂಡ ಇದ್ದು ,ಈ ವಿಚಾರವನ್ನು ಗೌಪ್ಯವಾಗಿಯೇ ಇಟ್ಟಿದ್ದರು .
ನಯನತಾರಾ ಮತ್ತು ನಾನು ತಂದೆ ತಾಯಿ ಆದೆವು. ನಮಗೆ ಅವಳಿ ಮಕ್ಕಳು ಹುಟ್ಟಿದ್ದಾರೆ . ನಮ್ಮ ಪೂರ್ವಜರ ಎಲ್ಲಾ ಪ್ರಾರ್ಥನೆಗಳು ಮತ್ತು ಆಶೀರ್ವಾದಗಳು ಎರಡು ಮಕ್ಕಳ ರೂಪದಲ್ಲಿ ಒಟ್ಟಿಗೆ ಬಂದವು. ನಮ್ಮ ‘ಉಯಿರ್ ಮತ್ತು ಉಲಗಂ’ ಗೆ ನಿಮ್ಮೆಲ್ಲರ ಆಶೀರ್ವಾದ ಬೇಕು” ಎಂದು ವಿಘ್ನೇಶ್ ಶಿವನ್ ಟ್ವೀಟ್ ಮಾಡಿದ್ದಾರೆ. ನಯನತಾರಾ ಮತ್ತು ಶಿವನ್ ಮಗುವಿನ ಪುಟ್ಟ ಪಾದಗಳಿಗೆ ಮುತ್ತಿಡುತ್ತಿರುವ ಫೋಟೋಗಳನ್ನೂ ಅವರು ಹಂಚಿಕೊಂಡಿದ್ದಾರೆ.
ಆದರೆ ಆರು ವರ್ಷಗಳ ಸಂಬಂಧದ ನಂತರ ಇಬ್ಬರೂ ಜೂನ್ 9, 2022 ರಂದು ಮಹಾಬಲಿಪುರಂನ ಜನಪ್ರಿಯ ರೆಸಾರ್ಟ್‌ನಲ್ಲಿ ಕುಟುಂಬದವರ ಸಮ್ಮತಿಯೊಂದಿಗೆ ವಿವಾಹವಾದರು. ಬಾಡಿಗೆ ತಾಯ್ತನದ ಮೂಲಕ ದಂಪತಿಗಳು ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ. ಅದನ್ನು ತಿಳಿದ ಅಭಿಮಾನಿಗಳು ದಂಪತಿಗಳಿಗೆ ಶುಭಾಶಯಗಳನ್ನು ಕೋರಿದ್ದಾರೆ