ಪಾಲಕ್ಕಾಡ್‌ನಲ್ಲಿ ಕಲಬೆರಕೆ ಮದ್ಯ ಸೇವಿಸಿ ಐವರು ಸಾವು

five people died after consuming adulterated liquor : ಕೇರಳ ರಾಜ್ಯದ ಪಾಲಕ್ಕಾಡ್ ಜಿಲ್ಲೆಯಲ್ಲಿ ಕಲಬೆರಕೆ ಮದ್ಯ ಸೇವಿಸಿ ಐವರು ಸಾವನ್ನಪ್ಪಿರುವ ಧಾರುಣ ಘಟನೆ ಸಂಭವಿಸಿದೆ.

ಕಲಬೆರಕೆ ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ವಲಾರ್ ಪೊಲೀಸರು ತಿಳಿಸಿದ್ದಾರೆ. ವ್ಯಕ್ತಿಯೊಬ್ಬ ತಾನು ಮದ್ಯದಲ್ಲಿ ಸ್ಯಾನಿಟೈಜರ್ ಬೆರೆಸಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಕಲಬೆರಕೆ ಮದ್ಯದ ಘಟನೆಯ ಬಗ್ಗೆ ತಜ್ಞರು ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಖಾಲಿ ಮದ್ಯದ ಬಾಟಲಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

123Kannada (Kannada News) :

ಕೇರಳದ ಪಾಲಕ್ಕಾಡ್‌ನಲ್ಲಿ ಕಲಬೆರಕೆ ಮದ್ಯ ಸೇವಿಸಿ ಐವರು ಸಾವು

ಪಾಲಕ್ಕಾಡ್ (ಕೇರಳ) : ಕೇರಳ ರಾಜ್ಯದ ಪಾಲಕ್ಕಾಡ್ ಜಿಲ್ಲೆಯಲ್ಲಿ ಒಂದು ದುರಂತ ಘಟನೆ ನಡೆದಿದ್ದು, ಕಲಬೆರಕೆ ಮದ್ಯ ಸೇವಿಸಿ ಐದು ಜನರು ಸಾವನ್ನಪ್ಪಿದ್ದಾರೆ. ಕಲಬೆರಕೆ ಮದ್ಯ ಸೇವಿಸಿ ಐವರು ಸಾವನ್ನಪಿರುವುದಾಗಿ ಪ್ರಾಥಾಮಿಕ ತನಿಖೆಯಿಂದ ದೃಢಪಟ್ಟಿದೆ.

ವರ್ಯಾರ್‌ನ ಬುಡಕಟ್ಟು ಪ್ರದೇಶದಲ್ಲಿ ಮೂವರು ಮಹಿಳೆಯರು ಸೇರಿದಂತೆ ಒಂಬತ್ತು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ದಾಖಲಾದವರಲ್ಲಿ ರಾಮನ್, ಅಯ್ಯಪ್ಪನ್, ಅರುಣ್, ಶಿವನ್ ಮತ್ತು ಮೂರ್ತಿ ಎಂಬುವವರಿದ್ದಾರೆ. ಬುಡಕಟ್ಟು ಕಾಲೋನಿಯಲ್ಲಿ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯ ಸಮಯದಲ್ಲಿ ಕಲಬೆರಕೆ ಮದ್ಯ ಸೇವಿಸಿದ್ದಾರೆ, ಎನ್ನಲಾಗಿದೆ.

ಇದನ್ನೂ ಓದಿ : ಕೋವಿಡ್ ಪ್ರಕರಣಗಳು ಇಳಿಮುಖ, ಕಡಿಮೆ ಬೆಲೆಗೆ ಜಗತ್ತಿಗೆ ಲಸಿಕೆ : ಮೋದಿ

ಕಲಬೆರಕೆ ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ವಲಾರ್ ಪೊಲೀಸರು ತಿಳಿಸಿದ್ದಾರೆ. ವ್ಯಕ್ತಿಯೊಬ್ಬ ತಾನು ಮದ್ಯದಲ್ಲಿ ಸ್ಯಾನಿಟೈಜರ್ ಬೆರೆಸಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಕಲಬೆರಕೆ ಮದ್ಯದ ಘಟನೆಯ ಬಗ್ಗೆ ತಜ್ಞರು ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಖಾಲಿ ಮದ್ಯದ ಬಾಟಲಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.
Source ಕಲಬೆರಕೆ ಮದ್ಯ ಸೇವಿಸಿ ಐವರು ಸಾವು
Via Kannada News Today