Boiled Eggs : ಈ ರೀತಿ ಮೊಟ್ಟೆಗಳನ್ನು ಕುದಿಸಿ, ಅವು ಎಂದಿಗೂ ಒಡೆಯುವುದಿಲ್ಲ
ಮೊಟ್ಟೆಗಳನ್ನು ಬೇಯಿಸುವಾಗ ಅವುಗಳು ಸಿಡಿಯುವುದು ಹಾಗೂ ಬಿರುಕು ಬಿಡುವಂತಾಗುತ್ತದೆ ,ಮೊಟ್ಟೆಗಳು ಒಡೆದ ಕಾರಣ ಕೆಲವರಿಗೆ ತಿನ್ನಲು ಇಷ್ಟವಾಗುವುದಿಲ್ಲ

ಬೇಯಿಸಿದ ಮೊಟ್ಟೆಗಳು ನೋಡಲಿಕ್ಕೆ ಚಿಕ್ಕದಾದರೂ ಅವುಗಳು ವಿಟಮಿನ್ಸ್ ಮತ್ತು ಖನಿಜ ಸಹಿತ ಪೋಷಕಾಂಶಗಳನ್ನು ಗರಿಷ್ಟ ಪ್ರಮಾಣದಲ್ಲಿ ತುಂಬಿಕೊಂಡಿದೆ .
ಬೇಯಿಸಿದ ಮೊಟ್ಟೆಯಲ್ಲಿ 6.29 ಗ್ರಾಂ ಪ್ರೊಟೀನ್ ಹಾಗು 78 ಗ್ರಾಂ ಕ್ಯಾಲೋರಿಗಳಿವೆ .ಎದು ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಪೂರೈಸಿ ಹೆಚ್ಚು ಹೊತ್ತಿನವರೆಗೆ ಹೊಟ್ಟೆ ಹಸಿವಾಗದಂತೆ ನೋಡಿಕೊಳ್ಳುತ್ತದೆ .
ಮೊಟ್ಟೆಗಳನ್ನು ಬೇಯಿಸುವಾಗ ಅವುಗಳು ಸಿಡಿಯುವುದು ಹಾಗೂ ಬಿರುಕು ಬಿಡುವಂತಾಗುತ್ತದೆ ,ಮೊಟ್ಟೆಗಳು ಒಡೆದ ಕಾರಣ ಕೆಲವರಿಗೆ ತಿನ್ನಲು ಇಷ್ಟವಾಗುವುದಿಲ್ಲ .
ಆದ್ದರಿಂದ ಮೊಟ್ಟೆಗಳು ಒಡೆಯುವುದನ್ನು ತಪ್ಪಿಸಬೇಕಾದರೆ ಈ ಕ್ರಮಗಳನ್ನು ಕೈಗೊಳ್ಳಬೇಕು.
ತಜ್ಞರ ಪ್ರಕಾರ, ವಿನೆಗರ್ ಟ್ರಿಕ್ ಮೊಟ್ಟೆಗಳನ್ನು ಬಿರುಕು ಬಿಡದಂತೆ ಮಾಡಲು ಸುಲಭವಾದ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.
ಇದಕ್ಕಾಗಿ, ಒಂದು ಪಾತ್ರೆಯಲ್ಲಿ ನೀರನ್ನು ತುಂಬಿಸಿ ಮತ್ತು ಅದರಲ್ಲಿ ನೀವು ಕುದಿಸುತ್ತಿರುವ ಮೊಟ್ಟೆಗಳ ಸಂಖ್ಯೆಗೆ ಅನುಗುಣವಾಗಿ ವಿನೆಗರ್ ಅನ್ನು ಸೇರಿಸಿ, ಮೊಟ್ಟೆಗಳನ್ನು ಕುದಿಯಲು ಬಿಡಿ . ವಿನೆಗರ್ ಅನ್ನು ನೀರಿಗೆ ಸೇರಿಸುವುದರಿಂದ, ಮೊಟ್ಟೆಯ ಬಿಳಿಭಾಗದಲ್ಲಿರುವ ಪ್ರೋಟೀನ್ಗಳು ವೇಗವಾಗಿ ಸಂಗ್ರಹಗೊಳ್ಳುತ್ತವೆ, ಇದರಿಂದಾಗಿ ಮೊಟ್ಟೆಗಳು ಹೊಡೆದು ಹೊರಬರುವುದಿಲ್ಲ.