ಮೊಬೈಲ್ ವಿಚಾರವಾಗಿ ಕೊಲೆಗೈದ ಐವರು ಆರೋಪಿಗಳು ಅರೆಸ್ಟ್

123Kannada (Kannada News) :

ಮೊಬೈಲ್ ವಿಚಾರವಾಗಿ ಯುವಕನೋರ್ವನ ಕೊಲೆಗೈದ ಐವರು ಆರೋಪಿಗಳನ್ನ ಸಾಗರ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮೇ.28 ರಂದು ಸಂಜೆ 06-40 ಗಂಟೆಗೆ ಸಾಗರ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಅರಳಿಕೊಪ್ಪ ಗ್ರಾಮದಲ್ಲಿ   ಮೊಬೈಲ್ ಫೋನ್ ವಿಚಾರವಾಗಿ ಸಾಜಿಲ್ ಹುಸೇನ್, (23) ಎಂಬಾತನನ್ನ ಕೊಲೆ ಮಾಡಿರುವ ಆರೋಪಿ ಸುಫೇಲ್ ಯಾನೆ ಸುಕ್ಕಾ ಹಾಗೂ ಆತನ ಸಹಚರರು ಸೇರಿ ಹಲ್ಲೆ ಮಾಡಿ ಕೊಲೆ ಮಾಡಿರುವ ಬಗ್ಗೆ ಪಿರ್ಯಾದಿ ನೀಡಿದ ದೂರಿನ ಅನ್ವಯ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿತರ ಪತ್ತೆ ಬಗ್ಗೆ ಸಾಗರ ಉಪ ವಿಭಾಗದ ಪೊಲೀಸ್‌ ಉಪಾಧೀಕ್ಷಕರಾದ ವಿನಾಯಕ ಶಟಗೇರಿ, ರವರ ಮಾರ್ಗದರ್ಶನದಲ್ಲಿ ಶ್ರೀ ಸುನಿಲ್ ಕುಮಾರ್ ಎಂ, ಪೊಲೀಸ್ ವೃತ್ತ ನಿರೀಕ್ಷಕರು ಸಾಗರ ಗ್ರಾಮಾಂತರ ವೃತ್ತ ರವರ ನೇತೃತ್ವದ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಿ ಕಾರ್ಯಾಚರಣೆಯನ್ನು ನಡೆಸಿ, ಇಂದು ಕೆಳಕಂಡ 5  ಜನ ಆರೋಪಿತರುಗಳನ್ನು ದಸ್ತಗಿರಿ ಮಾಡಿರುತ್ತದೆ.

1) ಸುಫೇಲ್ @ ಸುಕ್ಕಾ ತಂದೆ ಮನ್ಸೂರ್ 26 ವರ್ಷ ವಾಸ ಜನ್ನತ್ ನಗರ ಸಾಗರ ಟೌನ್.2) ಮುಜ್ಜು @ ಮುಜಾಮಿಲ್ ತಂದೆ ಲೇಟ್ ಖಾಸಿಂ ಸಾಬ್ 25 ವರ್ಷ  ವಾಸ ಹಾನಂಬಿ ನೆಹರುನಗರ ಸಾಗರ ಟೌನ್, 3) ಸುಹೇಬ್ ತಂದೆ ಮನ್ಸೂರ್ 20 ವರ್ಷ ವಾಸ ಜನ್ನತ್ ನಗರ ಸಾಗರ ಟೌನ್.4) ಅಬ್ದುಲ್ ಸಲಾಂ @ ಸಲ್ಲು ತಂದೆ ಅಬ್ದುಲ್ ರೆಹಮಾನ್ 24 ವರ್ಷ ವಾಸ ಕೆಳದಿ ರಸ್ತೆ ಸಾಗರ ಟೌನ್.

5) ಸಮೀವುಲ್ಲಾ ತಂದೆ ಸೈಯದ್ ರಹೀಂ 25  ವರ್ಷ ವಾಸ ಜನ್ನತ್ ನಗರ ಸಾಗರ ಟೌನ್ ರವರನ್ನು ದಸ್ತಗಿರಿ ಮಾಡಿದ್ದು, ಸದರಿ ಆರೋಪಿತರುಗಳಿಂದ ಕೃತ್ಯಕ್ಕೆ ಬಳಸಿದ ಆಯುಧಗಳನ್ನು ಹಾಗೂ 02 ದ್ವಿಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಂಡು ಆರೋಪಿತರನ್ನು ಘನ ನ್ಯಾಯಾಲಯದ ಮುಂದೆ ಹಾಜರ್‌ ಪಡಿಸಿರುತ್ತದೆ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.