ಶಿವಮೊಗ್ಗದಲ್ಲಿ ಅರ್ಧ ಶತಕ ಭಾರಿಸಿದ ಕೊರೋನ ಪಾಸಿಟಿವ್ ಸಂಖ್ಯೆ

123Kannada (Kannada News) :

ಸೋಮವಾರ ಮತ್ತೆ ಒಂಭತ್ತು ಮಂದಿಯಲ್ಲಿ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದೆ. ಇದರಿಂದಾಗಿ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 51 ಕ್ಕೆ ಏರಿದಂತಾಗಿದೆ. ಇದರಿಂದ ಮಲೆನಾಡ ಹೆಬ್ಬಾಗಿಲಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಸಂಖ್ಯೆ ಅರ್ಧಶತಕ ಭಾರಿಸಿದೆ.

ಇದರಲ್ಲಿ ಏಳು ಮಂದಿ ಬೆಂಗಳೂರಿನಿಂದ ಹಿಂದಿರುಗಿದವರೇ ಇದ್ದಾರೆ. ಇವರೆಲ್ಲರೂ ಕೆಎಸ್ ಆರ್ಪಿ ಪೇದೆಗಳಾಗಿದ್ದು, ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಲು ತೆರಳಿದ್ದರು ಎನ್ನಲಾಗಿದೆ. ಇವರೆಲ್ಲರೂ ಪುರುಷರೇ ಆಗಿದ್ದಾರೆ.

ಇನ್ನು ಪೇಷೆಂಟ್ 1305ರ ಸಂಪರ್ಕದಿಂದ 30 ವರ್ಷದ ಮಹಿಳೆಗೆ ಸೋಂಕು ತಗುಲಿದೆ. 52 ವರ್ಷದ ಮತ್ತೋರ್ವ ಪುರುಷನಲ್ಲಿಯೂ ಸೋಂಕು ಕಾಣಿಸಿದೆ. ಆಯನೂರಿನ ವೈದ್ಯರೋರ್ವರಿಗೆ ಪಾಸಿಟಿವ್ ಕಾಣಿಸಿಕೊಂಡಿದೆ ಎನ್ನಲಾಗಿದೆ. ಜೊತೆಗೆ ಡಿಎಆರ್ ನಲ್ಲಿ ಎಎಸ್ಐ ರೋರ್ವರಿಗೆ ಸೋಂಕು ಕಾಣಿಸಿಕೊಂಡ ಪರಿಣಾಮ ಜಿಲ್ಲೆಯಲ್ಲಿ 9 ಪಾಸಿಟಿವ್ ಕಾಣಿಸಿಕೊಂಡಿದೆ.

ಇನ್ನು ಸೋಮವಾರ ಕೊರೋನಾ ಸೋಂಕಿನಿಂದ ಇಬ್ಬರು ಗುಣಮುಖರಾಗಿದ್ದಾರೆ. ಇದರಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 25 ಆಗಿದೆ. ಪಿ-3302, ಪಿ-3303, ಪಿ3304, ಪಿ3305, ಪಿ-3306, ಪಿ-3307, ಪಿ-3308, ಪಿ-3309, ಪಿ-3310 ಎಂದು ಸಂಖ್ಯೆಯನ್ನ ಹೆಲ್ತ್ ಬುಲಿಟಿನ್ ನಲ್ಲಿ ನೀಡಲಾಗಿದೆ. ಇವರೆಲ್ಲಾ ಸೋಂಕಿತರು ಎಂದು ಹೆಲ್ತ ಬುಲಿಟಿನ್ ತಿಳಿಸಿದೆ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.