ಜಾವಾ ಮತ್ತು ಬೊಲೆರೊ ಬಿಡಿಭಾಗ ಬಳಸಿ ವೆಂಟಿಲೇಟರ್ ತಯಾರಿಸಿದ ಮೈಸೂರು ಕಂಪೆನಿ

123Kannada (Kannada News) :

ಮೈಸೂರು: ವಾಹನ ಬಿಡಿಭಾಗಗಳನ್ನು ಬಳಸಿ ವೆಂಟಿಲೇಟರ್‌ ತಯಾರಿಸುವ ವಿನ್ಯಾಸ ಅಭಿವೃದ್ಧಿಪಡಿಸುವಲ್ಲಿ ಡಾ. ಜಗದೀಶ್‌ ಹಿರೇಮಠ ಅವರು ಯಶಸ್ವಿಯಾಗಿದ್ದಾರೆ.

ನಗರದ ಸ್ಕ್ಯಾನ್‌ರೇ (Skanray) ಕಂಪನಿ ಅಭಿವೃದ್ಧಿಪಡಿಸಿರುವ ಮೂಲ ವಿನ್ಯಾಸ ಆಧರಿಸಿ  ಡಾ. ಜಗದೀಶ್‌ ಹಿರೇಮಠ ಅವರು ಈ ವೆಂಟಿಲೇಟರ್‍ ತಯಾರಿಸಿದ್ದಾರೆ.

ಮಹೀಂದ್ರಾ ಆ್ಯಂಡ್‌ ಮಹೀಂದ್ರಾದ ವಿನ್ಯಾಸ ತಂಡದ ಸಹಯೋಗದಲ್ಲಿ ವೆಂಟಿಲೇಟರ್‌ನ ಹೊಸ ವಿನ್ಯಾಸ ಅಭಿವೃದ್ಧಿಯಾಗಿದ್ದು, ಸಂಬಂಧಿಸಿದ ಪ್ರಾಧಿಕಾರಗಳಿಂದ ಅನುಮೋದನೆಯ ನಿರೀಕ್ಷೆಯಲ್ಲಿ ಇದ್ದಾರೆ.

ಮೋಟರ್‌ ಸೈಕಲ್‌ನ ಪ್ರೆಷರ್‌ ಗೇಜ್‌, ವಾಹನದ ಬ್ಯಾಟರಿ ಮತ್ತು ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ನ (ಎಸ್‌ಯುವಿ) ಸೆಂಟ್ರಲ್‌ ಕನ್ಸೋಲ್‌ ಬಳಸಿ ಈ ವೆಂಟಿಲೇಟರ್‌ನ ವಿನ್ಯಾಸ ರೂಪಿಸಲಾಗಿದೆ.

ಈಗ ಡಾ. ಜಗದೀಶ್‌ ನೇತೃತ್ವದಲ್ಲಿನ ತಂಡವು ಅಭಿವೃದ್ಧಿಪಡಿಸಿರುವ ವೆಂಟಿಲೇಟರ್‌ ವಿನ್ಯಾಸಕ್ಕೆ ಅನುಮೋದನೆ ದೊರೆತರೆ ಕೆಲವೇ ತಿಂಗಳಲ್ಲಿ 3 ಲಕ್ಷ ವೆಂಟಿಲೇಟರ್‌ಗಳನ್ನು ತಯಾರಿಸಬಹುದಾಗಿದೆ.

ಡಾ. ಜಗದೀಶ್‌ ಹಿರೇಮಠ ಅವರು ಏಸ್‌ ಸುಹಾಸ್‌ ಹಾಸ್ಪಿಟಲ್‌ನ (Ace Suhas Hospital) ವ್ಯವಸ್ಥಾಪಕ ನಿರ್ದೇಶಕ ಮತ್ತು ತೀವ್ರ ನಿಗಾ ಪರಿಣತರೂ ಆಗಿದ್ದಾರೆ.

ವೆಂಟಿಲೇಟರ್‌ಗಳ ಬಹುತೇಕ ತಯಾರಕರು ಸೆನ್ಸರ್ಸ್‌, ಬ್ಲೋವರ್ಸ್‌ ಮತ್ತು ವಾಲ್ವ್‌ಗಳನ್ನು ಅಮೆರಿಕ, ಸ್ವೀಡನ್‌ ಅಥವಾ ಫ್ರಾನ್ಸ್‌ಗಳಿಂದ ಆಮದು ಮಾಡಿಕೊಳ್ಳುತ್ತಿದ್ದಾರೆ.

ಈ ಕಾರಣಕ್ಕಾಗಿಯೇ ವಾಹನ ಬಿಡಿಭಾಗಗಳನ್ನು ಬಳಸಿಕೊಂಡು ವೆಂಟಿಲೇಟರ್‌ ತಯಾರಿಸುವ ಚಿಂತನೆಯನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಸ್ಕ್ಯಾನ್‌ರೇ ಮತ್ತು ಮಹೀಂದ್ರಾ ತಂಡಗಳು  ಕಾರ್ಯೋನ್ಮುಖವಾಗಿವೆ.

ವೆಂಟಿಲೇಟರ್‌ಗಳ ವಿನ್ಯಾಸ ಅಭಿವೃದ್ಧಿಪಡಿಸಿ ಅವುಗಳನ್ನು ತೀವ್ರ ನಿಗಾ ಘಟಕಗಳಲ್ಲಿ ಬಳಸುವ ವಿಷಯದಲ್ಲಿ ಡಾ. ಜಗದೀಶ್‌ ಹಿರೇಮಠ ಅವರು ಪರಿಣತ ವೈದ್ಯರ ಪಾತ್ರ ನಿಭಾಯಿಸುತ್ತಿದ್ದಾರೆ.

ವಾಹನ ಬಿಡಿಭಾಗದ ಲಕ್ಷಣಗಳು

ಜಾವಾ ಸ್ಪೀಡೊಮೀಟರ್‌, ಒಂದು ನಿಮಿಷದ ಅವಧಿಯಲ್ಲಿ ರೋಗಿಯು ಉಸಿರಾಡಿದ ಗಾಳಿ ಅಥವಾ ಆಮ್ಲಜನಕವನ್ನು ಲೀಟರ್‌ ರೂಪದಲ್ಲಿ ಪ್ರದರ್ಶಿಸುತ್ತದೆ. ರೋಗಿಯು ಉಸಿರಾಡಿದ ಆಮ್ಲಜನಕದ ಪ್ರಮಾಣವನ್ನು ಶೇಕಡವಾರು ರೂಪದಲ್ಲಿಯೂ ತೋರಿಸುತ್ತದೆ.

ಜಾವಾ ಸ್ಪೀಡೊಮೀಟರ್‌ ವೇಗಮಾಪಕದಲ್ಲಿ ಎಚ್ಚರಿಕೆ ಗಂಟೆಯನ್ನೂ ಅಳವಡಿಸಲಾಗಿದೆ.

ಗಾಳಿ ಸಂಚಾರದ ವಿವಿಧ ಮಾನದಂಡಗಳನ್ನು ನಿಗದಿ ಮಾಡುವ ಏಸಿ ನಾಬ್‌ಗಳನ್ನೂ ಈ ಯಂತ್ರಗಳು ಬಳಸುತ್ತವೆ.

ರೋಗಿಗೆ ಆಮ್ಲಜನಕ ಪೂರೈಸುವುದರ ಎಲ್ಲ ಮಾನದಂಡಗಳನ್ನು ಬೊಲೆರೊದ ಸೆಂಟ್ರಲ್‌ ಕನ್ಸೋಲ್‌ ಅನ್ನು ಈ ಯಂತ್ರವು ಬಳಸಿಕೊಳ್ಳಲಿದೆ.

ಮಹೀಂದ್ರಾದ ಆಟೊ ಬ್ಯಾಟರಿಯು, ವಿದ್ಯುತ್‌ ಅಗತ್ಯ ಒದಗಿಸುತ್ತದೆ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.