Heart Attack: ಉಪ್ಪನ್ನು ಜಾಸ್ತಿ ಆಹಾರದಲ್ಲಿ ಬಳಸುದರಿಂದ ಹೃದಯಾಘಾತ !

ಯಾವುದೇ ವಸ್ತವನ್ನು ಅಥವಾ ಆಹಾರವನ್ನು ಮಿತಿಯಾಗಿ ಸೇವಿಸುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದೇ ಹೊರತು ಅದನ್ನು ಅತಿಯಾಗಿ ಸೇವಿಸುವುದರಿಂದಲ್ಲ. ಸಕ್ಕರೆಯನ್ನು ಅತಿಯಾಗಿ ಸೇವಿಸುವುದರಿಂದ ಹೇಗೆ ಸಕ್ಕರೆ ಖಾಯಿಲೆ ಬರುತ್ತದೆಯೋ ಉಪ್ಪಿನಿಂದಲೂ ಸಹ ಅನೇಕ ರೀತಿಯ ಖಾಯಿಲೆ ಬರುತ್ತದೆ.
ಉಪ್ಪಿನ ಅತಿಯಾದ ಸೇವನೆ ಹೃದಯಾಘಾತಕ್ಕೆ ಕಾರಣ:
ಉಪ್ಪು ಸೇವನೆಯಿಂದ ಹೃದಯಾಘಾತ(Heart Attack) ಉಂಟಾಗುತ್ತದೆ ಎನ್ನುವ ತಜ್ಞರ ಸಲಹೆ ಸೂಕ್ತವಾಗಿದೆ. ಅತಿಯಾದ ಉಪ್ಪಿನ ಸೇವನೆಯಿಂದ ರಕ್ತದೊತ್ತಡ ಸಮಸ್ಯೆ ಉಂಟಾಗಿ ಹೃದಯ ಸಂಬಂದಿತ ಖಾಯಿಲೆ ಉಂಟಾಗುತ್ತದೆ. ದೇಹದಲ್ಲಿ ಉಪ್ಪಿನಾಂಶ ಜಾಸ್ತಿಯಾದರೆ ಅಪಾಯ ತಪ್ಪಿದ್ದಲ್ಲ ಎನ್ನುವುದು ತಜ್ಞರ ಅಭಿಪ್ರಾಯ.

ಉಪ್ಪನ್ನು ಮಿತಿಯಾಗಿ ಬಳಸಿ:
ನಾವು ಆಹಾರದಲ್ಲಿ ಉಪ್ಪನ್ನು ಅತಿಯಾಗಿ ಬಳಸುವುದರಿಂದ ದೇಹದಲ್ಲಿ ಉಪ್ಪಿನಾಂಶ ಜಾಸ್ತಿಯಾಗಿ ಅದು ನೀರಾಗಿ ರಕ್ತವನ್ನು ಸೇರಿಕೊಳ್ಳುತ್ತದೆ. ಇದರಿಂದ ರಕ್ತದೊತ್ತಡ ಅಧಿಕವಾಗಿ ಹೃದಯಕ್ಕೆ ಕೆಲಸ ಜಾಸ್ತಿಯಾಗಿ ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.