Weekend With Ramesh: ಪತ್ನಿ ತಾಳಿ ಅಡ ಇಟ್ಟಿದನ್ನು ನೆನೆದು ಭಾವುಕನಾದ ನಟ ಪ್ರೇಮ್

ಝೀ ಕನ್ನಡದಲ್ಲಿ ಪ್ರಸಾರವಾಗುವ ವೀಕೆಂಡ್ ವಿಥ್ ರಮೇಶ್ ಶೋ(Weekend With ramesh) ಕೇವಲ ಮನರಂಜನೆಯಲ್ಲದೆ ಅಲ್ಲಿಗೆ ಬರುವ ಸಾಧಕರ ಪರಿಚಯ, ಹಾಗೆಯೇ ಈ ಮಟ್ಟ ತಲುಪಲು ಅವರು ಎಷ್ಟರ ಮಟ್ಟಿಗೆ ಕಷ್ಟ ಪಟ್ಟಿರುತ್ತಾರೆ, ಹೀಗೆ ಅನೇಕ ವಿಷಯಗಳನ್ನು ತಿಳಿಸಿಕೊಡುತ್ತದೆ. ಸಾಧನೆಯ ಶಿಖರವೇರಲು ಕಷ್ಟ ಪಟ್ಟು ಮೇಲಕ್ಕೆ ಬರಬೇಕೆಂಬುದು ನಟ ಪ್ರೇಮ್ ಅವರ ಜೀವನದ ಕಥೆಯನ್ನು ನೋಡಿ ತಿಳಿಯಬೇಕಾಗುತ್ತದೆ.
ನೆನಪಿರಲಿ ಚಿತ್ರದಿಂದ ಸ್ಟಾರ್ ಆದ ನಟ:
ನಿಮಗೆಲ್ಲ ಲವ್ಲಿ ಸ್ಟಾರ್ ಪ್ರೇಮ್(Lovely star prem) ಯಾರೆಂದು ತಿಳಿದೇ ಇದೆ. ಇವರು ಅನೇಕ ಚಿತ್ರಗಳಲ್ಲಿ ನಟಿಸಿ ಜನಗೆದ್ದಿರುವ ನಾಯಕ. ಇವರ ಲವಲವಿಕೆಯ ಪಾತ್ರವನ್ನು ನೋಡಿ ಇವರಿಗೆ ಲವ್ಲಿ ಸ್ಟಾರ್ ಎನ್ನುವ ಬಿರುದು ಸಹ ಸಿಕ್ಕಿದೆ. ಅವರು ಯಾರದೇ ಸಹಾಯವಿಲ್ಲದೆ ತಮ್ಮ ಸ್ವಂತ ಕಾಲಿನಲ್ಲಿ ನಿಲ್ಲಬೇಕೆಂಬ ಛಲ ಅವರನ್ನು ಈ ವಾರ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಕರೆತಂದಿದೆ.

ತಾಳಿಯನ್ನೇ ಅಡವಿಟ್ಟು ಪತಿಯ ನೆರಳಾಗಿ ನಿಂತ ಪ್ರೇಮ್ ಪತ್ನಿ
ಅವರು ಹೀರೋ ಆಗುವ ಮೊದಲೇ ಅನೇಕ ಬಾರಿ ಜೀವನದಲ್ಲಿ ಸೋಲನ್ನು ಕಂಡವರು. ಯಾರೂ ಸಹಾಯಕ್ಕೆ ಬರದ ಪರಿಸ್ಥಿತಿಯಲ್ಲಿ ತನ್ನ ಪತ್ನಿ ಜ್ಯೋತಿ ತನ್ನ ತಾಳಿಯನ್ನೇ ಅಡವಿಟ್ಪಿದ್ದರು ಎಂದು ಕಣ್ಣೀರಿಟ್ಟರು. ಇಂತಹ ಒಂದು ಸನ್ನಿವೇಶ ತನ್ನ ಜೀವನದಲ್ಲಿ ಬರುತ್ತದೆ ಎಂದುಕೊಂಡಿರಲಿಲ್ಲ ಎಂದು ಬಾವುಕರಾದರು.