123Kannada.in Kannada News Live Alerts

ರಾಜ್ಯದಲ್ಲೀಗ ಸ್ವಯಂ ಲಾಕ್‌ಡೌನ್ ಪರ್ವ

0

ಬೆಂಗಳೂರು: ಕೊರೋನಾ ಕೇಕೆ ಹುಟ್ಟಿಸಿರುವ ಭಿತಿಯ ಹಿನ್ನೆಲೆಯಲ್ಲಿ ಸರಕಾರದ ಸೂಚನೆಗೂ ಕಾಯದೇ ಜನ ತಮ್ಮಿಂದ ತಾವೇ ಲಾಕ್‌ಡೌನ್‌ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಕೊರೋನಾ ಪ್ರಕರಣಗಳು ಸಂಖ್ಯೆ ದಿಗಿಲಿನ ಮಟ್ಟದಲ್ಲಿ ಹೆಚ್ಚುತ್ತಿದ್ದರೂ ಆರ್ಥಿಕ ನಷ್ಟದ ಕಾರಣ ಮುಂದೊಡ್ಡಿ ಸರಕಾರ ಲಾಕ್‌ಡೌನ್ ಮತ್ತೆ ಜಾರಿಗೊಳಿಸಲು ನಿರಾಕರಿಸಿದೆ.

ಆದರೆ ಸರಕಾರದ ನಿರ್ಧಾರವನ್ನೂ ಲೆಕ್ಕಿಸದೇ ವ್ಯಾಪಾರಸ್ಥರು ಜಾಗೂ ಜನ ಸಾಮಾನ್ಯರು ಸರದಿ ಮೇಲೆ ತಾವೇ ಲಾಕ್‌ಡೌನ್ ವಿಧಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.

ರಾಜ್ಯದ ಅನೇಕ ನಗರ ಪಟ್ಟಣ ಪ್ರದೇಶಗಳಲ್ಲಿ ಜನ ಸ್ವಯಂ ಪ್ರೇರಿತವಾಗಿ ಲಾಕ್‌ಡೌನ್‌ಗೆ ಕರೆ ನೀಡಿದ್ದಾರೆ. ಇನ್ನು ವ್ಯಾಪಾರಸ್ಥರಂತೂ ಅಂಗಡಿ ಶಟರ್‍ ತೆಗೆಯಲೇ ಒಪ್ಪುತ್ತಿಲ್ಲ.

ಬೆಂಗಳುರಿನ ಅನೇಕ ಬಡಾವಣೆಗಳಲ್ಲಿ ವ್ಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಲಾಕ್‌ಡೌನ್ ಜಾರಿಗೊಳಿಸಿದ್ದಾರೆ.

ಇದೇ ವೇಳೆ ಬುಧವಾರ ಸಂಪೂರ್ಣ ಲಾಕ್‌ಡೌನ್ ಮಾಡುವಂತೆ ಬೆಂಗಳೂರಿನ ಶಾಂತಿನಗರ ಶಾಸಕ ಹ್ಯಾರಿಸ್ ತಮ್ಮ ಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಮಧ್ಯೆ ಮಂಗಳವಾರ ರಾಜ್ಯದಲ್ಲಿ ಒಟ್ಟು 1498 ಹೊಸ ಸೋಂಕಿನ ಪ್ರಕರಣಗಳು ಪತ್ತೆಯಾದರೇ 571 ಮಂದಿ ಗುಣಮುಖರಾಗಿದ್ದಾರೆ.

ಇದೂ ಸೇರಿದಂತೆ ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 15297ಗೆ ಏರಿಕೆಯಾಗಿದೆ ಮತ್ತು 11,361 ಮಂದಿ ಗುಣಮುಖರಾಗಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ದಾಖಲಾದ 800 ಹೊಸ ಕೇಸೂ ಸೇರಿ ಒಟ್ಟು 9395 ಸಕ್ರಿಯ ಸೋಂಕಿತರಿದ್ದು, 1810 ಮಂದಿ ಗುಣಮುಖರಾಗಿದ್ದಾರೆ.

Leave A Reply

Your email address will not be published.

sixteen − 9 =