Kiccha Sudeep: ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಬಗ್ಗೆ ಕಿಚ್ಚನ ಪ್ರತಿಕ್ರಿಯೆ

ನಿಮಗೆಲ್ಲ ತಿಳಿದಿರುವಂತೆ ಇನ್ನೇನು ಕೆಲವೇ ದಿನಗಳಲ್ಲಿ ಎಲೆಕ್ಷನ್(Election) ಇದ್ದು ಎಲ್ಲಾ ಪಕ್ಷದವರು ಭಾರೀ ಪ್ರಚಾರ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಚುನಾವಣೆಯ ಕಾವು ಹೆಚ್ಟಾಗುತ್ತಿದ್ದು ಯಾವ ಪಕ್ಷ ಆಡಳಿತಕ್ಕೆ ಬರಬಹುದು, ಬರಬೇಕು ಎನ್ನುವುದು ಮತದಾರರ ತೀರ್ಮಾನ ವಾಗಿರುತ್ತದೆ.

ಗೀತಕ್ಕನಿಗೆ ಕಿಚ್ಚನಿಂದ ಶುಭ ಹಾರೈಕೆ;

ಕಾಂಗ್ರೆಸ್(Congress0 ಪಕ್ಷಕ್ಕೆ ನಟ ಶಿವಣ್ಣರ ಪತ್ನಿ ಗೀತಾ ಶಿವರಾಜ್ ಕುಮಾರ್(Geetha Shivarajkumar) ಸೇರ್ಪಡೆಯಾಗಿದ್ದು ನಿಮಗೆಲ್ಲರಿಗೂ ತಿಳಿದಿದೆ. ನಟ ಸುದೀಪ್(Sudeep) ರವರು ಬಿಜೆಪಿಯ ಬೆಂಬಲಿಗನಾಗಿದ್ದು, ಗೀತಾ ಶಿವರಾಜ್ ಕುಮಾರ್ ರಿಗೆ ಹಾರೈಸಿದ್ದು, ನಾನು ನಟನಾಗಿದ್ದು ರಾಜಕೀಯದಲ್ಲಿ ನನಗೆ ಅನುಭವವಿಲ್ಲ. ಗೀತಕ್ಕ ಕಾಂಗ್ರೆಸ್ ಸೇರಿದ್ದು ಒಳ್ಳೆಯ ನಾಯಕರು. ಅವರಿಗೆ ಅವಕಾಶ ಕೊಟ್ಟು ನೋಡಬೇಕು ಎಂದಿದ್ದಾರೆ. ನಾನು ಬಸವರಾಜ್ ಬೊಮ್ಮಾಯಿ(Basavaraj Bommai) ಅವರು ಒಳ್ಳೆಯ ನಾಯಕ ಎಂದೆನಿಸಿ ಅವರ ಪರ ನಿಂತಿರುವುದಾಗಿ ಹೇಳಿದ್ದಾರೆ.

sudeep about geetha
Image Source: Oneindia

ಪತ್ನಿಯ ನಿರ್ಧಾರಕ್ಕೆ ಪತಿಯ ಸಾಥ್:

ಗೀತಾ ಶಿವರಾಜ್ ಕುಮಾರ್ ರವರು ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದು, ಅವರು ಯಾವುದೇ ನಿರ್ಧಾರ ಯೋಚಿಸದೆ ಮಾಡುವುದಿಲ್ಲ, ಹಾಗೆ ನನ್ನ ಬೆಂಬಲ ಸದಾ ಅವರಿಗೆ ಇರುತ್ತದೆ ಎಂಬುವುದಾಗಿ ತಿಳಿಸಿದ ಶಿವರಾಜ್ ಕುಮಾರ್ ರವರು ನಾಳೆಯಿಂದಲೇ ಪ್ರಚಾರಕ್ಕೆ ಇಳಿಯುವುದಾಗಿ ತಿಳಿಸಿದ್ದಾರೆ.