ಕೋಟಿ ರೂ ಬೆಲೆಯ Bmw ವಿಲಾಸಿ ಕಾರು ಬಿಡುಗಡೆ

123Kannada (Kannada News) :

ಬೆಂಗಳೂರು: ಪ್ರತಿಷ್ಠಿತ ಕಾರು ತಯಾರಿಕಾ ಸಂಸ್ಥೆಯಾದ ಬಿಎಂಡಬ್ಲ್ಯು ಗ್ರೂಪ್‌ ಇಂಡಿಯಾ ತನ್ನ ಹೊಸ ಎಕ್ಸ್‌6 ಕಾರನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ಹೊಸ ಸ್ಪೋರ್ಟ್ಸ್‌ ಆಯಕ್ಟಿವಿಟಿ ಕೂಪ್‌-ಎಸ್‌ಎಸಿ ಈಗ ಮಾರಾಟಕ್ಕೆ ಲಭ್ಯವಿದ್ದು, ಎಲ್ಲ ಡೀಲರ್‌ಗಳ ಬಳಿ ಬುಕಿಂಗ್‌ ಮಾಡಬಹುದಾಗಿದೆ.

ಗ್ರಾಹಕರ ವೈಯಕ್ತಿಕ ಬೇಡಿಕೆ ಮತ್ತು ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ತಕ್ಕಂತೆ ಈ ಕಾರ್‌ನಲ್ಲಿ ವಿಶೇಷ ಸೌಲಭ್ಯಗಳನ್ನು ಅಳವಡಿಸಲಾಗಿದೆ ಎಂದು ಕಂಪನಿಯ ಅಧ್ಯಕ್ಷ ಅರ್ಲಿಂಡೊ ಥೆಸೇರಾ ಹೇಳಿದ್ದಾರೆ.

ಈ ಕಾರು ಎರಡು ಮಾದರಿಗಳಲ್ಲಿ- ಎಕ್ಸ್‌ಲೈನ್‌ ಮತ್ತು ಎಂ ಸ್ಪೋರ್ಟ್‌- ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಕಾರುಗಳು ಎಲ್ಲ ಬಗೆಯ ಅತ್ಯಾಧುನಿಕ ಸಾಧನಗಳನ್ನು ಹೊಂದಿರುತ್ತವೆ ಎಂದು ಸಂಸ್ಥೆ ತಿಳಿಸಿದೆ.

ಈ ವಿಲಾಸಿ ಕಾರಿನ ಮೂಲಬೆಲೆ 95 ಲಕ್ಷ ರೂಗಳಾಗಿದ್ದು, ಆಸಕ್ತರು ಮನೆಯಲ್ಲಿ ಕುಳಿತೇ www.bmw-contactless.in ಜಾಲದ ಮೂಲಕ ಬುಕ್ ಮಾಡಬಹುದಾಗಿದೆ ಎಂದು ಸಂಸ್ಥೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.