Election 2023: ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ, ಬಡವರಿಗೆ ಬೆಳಕು ನೀಡುವ ಭರವಸೆ

ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದ್ದು, ಎಲ್ಲ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿದೆ. ಜನರಿಗೆ ಒಂದಲ್ಲ ಒಂದು ಬೇಡಿಕೆಯನ್ನು ಈಡೇರಿಸುವಂತೆ ಹೇಳಿ ಜನರಲ್ಲಿ ಭರವಸೆ ಮೂಡಿಸುವ ಪ್ರಯತ್ನ ನಡೆದಿದ್ದು ಕಾಂಗ್ರೆಸ್(Congress) ಹಾಗೂ ಬಿಜೆಪಿ(BJP) ಎರಡೂ ಪಕ್ಷದವರು ಚುನಾವಣೆ ಪ್ರಣಾಳಿಕೆ ಒಂದನ್ನು ಬಿಡುಗಡೆ ಮಾಡಿದ್ದಾರೆ. ಬಿಜೆಪಿ ಪಕ್ಷದವರು ನಿನ್ನೆ ಬಿಡುಗಡೆ ಮಾಡಿದ್ದು ಕಾಂಗ್ರೆಸ್ ಪಕ್ಷದವರು ಇಂದು ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.
ಕಾಂಗ್ರೆಸ್ಸಿನ ಚುನಾವಣೆ ಪ್ರಣಾಳಿಕೆ:
ಮಲ್ಲಿಕಾರ್ಜುನ್ ಖರ್ಗೆಯವರು ಖಾಸಗಿ ಹೋಟೆಲ್ ಒಂದರಲ್ಲಿ ಚುನಾವಣೆ ಪ್ರಣಾಳಿಕೆ ಮಾಡಿದ್ದು, ಆ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್(D.K Shivakumar) ಮುಂತಾದ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು. ಈ ಸಮಯದಲ್ಲಿ ಮಾತನಾಡಿದ ಅವರು ಈ ಮೊದಲು ಕಾಂಗ್ರೆಸ್ ಬಂದಾಗಲೂ ಸಹ ತಾವು ನೀಡಿದ ಭರವಸೆಯನ್ನು ಜನರ ಬೇಡಿಕೆ ಈಡೇರಿಸಿರುವುದಾಗಿ ಹೇಳಿದರು.

ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆ ಯಲ್ಲಿ ಏನೇನಿದೆ?
ಎಲ್ಲ ಸಮುದಾಯದ ಹಿತಕ್ಕಾಗಿ ಮಾಡಿದ ಪ್ರಣಾಳಿಕಯಾಗಿದ್ದು ಯಾವುದೇ ತಾರತಮ್ಯವಿಲ್ಲ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. ಏನೇನು ಭರವಸೆ ಜನರಿಗೆ ಕಾಂಗ್ರೆಸ್ ನೀಡಿದೆ ಎಂದು ತಿಳಿದುಕೊಳ್ಳೋಣ ಬನ್ನಿ.
*ಬಿಪಿ ಎಲ್ ಕಾರ್ಡ್ ದಾರರಿಗೆ ಪ್ರತಿ ವ್ಯಕ್ತಿಗೂ 10 ಕೆ.ಜಿ ಅಕ್ಕಿ
*ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನನಿಗೆ ಮಾಸಿಕ 2000ರೂ.
*ಗೃಹಜ್ಯೋತಿ ಯೋಜನೆಯಡಿ 200ಯೂನಿಟ್ ವಿದ್ಯುತ್
ಡಿಪ್ಲೋಮಾ ಪಧವೀಧರರಿಗೆ 1500 ರೂ.
ಹೀಗೆ ಮುಂತಾದ ಜನಹಿತ ಯೋಜನೆಗಳಿದ್ದು, ಜನರಿಗೆ ಸಹಾಯಕವಾಗಲಿವೆ.