BPL Card Updates: ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಹಿ ಸುದ್ದಿ ಕೊಟ್ಟ ಸರಕಾರ,

ಅಯುಷ್ಮಾನ್ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕಾರ್ಡ್(BPL Card) ಹೊಂದಿರುವ ಜನರು ಮಾತ್ರ ಸರಕಾರದಿಂದ ಬಂದ ಉಚಿತ ಸೇವೆಯನ್ನು ಪಡೆದುಕೊಳ್ಳಬಹುದು. ನಾವು ನೋಡಿದ ಪ್ರಕಾರ ದೇಶದ ಬಡ ಜನರಿಗಾಗಿ ಹಾಗೂ ಹಿಂದುಳಿದ ಜನಗಳಿಗೆ ಸರಕಾರವು ನಾನಾ ರೀತಿಯ ಯೋಜನೆಗಳನ್ನು ಮಾಡುತ್ತಲೇ ಇದೆ, ಅದು ಹೆಮ್ಮೆಯ ವಿಚಾರ ಕೂಡ, ಹಾಗೆ ದೇಶದ ನಾಗರಿಕರಿಗೆ ಉಚಿತ ಸೌಲಭ್ಯ ಜೊತೆಗೆ ಉಚಿತ ರೇಷನ್ (Ration) ಹೀಗೆ ನಾನಾ ತರಹದ ಸೌಲಭ್ಯಗಳನ್ನು ನೀಡುತ್ತಲೇ ಬಂದಿದ್ದಾರೆ.

ಇನ್ನು ಮುಂದೆ BPL Card ( ಬಿಪಿಎಲ್ ಕಾರ್ಡ್) ಹೊಂದಿದ ಪ್ರತಿಯೊಂದು ಪ್ರಜೆಗೂ ಸರಕಾರದಿಂದ ಉಚಿತ ಚಿಕಿತ್ಸೆ ನೀಡಲು ಮುಂದಾಗಿದೆ, ಇದು ಯಾವ ರೀತಿಯಲ್ಲಿ ಉಪಯೋಗ ವಾಗಬಹುದು ಎಂದು ಸಂಪೂರ್ಣ ಮಾಹಿತಿ ತಿಳಿಯೋಣ.

ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಹಿಸುದ್ದಿ:
ಸರಕಾರ ಅನೇಕ ರೀತಿಯ ಉಪಯೋಗಗಳನ್ನು ತಂದಿದ್ದು ಇದೀಗ ದೇಶದ ನಾಗರಿಕ ಜನತೆಯ ಆರೋಗ್ಯದ ಬಗ್ಗೆ ಗಮನವಹಿಸಿದೆ, ಈ ಹಿಂದೆಯೂ ಕೂಡ ಅಯುಷ್ಮಾನ್ ಕಾರ್ಡ್ (Ayushman Card) ಯೋಜನೆ ಜಾರಿಗೆ ತಂದಿದ್ದು ಅನೇಕ ಜನರು ಇದರ ಉಪಯೋಗವನ್ನು ಪಡೆದುಕೊಂಡಿದ್ದಾರೆ.

ಅಯುಷ್ಮಾನ್ ಕಾರ್ಡ್ ಅಲ್ಲಿ ಸ್ವಲ್ಪ್ ಬದಲಾವಣೆ ಮಾಡಿದ್ದೂ, ಇದರ ಅಡಿಯಲ್ಲಿ ಉಚಿತ ಸೌಲಭ್ಯ ಪಡೆಯುವ ನಾಗರಿಕರಿಗೆ ಇನ್ನು ಹೆಚ್ಚಿನ ಅನುಕೂಲವಾಗುವಂತೆ ಸರಕಾರ Co- branded Card ( ಕೋ ಬ್ರಾಂಡೆಡ್ ಕಾರ್ಡ್ ) ವಿತರಣೆ ಮಾಡಲು ಮುಂದಾಗಿದೆ, ಇದರ ಉಪಯೋಗ ಏನು ಹಾಗೆ ಇದನ್ನು ಯಾವ ರೀತಿ ಅಲ್ಲಿ ಪಡೆಯಬಹುದು ಎನ್ನುವ ವಿಚಾರ ತಿಳಿಯೋಣ.

BPL Card Updates
Image Source: India Today

Co- Branded Card ( ಕೋ ಬ್ರಾಂಡೆಡ್ ಕಾರ್ಡ್): ಸರಕಾರ ಇದೀಗ ಅರ್ಹ ನಾಗರಿಕರಿಗೆ ಕಾರ್ಡ್ ವಿತರಣೆ ಮಾಡಲು ತಯಾರಿ ನಡೆಸುತ್ತಿದ್ದಾರೆ,
ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಶೇಕಡಾ 30 ರಷ್ಟು ರಿಯಾಯಿತಿ ಸಿಗಲಿದೆ ಹಾಗೆ ಕೋ ಬ್ರಾಂಡೆಡ್ ಕಾರ್ಡ್ ಹೊಂದಿದವರು ಈ ಕಾರ್ಡಿನ ಸಂಪೂರ್ಣ ಉಚಿತ ಚಿಕಿತ್ಸೆ ಪಡೆಯುದರ ಜೊತೆಗೆ ಈ ಉಪಯೋಗವನ್ನು ದೇಶದ ಯಾವುದೇ ಮೂಲೆಯಲ್ಲೂ ಕೋ ಬ್ರಾಂಡೆಡ್ ಕಾರ್ಡ್ ನ ಮೂಲಕ ಉಚಿತ ಚಿಕಿತ್ಸೆಯನ್ನು ಪಡೆಯಬದುದು.