SSLC Result Rate: ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ದಿನಾಂಕ ಪ್ರಕಟ!

SSLC ನಮ್ಮ ಜೀವನದ ಮೊದಲ ಘಟ್ಟವನ್ನು ನಿರ್ಧರಿಸುವ ಅಂಶವಷ್ಟೇ, ಇದೇ ನಮ್ಮ ಕೊನೆಯ ಹಂತ ಇದರಲ್ಲಿ ಫೇಲ್ ಆದರೇ ನಮಗೆ ಭವಿಷ್ಯವೇ ಇಲ್ಲ ಎನ್ನುವ ಭಾವನೆ ಹೊಂದದೆ ಬರುವ ಫಲಿತಾಂಶವನ್ನು ಸ್ವೀಕರಿಸುವ ಮನಸ್ಸು ಮಕ್ಕಳಲ್ಲಿರಬೇಕು ಹಾಗೆಯೇ ಅವರಿಗೆ ಧೈರ್ಯ ನೀಡಿ ಪಾಸ್(Pass) ಆದರೂ ಫೇಲ್(Fail) ಆದರೂ ಮುಂದೆ ಉತ್ತಮವಾದ ಭವಿಷ್ಯ ರೂಪಿಸುವಲ್ಲಿ ಪೋಷಕರು ಸಹಕರಿಸಬೇಕು.

SSLC students result date announced
Image Source: The News Minute

ಮೇ ತಿಂಗಳಲ್ಲಿ ಫಲಿತಾಂಶ ಪ್ರಕಟ:

ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿದು ಈಗಾಗಲೆ ತಿಂಗಳಾಗಿದ್ದು ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಎಪ್ರಿಲ್ 24 ರಿಂದ ಮೌಲ್ಯಮಾಪನ ಆರಂಭವಾಗಿದ್ದು ಸುಮಾರು 60000 ಶಿಕ್ಷಕರು ಮೌಲ್ಯಮಾಪನ ಮಾಡಲಿದ್ದಾರೆ. ಇನ್ನೇನು ಎಲೆಕ್ಷನ್(Election) ಸಹ ಪ್ರಾರಂಭವಾಗಿದ್ದು ಅದರ ಬಿಡುವಿನಲ್ಲಿ ಕೆಲವು ಶಿಕ್ಷಕರನ್ನಷ್ಪೇ ಮೌಲ್ಯಮಾಪನಕ್ಕೆ ಕರೆದುಕೊಳ್ಳಲಾಗಿದೆ ಎನ್ನಲಾಗಿದೆ. ಇನ್ನೇನು ಕೆಲವೇ ದಿನ ಅಂದರೆ ಮೇ 15ರ ಒಳಗೆ ಫಲಿತಾಂಶ ಬರಲಿದೆ ಎಂದು ತಿಳಿದು ಬಂದಿದೆ.