ಸರಕಾರದ ಕಾರ್ಮಿಕ ನೀತಿ ವಿರೋಧಿಸಿ 4ರಂದು ಸರಕಾರಿ ನೌಕರರ ಪ್ರತಿಭಟನೆ

123Kannada (Kannada News) :

ಬೆಂಗಳೂರು : ತುಟ್ಟಿಭತ್ಯೆ ಹಿಂಬಾಕಿ ಸ್ಥಗಿತ ಹಾಗೂ ರಜೆ ನಗದೀಕರಣ ಸೌಲಭ್ಯ ರದ್ದು ಮಾಡಿರುವ ಸರಕಾರದ ಕ್ರಮವನ್ನು ಖಂಡಿಸಿ ಸರಕಾರಿ ನೌಕರರು ಪ್ರತಿಭಟನೆಗೆ ನಿಧರಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳ ಈ ನಿರ್ಧಾರದಿಂದಾಗಿ ಸಂಕಷ್ಟ ಸಮಯದಲ್ಲಿ ನೌಕರರ ಹಿತಕ್ಕೆ ಧಕ್ಕೆ ಒದಗಿದೆ ಎಂದು ಆರೋಪಿಸಲಾಗಿದೆ.

ಸರಕಾರದ ಕ್ರಮವನ್ನು ಪ್ರತಿಭಟಿಸುವ ಸಲುವಾಗಿ ಗುರುವಾರ (ಜೂ. 4) ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗಲು ತನ್ನ ಸದಸ್ಯರಿಗೆ ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕುಟವು ಕರೆ ನೀಡಿದೆ.

ದೇಶ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಉದ್ಯೋಗ ಸೃಷ್ಟಿಗೆ ಸರಕಾರ ಮುಂದಾಗಬೇಕಿತ್ತು.

ಆದರೆ ವಿವಿಧ ಇಲಾಖೆಗಳ ವಿಲೀನದ ನೆಪದಲ್ಲಿ ಇರುವ ಉದ್ಯೋಗಗಳನ್ನೇ ಕಡಿತ ಮಾಡಲು ಸರಕಾರ ಹೊರಟಿದೆ ಎಂದು ಒಕ್ಕೂಟ ಆಪಾದಿಸಿದೆ.

ರಾಜ್ಯ ಸರಕಾರವು ಯಾವುದೇ ಹೆಚ್ಚಿನ ಭತ್ಯೆಗಳ ಉಲ್ಲೇಖ ಇಲ್ಲದೇ ದುಡಿಮೆಯ ಅವಧಿಯನ್ನು ಎಂಟರಿಂದ ಹತ್ತು ಗಂಟೆಗಳಿಗೆ ವಿಸ್ತರಿಸುವುದಕ್ಕೆ ಒಪ್ಪಿಗೆ ಸೂಚಿಸಿರುವುದನ್ನೂ ಒಕ್ಕಟ ಖಂಡಿಸಿದೆ.

ರಾಜ್ಯ ಮತ್ತು ಕೇಂದ್ರ ಸರಕಾರದ ನೌಕರ/ಕಾರ್ಮಿಕ ವಿರೋಧಿ ನೀಡಿತಳನ್ನು ವಿರೋಧಿಸಿ ಜೂನ್ ನಾಲ್ಕರಂದು ಅಖಿಲ ಭಾರತ ಪ್ರತಿಭಟನಾ ದಿನಾಚರಣೆಗೆ ಒಕ್ಕೂಟವು ಕರೆ ನೀಡಿದೆ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.