Gold Rate Today: ಬಂಗಾರದ ಬೆಲೆಯಲ್ಲಿ ಧಿಡೀರ್ ಏರಿಕೆ, ಇಂದಿನ ದರ ಇಲ್ಲಿದೆ

ಮಹಿಳೆಯರಿಗೆ ಚಿನ್ನ ಅಂದ್ರೆ ಬಹಳ ಪ್ರೀತಿ ಅದರಲ್ಲೂ ಕೆಲವು ವಿಶೇಷ ಸಂದರ್ಭಗಳಲ್ಲಿ ಚಿನ್ನ ಖರೀದಿ ಮಾಡುವುದು ವಾಡಿಕೆ ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನದ ದರ ಸಿಕ್ಕಾಪಟ್ಟೆ ಏರಿಕೆ ಕಂಡಿದೆ ಹಾಗಾಗಿ ಚಿನ್ನ ಖರೀದಿ ಮಾಡುವುದಕ್ಕೂ ಚಿನ್ನ ಹೂಡಿಕೆ ಮಾಡುವುದಕ್ಕೂ ಜನರು ಸಾಕಷ್ಟು ಸಮಸ್ಯೆ ಅನುಭವಿಸಬೇಕಾಗಿದೆ. 24 ಕ್ಯಾರೆಟ್ ಚಿನ್ನ 10 ಗ್ರಾಂ ಗೆ 61,960 ಗೆ ತಲುಪಿದೆ. ಅದೇ ರೀತಿಯಾಗಿ 22 ಕ್ಯಾರೆಟ್ ಚಿನ್ನದ ಬೆಲೆಯು ಹೆಚ್ಚಾಗಿದ್ದು 56,800ರೂ ಗಳಿಗೆ ಏರಿಕೆಯಾಗಿದೆ ಇನ್ನು ಚಿನ್ನದ ಬೆಲೆಯ ಜೊತೆಗೆ ಬೆಳ್ಳಿ ಬೆಲೆಯಲ್ಲಿಯೂ ಕೂಡ ಏರಿಕೆ ಕಂಡು ಬಂದಿದೆ ಬೆಳ್ಳಿ ಪ್ರತಿ ಕೆಜಿಗೆ 78,800 ಗಳಷ್ಟು ಆಗಿದ್ದು ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ.
ಬಂಗಾರದ ಬೆಲೆ ಇದೇ ರೀತಿ ಏರಿಕೆಯನ್ನು ಕಂಡರೆ 2023-24ರ ಸಾಲಿನಲ್ಲಿ 68,000ಗಳಿಗೆ ತಲುಪುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ. ಇನ್ನು ಹೂಡಿಕೆ ದರವನ್ನು ನೋಡುವುದಾದರೆ ಬಂಗಾರದ ಮೇಲೆ 10 ರಿಂದ 15% ಆದಾಯ ಹೆಚ್ಚಾಗುವ ಸಾಧ್ಯತೆ ಇದೆ.
ಡಾಲರ್ ಗಳಲ್ಲಿ ಏರಿಕೆ:
ಪ್ರತಿ ಔನ್ಸ್ ಗೆ 1869 ಡಾಲರ್ ಗಳಾಗಿದ್ದು ಕಳೆದ ವರ್ಷ 1636 ಡಾಲರ್ ಗಳು ಇದ್ದವು. ಮುಂದುವರೆದರೆ ಡಾಲರ್ ವರೆಗೂ ಜಿಗಿತ ಕಂಡರೆ ಆಶ್ಚರ್ಯವೆಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಬಂಗಾರದ ಬೆಲೆ 28 ಗ್ರಾಂ ಅಥವಾ ಪ್ರತಿ ಔನ್ಸ್ ಗೆ 2078 ಡಾಲರ್ ತಲುಪಿದರೆ ಭಾರತೀಯ ಮಾರುಕಟ್ಟೆಯಲ್ಲಿ 68,000ಗಳಿಗೆ ಏರಿಕೆ ಆದರೆ ಆಶ್ಚರ್ಯ ಪಡುವ ಅಗತ್ಯವಿಲ್ಲ.
1973ರ ನಂತರದ ದಿನಗಳಲ್ಲಿ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ 5 ಸಲ ಬಂಗಾರದ ಬೆಲೆ ಜಾಸ್ತಿಯಾಗಿದೆ. ಪ್ರಪಂಚದಲ್ಲಿ ಎರಡನೇ ಅತಿ ದೊಡ್ಡ ಬಂಗಾರದ ಮಾರುಕಟ್ಟೆ ಹೊಂದಿರುವ ಭಾರತದಲ್ಲಿ ಚಿನ್ನದ ದರವನ್ನು ತಗ್ಗಿಸಲು ಸ್ವಲ್ಪ ಮಟ್ಟಿಗೆ ಆದರೂ ಆಮದು ಸುಂಕ ಇಳಿಕೆ ಮಾಡಬೇಕು. ಹಾಗಾದರೆ ಮಾತ್ರ ಬಂಘಾರದ ಖರಿದಿಯೂ ಜಾಸ್ತಿ ಆಗಬಹುದು ಎನ್ನುವುದು ತಜ್ಞರ ಅಭಿಪ್ರಾಯ.