Virat Kholi: ಪತ್ನಿ ಅನುಷ್ಕಾ ಹುಟ್ಟುಹಬ್ಬಗೆ ಪ್ರೀತಿಯಿಂದ ವಿಶ್ ಮಾಡಿದ ಕೊಹ್ಲಿ

ಹುಟ್ಟು ಹಬ್ಬ ಎನ್ನುವುದು ಪ್ರತಿ ಒಬ್ಬರ ಜೀವನದಲ್ಲಿ ಖುಷಿಯ ದಿನವಾಗಿರುತ್ತದೆ. ಇಲ್ಲೊಬ್ಬ ನಟಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದು, ಅವರ ಪತಿ ವಿಶೇಷವಾಗಿ ಅವರಿಗೆ ವಿಶ್ ತಿಳಿಸಿದ್ದಾರೆ.

ನಟಿ ಅನುಷ್ಕಾರ 35 ನೇ ಹುಟ್ಟುಹಬ್ಬದ ಸಂಭ್ರಮ

ಬಾಲಿವುಡ್ ನಟಿ ಅನುಷ್ಕಾ(Anushka) ರವರು ತಮ್ಮ 35 ನೇ ವರ್ಷದ ಹುಟ್ಟುಹಬ್ಬನ್ನು ಆಚರಿಸುತ್ತಿದ್ದು, ಅದಕ್ಕೆ ಅವರದೇ ಶೈಲಿಯಲ್ಲಿ ವಿಶ್(Wish) ಮಾಡಿದ್ದಾರೆ ಅವರ ಪತಿ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ.
ಸೋಶಿಯಲ್ ಮೀಡಿಯಾದಲ್ಲಿ(Social Media) ಅನುಷ್ಕಾ ರ ಸರಣಿ ಫೋಟೋಗಳನ್ನು ಹಾಕಿ “ನನಗೆಲ್ಲ ಆಗಿರುವ ನಿನಗೆ ಹುಟ್ಟು ಹಬ್ಬದ ಶುಭಾಶಯ, ಹಾಗೂ ನಿನ್ನ ಹುಚ್ಚುತನವನ್ನು ನಾನು ಎಂದಿಗೂ ಪ್ರೀತಿಸುತ್ತೇನೆ” ಎನ್ನುವುದಾಗಿ ಬರೆದು ಪತ್ನಿಗೆ ಸಂತಸಪಡಿಸಿದ್ದಾರೆ. ಇದನ್ನು ನೋಡಿ ಅನುಷ್ಕಾ ಹಾರ್ಟ್ ಇಮೋಜಿ(Emoji) ಕಳುಹಿಸುವುದರ ಮೂಲಕ ಸಂತಸ ತೋರ್ಪಡಿಸಿಕೊಂಡರು.

virat birthday wish on anushka
Image Source: News18

ವಿರಾಟ್ ಜೀವನದಲ್ಲಿ ಅನುಷ್ಕಾ ಪ್ರಾಮುಖ್ಯತೆ

ಇತ್ತೀಚಿನ ಸಂದರ್ಶನ ದಲ್ಲಿ ಅನುಷ್ಕಾ ರ ಬಗ್ಗೆ ಮಾತನಾಡಿದ ಕೊಹ್ಲಿ, ನನ್ನ ಎಲ್ಲಾ ತಪ್ಪುಗಳನ್ನು ತನಗೆ ಅರ್ಥ ಮಾಡಿಸುವವಳು ಅವಳು, ನೇರವಾಗಿ ಯಾವುದೇ ವಿಷಯವಿದ್ದರೂ ಹೇಳಿಬಿಡುತ್ತಾಳೆ. ನನ್ನ ಬಳಿ ಯಾವುದೇ ಮುಚ್ಚು ಮರೆ ಮಾಡದೇ ಸತ್ಯವನ್ನು ಹೇಳುತ್ತಾಳೆ. ಅವಳ ಕೆಲವೊಂದು ಹುಚ್ಚುಗಳನ್ನು ನಾನು ಇಷ್ಟಪಟ್ಟು ಅವಳನ್ನು ಹುಚ್ಚನಂತೆ ಪ್ರೀತಿಸುತ್ತೇನೆ ಎಂದಿದ್ದರು.ಈ ಮುದ್ದಾದ ಜೋಡಿಗೆ ಯಾವುದೆ ದೃಷ್ಟಿ ತಾಕದಿರಲಿ ಎಂದು ಆಶಿಸೋಣ.