PM Modi: ರೋಡ್ ಶೋ ನಲ್ಲಿ ಮೋದಿಯೆಡೆಗೆ ಮೊಬೈಲ್ ಎಸೆತ

ಪ್ರಧಾನಿ ಮೋದಿಯವರು(Modi) ದೇಶದ ಹೆಮ್ಮೆಯ ನಾಯಕರಾಗಿದ್ದು, ದೇಶದ ಪ್ರಗತಿಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಅವರು ಪ್ರಧಾನಿಯಾದ ನಂತರ ಹಲವಾರು ಜನಹಿತ ಕಾರ್ಯಗಳನ್ನು ಮಾಡಿ ಸೈ ಎನಿಸಿಕೊಂಡಿದ್ದರು.
ಮೈಸೂರು ರೋಡ್ ಶೋ ನಲ್ಲಿ ಭಾಗವಹಿಸಿದ ನರೇಂದ್ರ ಮೋದಿ:
ಬಿಜೆಪಿಯ(BJP) ಪರ ಮತಯಾಚಿಸಲು ಕರ್ನಾಟಕಕ್ಕೆ ಬಂದ ಮೋದಿ ಯವರು ಪ್ರಚಾರಕ್ಕೆಂದು ರೋಡ್ ಶೋ(Road Show) ಮಾಡುತ್ತಿರುವ ವೇಳೆಯಲ್ಲಿ ಜನರು ಹೂ ವನ್ನು ಎಸೆಯುತ್ತಿದ್ದರು ಎನ್ನಲಾಗಿದೆ. ಅದೇ ವೇಳೆಯಲ್ಲಿ ಮೊಬೈಲ್ ಫೋನ್(Mobile Phone) ವೊಂದನ್ನು ಅಪರಿಚಿತ ವ್ಯಕ್ತಿ ಮೋದಿಯೆಡೆಗೆ ಎಸೆದಿರುವುದಾಗಿ ಸುದ್ದಿಯಾಗಿದೆ.

ಮೋದಿಯೆಡೆಗೆ ಮೊಬೈಲ್ ಫೋನ್ ಎಸೆದ ಅಪರಿಚಿತ:
ಪ್ರಚಾರದ ಸಂದರ್ಭದಲ್ಲಿ ಮೊಬೈಲ್ ಒಂದು ಮೋದಿಯೆಡೆಗೆ ಬರುತ್ತಿರುವುದು ಕಂಡುಬಂದಿದ್ದು ಇದು ಕರ್ನಾಟಕದಲ್ಲಿ ಆದ ಭದ್ರತಾ ಲೋಪವಾಗಿದೆ. ಇದನ್ನು ಭದ್ರತಾ ಸಿಬ್ಬಂದಿಗಳು ಮೋದಿಯೆಡೆಗೆ ಬಾರದಂತೆ ತಡೆದಿದ್ದು, ಈ ಮೊಬೈಲ್ ಫೋನ್ ಯಾರು ಎಸೆದಿದ್ದಾರೆ ಎನ್ನುವುದನ್ನು ಶೋಧಿಸುತ್ತಿದ್ದಾರೆ.