Hair care tips : ಕೂದಲು ದಟ್ಟವಾಗಿ ಬೆಳೆಯಬೇಕಾ..? ಈರುಳ್ಳಿ ರಸವೇ ಔಷಧಿ..!

ಕೂದಲು ಉದರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದರೆ , ಈರುಳ್ಳಿ ರಸದಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು .

Hair Car Tips :  ಪ್ರತಿ ಮಹಿಳೆಯೂ ದಪ್ಪ ಮತ್ತು ಉದ್ದ ಕೂದಲು ಹೊಂದಲು ಬಯಸುವುದು ಸಾಮಾನ್ಯವಾಗಿದೆ. ಅನೇಕ ಜನರು ಒಳ್ಳೆಯ ಕೂದಲುಳ್ಳವರನ್ನು ನೋಡಿ ನಮ್ಮಲ್ಲಿ ಇಲ್ಲ ಎಂದು ಭಾವಿಸುತ್ತಾರೆ. ಮಾಲಿನ್ಯ, ಜೀವನಶೈಲಿ ಮತ್ತು ಬಳಸುವ ರಾಸಾಯನಿಕಗಳಿಂದ ಕೂದಲು ತೆಳುವಾಗುವುದು ಮತ್ತು ಉದುರುವುದು ಸರ್ವೇಸಾಮಾನ್ಯ . ಕೂದಲು ಉದುರುವುದನ್ನು ತಡೆಯಲು ಮತ್ತು ದಟ್ಟವಾಗಿ ಬೆಳೆಯಲು ಈರುಳ್ಳಿ ರಸಕ್ಕಿಂತ ಉತ್ತಮವಾದ ಔಷಧವಿಲ್ಲ ಎನ್ನುತ್ತಾರೆ ತಜ್ಞರು.

ಕೂದಲು ಮಹಿಳೆಯರಿಗೆ ಮಾತ್ರವಲ್ಲದೆ ಪುರುಷರ ಸೌಂದರ್ಯವನ್ನು ಹೆಚ್ಚಿಸುತ್ತದೆ . ಕೂದಲು ತೆಳುವಾದರೆ  ಬೋಳು ಬರುತ್ತಿದೆ ಎಂದು ತಿಳಿದು  ಪುರುಷರು ಕಾಳಜಿ ವಹಿಸಲು ಪ್ರಾರಂಭಿಸುತ್ತಾರೆ. ಕೂದಲು ಚೆನ್ನಾಗಿದ್ದರೆ ಎಲ್ಲಾ ರೀತಿಯ ಹೇರ್ ಸ್ಟೈಲ್ ಗಳನ್ನು ಮಹಿಳೆಯರು ಫಾಲೋ ಮಾಡುತ್ತಾರೆ. ಅವರು ಹೆಚ್ಚು ಸುಂದರವಾಗಿ ಕಾಣಿಸಲು ಇಚ್ಚಿಸುತ್ತಾರೆ . ಸೆಲೆಬ್ರಿಟಿಗಳಾಗಿದ್ದರೆ ಅವರಿಗಾಗಿ ಪರ್ಸನಲ್ ಹೇರ್ ಸ್ಪೆಷಲಿಸ್ಟ್ ಗಳನ್ನು ನೇಮಿಸಿ ನಾನಾ ತಂತ್ರಗಳನ್ನು ಮಾಡುತ್ತಾರೆ.

 ಈರುಳ್ಳಿಯ ಪೌಷ್ಟಿಕಾಂಶದ ಮೌಲ್ಯವು ನಮಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ತಲೆಹೊಟ್ಟು ಮತ್ತು ಕೆರಾಟಿನ್ ಕೊರತೆಯಿಂದ ಚಿಕ್ಕ ವಯಸ್ಸಿನಲ್ಲಿ ಕೂದಲು ಉದುರುವುದು ಮತ್ತು ಕೂದಲು ಬಿಳಿಯಾಗುವುದು ಮುಂತಾದ ಸಮಸ್ಯೆಗಳಿಗೆ ಈರುಳ್ಳಿ ಉತ್ತಮ ಔಷದ . ಕೂದಲಿನ ಬೆಳವಣಿಗೆಗೆ ಸಲ್ಫರ್ ಕೆರಾಟಿನ್ ಅತ್ಯಗತ್ಯ. ಇದು ಈರುಳ್ಳಿ ರಸದಲ್ಲಿ ಹೇರಳವಾಗಿದೆ. ಇದು ಕೆರಾಟಿನ್ ಎಂಬ ಪ್ರೊಟೀನ್ ಅನ್ನು ಹೆಚ್ಚಿಸುತ್ತದೆ ಮತ್ತು ತಲೆಹೊಟ್ಟು ಕಡಿಮೆ ಮಾಡುತ್ತದೆ. ಆದ್ದರಿಂದ, ಈರುಳ್ಳಿ ರಸವು ಕೂದಲು ಉದುರುವಿಕೆಯನ್ನು ತಡೆಗಟ್ಟುವಲ್ಲಿ ಮತ್ತು ಪುನಃ ಬೆಳೆಸುವಲ್ಲಿ ಅದ್ಭುತಗಳನ್ನುಕೆಲಸಗಳನ್ನು ಮಾಡುತ್ತದೆ.

ಹೇಗೆ ಬಳಸುವುದು..
ಈರುಳ್ಳಿ ರಸವನ್ನು ಕೂದಲಿನ ಬೇರುಗಳಿಗೆ ನಿಧಾನವಾಗಿ ಅಪ್ಲೈ ಮಾಡಿ 
ನಂತರ 5 ರಿಂದ 6 ನಿಮಿಷಗಳ ಕಾಲ ಬೆರಳುಗಳಿಂದ ಮಸಾಜ್ ಮಾಡಿ
ನಂತರ ಸುಮಾರು 15 ನಿಮಿಷಗಳ ಕಾಲ ಹಾಗೆ ಬಿಡಿ.
ನಂತರ  ಶಾಂಪೂವಿನಿಂದ  ಸ್ನಾನ ಮಾಡಿ.

ಮಿಶ್ರಣ ಮಾಡುವ ವಿಧಾನ..
2 ಚಮಚ ಈರುಳ್ಳಿ ರಸ, 2 ಚಮಚ ತೆಂಗಿನ ಎಣ್ಣೆ, 5 ಹನಿ ಚಹಾ ಎಣ್ಣೆಯನ್ನು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕೂದಲಿನ ಬೇರುಗಳಿಗೆ ನಿಯಮಿತವಾಗಿ ಸವರಬೇಕು  ಮತ್ತು ಮಸಾಜ್ ಮಾಡಬೇಕು. ಬಳಿಕ ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡುವುದರಿಂದ ಕೂದಲು ಉದುರದಂತೆ ನೋಡಿಕೊಳ್ಳಬಹುದು.

ಕೂದಲಿನ ಆರೋಗ್ಯಕ್ಕಾಗಿ..
ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು. ನಿರ್ದಿಷ್ಟವಾಗಿ ಹೇಳುವುದಾದರೆ, ನೀವು ವಾರಕ್ಕೆ ಎರಡು ಅಥವಾ ಮೂರು ಬಾರಿ ಸ್ನಾನ ಮಾಡಬೇಕು. ಕಡಿಮೆ ಶಾಂಪೂ ಬಳಸಿ. ಒದ್ದೆ ಕೂದಲನ್ನು ಬಾಚಿಕೊಳ್ಳಬೇಡಿ. ಧೂಮಪಾನ ಅಭ್ಯಾಸ ತಪ್ಪಿಸಿ. ಕೂದಲು ಬೆಳವಣಿಗೆಗೆ ಪ್ರೋಟೀನ್ ಮತ್ತು ವಿಟಮಿನ್ ಗಳಿರುವ ಆಹಾರಗಳನ್ನು ಸೇವಿಸಿ. ಸಮಯಕ್ಕೆ ಸರಿಯಾಗಿ ನಿದ್ದೆಮಾಡಿ . ಈ ನಿಯಮಗಳನ್ನು ಅನುಸರಿಸುವ ಮೂಲಕ ನಿಮ್ಮ ಕೂದಲನ್ನು ಆರೋಗ್ಯಕರವಾಗಿ ಇರಿಸಬಹುದು.