Samantha Temple Troll: ನಿರ್ಮಾಣವಾಯಿತು ಸಮಂತಾ ಟೆಂಪಲ್, ಟ್ರೊಲ್ ಆದ ಭಕ್ತ ಅಭಿಮಾನಿ

ನಟಿ ಸಮಂತಾರನ್ನು(Samantha) ನಾನು ನಿಮಗೆ ಪರಿಚಯ ಮಾಡಿಸಬೇಕೆಂದೇನಿಲ್ಲ. ಎಲ್ಲಾ ಚಿತ್ರರಂಗದಲ್ಲಿ ನಟ ನಟಿಯರಿಯರಿಗೆ ಫ್ಯಾನ್ಸ್(Fans) ಇರುವುದು ಸಹಜ. ಜೀವನದಲ್ಲಿ ಒಮ್ಮೆಯಾದರೂ ನೋಡಬೇಕು, ಫೋಟೋ(Photo) ತೆಗೆದುಕೊಳ್ಳಬೇಕು ಎನ್ನುವವರು ಒಂದು ಕಡೆಯಾದರೆ ಅವರ ಹೆಸರನ್ನು ಟ್ಯಾಟೂ(Tatto) ಹಾಕಿಕೊಳ್ಳುವುದು, ಅವರ ಬರ್ತಡೇ ಸೆಲೆಬ್ರೇಶನ್ ಮಾಡಬೇಕು ಎನ್ನುವವರು ಇನ್ನೊಂದೆಡೆ.
ದೇವಸ್ಥಾನ ನಿರ್ಮಿಸಿದ ಸಮಂತಾ ಅಭಿಮಾನಿ:
ಹೌದು ಇಲ್ಲೊಬ್ಬ ಅಭಿಮಾನಿ ಆಂಧ್ರಪ್ರದೇಶ ದ ತಮ್ಮ ಮನೆಯ ಹತ್ತಿರ ಸಮಂತಾ ಅವರ ದೇವಸ್ಥಾನ ನಿರ್ಮಿಸಿದ್ದು, ಇವರು ಸಮಂತಾ ಅವರ ಕಟ್ಟ ಅಭಿಮಾನಿ ಸಂದೀಪ್(Sandeep) ಎಂದು ತಿಳಿದು ಬಂದಿದೆ.

ಟೀಕೆಗೆ ಒಳಗಾದ ಸಮಂತಾ ಅಭಿಮಾನಿ:
ಸಮಂತಾ ಅವರ ಬರ್ತಡೇ ಗಿಫ್ಟ್(Birthday Gift) ಎಂದು ನಿರ್ಮಿಸಿದ ದೇವಾಲಯವು ಟ್ರೋಲ್ ಆಗಿದ್ದು , ಬೇಸರದ ವಿಷಯವಾಗಿದೆ. ಸಮಂತಾ ಮೂರ್ತಿಯು ಅಷ್ಟೊಂದು ಸರಿಯಾಗಿ ಇರದ ಕಾರಣ ಟ್ರೋಲ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ . ಏನಾದರೂ ಆ ವ್ಯಕ್ತಿಯ ಅಭಿಮಾನಕ್ಕೆ ಮೆಚ್ಚುಗೆ ಪಡಿಸಬೇಕು.