123Kannada.in Kannada News Live Alerts

ಹತ್ರಾಸ್ ಪ್ರಕರಣ, ವಿಚಾರಣೆಯಿಂದ ರೈತನಿಗೆ ಹಾನಿ

ಹತ್ರಾಸ್ ಪ್ರಕರಣದ ವಿಚಾರಣೆ ರೈತನಿಗೆ ಹಾನಿಯನ್ನುಂಟುಮಾಡುತ್ತಿದೆ

0

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಘಟನೆಯ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಆದರೆ ಸಿಬಿಐ ತನಿಖೆಯಿಂದ ತನಗೆ ತೀವ್ರ ಹಾನಿಯಾಗಿದೆ ಎಂದು ರೈತ ಹೇಳಿಕೊಂಡಿದ್ದಾನೆ.

ಕಾರಣ ಬಾಲಕಿ ಅತ್ಯಾಚಾರಕ್ಕೊಳಗಾದ ಗ್ರಾಮದಲ್ಲಿ, ಘಟನೆ ನಡೆದ ಸ್ಥಳದಲ್ಲಿ ಸಿಬಿಐ ಅಧಿಕಾರಿಗಳು ಪದೇ ಪದೇ ಪರಿಶೀಲಿಸುತ್ತಿದ್ದಾರೆ, ಓಡಾಡುತ್ತಿದ್ದಾರೆ, ಅಪರಾಧದ ಸ್ಥಳದ ಗುರುತನ್ನು ಮತ್ತು ಕುರುಹನ್ನು ಉಳಿಸಲು ಜಮೀನಿನಿಂದ ದೂರವಿರಲು ಅದರ ಮಾಲೀಕರಿಗೆ ತಿಳಿಸಲಾಗಿದೆ.

ಸಿಬಿಐ ಅಧಿಕಾರಿಗಳ ಆದೇಶದಂತೆ ಜಮೀನಿನ ಮಾಲೀಕರು ತೋಟಕ್ಕೆ ಹೋಗದೆ, ಬೆಳೆಗೆ ನೀರಿಲ್ಲದೆ ಒಣಗಿದೆ, ಕಳೆಗಳಿಂದಾಗಿ ಕೆಲವು ಬೆಳೆ ನಾಶವಾಗಿದೆ, ಇದಲ್ಲದೆ ಪದೇ ಪದೇ ಅನೇಕ ಜನರುಓಡಾಡಿ ತುಳಿದು ಬೆಳೆ ನಾಶವಾಗಿದೆ.

ರೈತನು 50,000 ರೂ.ಗಿಂತ ಹೆಚ್ಚಿನ ನಷ್ಟವನ್ನು ಅನುಭವಿಸಿದ್ದಾನೆ ಎಂದು ತನ್ನ ದುಃಖ ತೋಡಿಕೊಂಡಿದ್ದಾನೆ .. ಇದುವರೆಗೆ ಕುಟುಂಬದ ಎಲ್ಲ ಸದಸ್ಯರು ಮಾಡಿದ ಕೆಲಸ ವ್ಯರ್ಥವಾಯಿತು ಮತ್ತು ಸರ್ಕಾರ ತಮಗೆ ಪರಿಹಾರ ನೀಡುತ್ತದೆಯೇ ಎಂದು ಆ ಕುಟುಂಬ ಕೋರುತ್ತಿದೆ.

ಸರ್ಕಾರ ಈ ರೈತನ ದನಿಯನ್ನು ಆಲಿಸುತ್ತದೆಯೋ ಮತ್ತು ಬಡ ರೈತನಿಗೆ ಸರಿಯಾದ ಪರಿಹಾರವನ್ನು ನೀಡುತ್ತದೆಯೋ ಎಂದು ಕಾದು ನೋಡಬೇಕು.

Source ಹತ್ರಾಸ್ ಪ್ರಕರಣ, ವಿಚಾರಣೆಯಿಂದ ರೈತನಿಗೆ ಹಾನಿ
Via Kannada News Today
Leave A Reply

Your email address will not be published.

three × five =