ಕೊರೊನಾ ಸದೆ ಬಡೆದ ದುರ್ಗಾ ಮಾತ, ಕಲಾವಿದನ ಕೈಚಳಕಕ್ಕೆ ಶಶಿ ತರೂರ್ ಫಿದಾ

'ಕೋವಿಡ್ -19 ಥೀಮ್' ಹೊಂದಿರುವ ದುರ್ಗಾ ದೇವಿಯ ಪ್ರತಿಮೆಯನ್ನು ನೋಡಿ ಕಾಂಗ್ರೆಸ್ ಮುಖಂಡ ಶಶಿ ತರೂರ್ ಫಿದಾ ಆಗಿದ್ದಾರೆ.

ಈ ತಿಂಗಳ 22 ರಿಂದ ಪಶ್ಚಿಮ ಬಂಗಾಳದಲ್ಲಿ ಐದು ದಿನಗಳ ಕಾಲ ವೈಭವದಿಂದ ದುರ್ಗಮಾತಾ ಆಚರಣೆಗಳು ನಡೆಯಲಿವೆ. ದುರ್ಗಾ ದೇವಿಯ ಪ್ರತಿಮೆಗಳನ್ನು ಅನೇಕ ಸ್ಥಳಗಳಲ್ಲಿ ನಿರ್ಮಿಸಲಾಗಿದೆ. 

123Kannada (Kannada News) :

ಈ ತಿಂಗಳ 22 ರಿಂದ ಪಶ್ಚಿಮ ಬಂಗಾಳದಲ್ಲಿ ಐದು ದಿನಗಳ ಕಾಲ ವೈಭವದಿಂದ ದುರ್ಗಮಾತಾ ಆಚರಣೆಗಳು ನಡೆಯಲಿವೆ. ದುರ್ಗಾ ದೇವಿಯ ಪ್ರತಿಮೆಗಳನ್ನು ಅನೇಕ ಸ್ಥಳಗಳಲ್ಲಿ ನಿರ್ಮಿಸಲಾಗಿದೆ. ಈ ನಡುವೆ ಇಲ್ಲೊಂದು ಪ್ರತಿಮೆ ಎಲ್ಲರ ಗಮನ ಸೆಳೆದಿದೆ.

ಕೋಲ್ಕತ್ತಾದ ದುರ್ಗಾ ಪೂಜಾ ಸಮಿತಿಯ ಆಶ್ರಯದಲ್ಲಿ ಸ್ಥಾಪಿಸಲಾದ  ‘ಕೋವಿಡ್ -19 ಥೀಮ್’ ಹೊಂದಿರುವ ದುರ್ಗಾ ದೇವಿಯ ಪ್ರತಿಮೆಯನ್ನು ನೋಡಿ ಕಾಂಗ್ರೆಸ್ ಮುಖಂಡ ಶಶಿ ತರೂರ್ ಫಿದಾ ಆಗಿದ್ದಾರೆ. ತರೂರ್ ಅವರು “ಬ್ರಿಲಿಯಂಟ್ ” ಎಂದು ಟ್ವೀಟ್ ಮಾಡಿದ್ದಾರೆ. ಆ ಅನಾಮಧೇಯ ಶಿಲ್ಪಿ, ಡಿಸೈನರ್ ಯಾರಾದರೂ ಸರಿ ನನ್ನ ಸೆಲ್ಯೂಟ್ ಎಂದು ಟ್ವೀಟ್ ಮಾಡಿದ್ದಾರೆ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.
Source ಕೊರೊನಾ ಸದೆ ಬಡೆದ ದುರ್ಗಾ ಮಾತ, ಕಲಾವಿದನ ಕೈಚಳಕಕ್ಕೆ ಶಶಿ ತರೂರ್ ಫಿದಾ
Via Kannada News Today