ನಿನ್ನೆಯಿಂದ ಕೋರ್ಟ್ ಆರಂಭಗೊಂಡಿದೆ ಆದರೆ ಸಾರ್ವಜನಿಕರಿಗೆ ನೇರವಾಗಿ ಪ್ರವೇಶವಿಲ್ಲ

123Kannada (Kannada News) :

ಶಿವಮೊಗ್ಗದ ನ್ಯಾಯಾಲಯ ನಿನ್ನೆಯಿಂದ ತನ್ನ ಕಾರ್ಯ ನಿರ್ವಹಿಸುತ್ತಿದೆ. ಕೋವಿಡ್-19 ಹಿನ್ನೆಲೆಯಲ್ಲಿ ತುರ್ತು ಸೇವೆಯನ್ನ ಹೊರಗಿಟ್ಟು ತನ್ನೆಲ್ಲಾ ಕಾರ್ಯಕಲಾಪವನ್ನ ಬಂದ್ ಮಾಡಿದ್ದ ನ್ಯಾಯಾಲಯ ನಿನ್ನೆಯಿಂದ ತನ್ನ ಕಾರ್ಯವನ್ನ ಆರಂಭಿಸಿದೆ.

ಆದರೆ ಮೊದಲಿನಂತೆ ಗುಂಪು ಗುಂಪಾಗಿ ನ್ಯಾಯಾಲಯಕ್ಕೆ ಸಾರ್ವಜನಿಕರು ಹೋಗಲು ಅನುಮತಿ ಇಲ್ಲ. ನ್ಯಾಯಾಲಯದ ಸುತ್ತಮುತ್ತಲೂ ಸಹ ಗೇಟ್ ಗಳನ್ನ ಹಾಕಿ ಬಂದೋಬಸ್ತ್ ಮಾಡಲಾಗಿದೆ. ನಾಲ್ಕು ಗೇಟ್ ಗಳಿಂದ ನ್ಯಾಯಾಲಯಕ್ಕೆ ಪ್ರವೇಶಿಸಬೇಕು ಕೆಲ ಗೇಟ್ ಗಳಲ್ಲಿ ವಕೀಲರೇ ನಿಂತು ಸಾರ್ವಜನಿಕರನ್ನ ನ್ಯಾಯದಲ್ಲಿ ನೇರವಾಗಿ ಪ್ರವೇಶಿಸದಂತೆ ನಿಯಂತ್ರಿಸಲಾಗುತ್ತಿದೆ.

ಬಾಲರಾಜ್ ಅರಸ್ ರಸ್ತೆಯಲ್ಲಿರುವ ತಹಶೀಲ್ದಾರ್ ಕಚೇರಿ ಪಕ್ಕದಲ್ಲಿ ಅಂಟಿಕೊಂಡಿರುವ ಗೇಟ್ ಮೂಲಕ ಥರ್ಮಲ್ ಸ್ಕ್ಯಾನಿಂಗ್ ಮಾಡುವ ಮೂಲಕ ನ್ಯಾಯಾಲಯದ ಆವರಣಕ್ಕೆ ಬಿಡಲಾಗುತ್ತಿದೆ. ಅದೂ ಸಹ ವಕೀಲರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ವಾಹನಗಳನ್ನೂ ಸಹ ನ್ಯಾಯಾಲಯದ ಸುತ್ತಮುತ್ತ ಅಥವಾ ಆವರಣದಲ್ಲಿ ಪಾರ್ಕ್ ಮಾಡುವ ವ್ಯವಸ್ಥೆಗೂ ನಿರ್ಬಂಧಿಸಲಾಗಿದೆ.

ಒಟ್ಟಿನಲ್ಲಿ ಸಾರ್ವಜನಿಕರು ನೇರವಾಗಿ ಕೋರ್ಟ್ ಗೆ ಭೇಟಿ ನೀಡುವುದು ನಿರ್ಬಂಧಿಸಲಾಗಿದೆ. ಈಗಿರುವ ಪೋಸ್ಟ್ ಆಫೀಸ್ ಕೆಳಗಿನ ಮಳಿಗೆಯಲ್ಲಿ ಹಣ ಕಟ್ಟುವ ವ್ಯವಸ್ಥೆ ಮಾಡಲಾಗಿದೆ. 6-8 ಕೌಂಟರ್ ಗಳನ್ನ ಕಲ್ಪಿಸಿ ವಕೀಲರಿಗೆ ಕೋರ್ಟ್ ಗೆ ಹಣಕಟ್ಟಲು ಅನುಕೂಲ ಮಾಡಲಾಗಿದೆ. ವಕೀಲರ ಡ್ರೆಸ್ ಕೂಡ ಬದಲಾಗಿದೆ. ವಕೀಲರಿಗೆ ಬಿಳಿ ಬಟ್ಟೆ ಧರಿಸಿ ಬರಲು ಸೂಚಿಸಲಾಗಿದೆ. ಇವೆಲ್ಲವೂ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.