Free Buss Pass: ರಾಜ್ಯದಲ್ಲಿ ಫ್ರೀ ಬಸ್ ಸ್ಕಿಮ್ ಜಾರಿಗೆ ದಿನಗಣನೆ ಶುರು

ಕಾಂಗ್ರೆಸ್(Congress) ಸರ್ಕಾರವು ವಿಧಾನಸಭಾ ಚುನಾವಣೆ ಸಮಯದಲ್ಲಿ ಕೆಲವು ಭರವಸೆಗಳನ್ನು ನೀಡಿತ್ತು ಅದರಲ್ಲಿ ಮಹಿಳೆಯರಿಗೆ ಉಚಿತ ಬಸ್ ಪಾಸ್(Buss Pass) ನೀಡುವುದು ಒಂದಾಗಿತ್ತು.ಇದೀಗ ಸಿಎಮ್ ಸಿದ್ದರಾಮಯ್ಯ(Siddaramaiha) ಸಾರಿಗೆ ಇಲಾಖೆ ಮಾರ್ಗ ಸೂಚಿ ಸಿದ್ಧತೆಗೆ ಸೂಚನೆಯನ್ನು ನೀಡಿದೆ.ಸದ್ಯದಲ್ಲೇ ಷರತ್ತು ಮತ್ತು ನಿಭಂದನೆ ಗಳ ಮಾರ್ಗ ಸೂಚಿಯನ್ನು ಹೊರಡಿಸಲಾಗಿದೆ.
ಕಂಡೀಶನ್ ಅಪ್ಲೈ?
ಹೌದು ಇದೀಗ ಕಾಂಗ್ರೆಸ್ ಸರ್ಕಾರ ಮಹಿಳೆಯರ ಫ್ರೀ ಬಸ್ ಪಾಸ್ ಬಗ್ಗೆ ತಿಳಿಸಿದ್ದು ಅದನ್ನು ಯಾವ ರೀತಿ ಉಪಯೋಗಿಸಬೇಕು ಹಾಗೆ ಎಲ್ಲಿ ಉಪಯೋಗಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆದಿದೆ.
ಹಾಗೆ ಉಚಿತ ಬಸ್ ಸ್ಕಿಮ್ ಪಡೆದವರು ಎಲ್ಲ ಕಡೆ ಓಡಾಡಬಹುದಾ? ಎಂಬ ಕುತೂಹಲ ಜನಸಾಮಾನ್ಯರಲ್ಲಿ ಇದೆ.
ಈ ಸ್ಕಿಮ್ ಪಡೆದವರು ಕರ್ನಾಟಕ ರಾಜ್ಯದ ಒಳಗಡೆ ಮಾತ್ರ ಓಡಾಡಬಹುದು, ಅದನ್ನು ಹೊರತಾಗಿ ದೇಶದ ಹೊರಗಡೆ ಹೋಗಲು ಸಾಧ್ಯವಿಲ್ಲ,
ಉಚಿತ ಬಸ್ ಸ್ಕಿಮ್ ಪಡೆಯಲು ಆನ್ಲೈನ್ ಅಪ್ಲಿಕೇಶನ್ ಹಾಕಬೇಕಾ?
ಬೇಡ, ಫ್ರೀ ಬಸ್ ಸ್ಕಿಮ್ ಪಡೆಯಲು ಯಾವುದೇ ರೀತಿಯ ಅರ್ಜಿ ಸಲ್ಲಿಸಬೇಕಾಗಿಲ್ಲ ಅದನ್ನು ಬದಲಾಗಿ ಉಚಿತ ಬಸ್ ಸ್ಕಿಮ್ ಪಡೆದ ಪಲಾನುಭವಿಗಳು ಆಧಾರ್ ಕಾರ್ಡ್ ಹೊಂದಿರ್ಬೇಕು, ಕರ್ನಾಟಕ ರಾಜ್ಯದ ಯಾವುದೇ ಮೂಲೆಗೆ ಹೋಗಬೇಕಾದರೂ ಬಾರಿ ಆಧಾರ್ ಕಾರ್ಡ್ ಪ್ರೂಫ್ ತೋರಿಸಿದರೆ ಸಾಕು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯ ಇಲ್ಲ.
ಕರ್ನಾಟಕ ರಾಜ್ಯದ ಹೊರತು ಪಡಿಸಿ ಬೇರೆ ರಾಜ್ಯದವರು ಇದರ ಉಪಯೋಗ ಪಡೆಯುವಂತೆ ಇಲ್ಲ ಅದಕ್ಕಾಗಿ ಸ್ಕಿಮ್ ಪಡೆದವರು ಕಡ್ಡಾಯ ವಾಗಿ ಆಧಾರ್ ಕಾರ್ಡ್ ಪ್ರತಿ ಹೊಂದಿರಬೇಕು ಹಾಗೆ ಅವರು ಕರ್ನಾಟಕದವರಿಗಿರಬೇಕು, ಬೇರೆ ರಾಜ್ಯದಿಂದ ಕೆಲಸಕ್ಕಾಗಿ ಒಲಸೆ ಬಂದವರಿಗೆ ಇದರ ಉಪಯೋಗ ದೊರೆಯುವುದಿಲ್ಲ.ಹಾಗಾಗಿ ಉಚಿತ ಬಸ್ ಸ್ಕಿಮ್ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಪ್ರತಿ ಮಹಿಳೆಯರು ಇದರ ಉಪಯೋಗ ಪಡೆದುಕೊಳ್ಳಿ.