Actress Samantha: IMDb ಯ ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸಮಂತಾ ನಂ 1.

ನೀವು ನೋಡಿರುವಂತೆ ದಿನದಿಂದ ದಿನಕ್ಕೆ ಹೊಸ ಹೊಸ ಸಿನಿಮಾಗಳು ಬರುತ್ತಲೇ ಇದೆ. ಹೊಸ ಹೊಸ ನಾಯಕ ನಾಯಕಿಯರ ಪರಿಚಯವಾಗುತ್ತಲೇ ಇದೆ. ಒಬ್ಬರಿಗಿಂತ ಒಬ್ಬರು ಅದ್ಭುತವಾಗಿ ನಟಿಸಿ ಎಲ್ಲರು ಜನರ ಮನಸನ್ನು ಗೆದ್ದು ಜನಪ್ರಿಯರಾಗುತ್ತಿದ್ದಾರೆ.
ಜನ ಮೆಚ್ಚಿದ ಕಲಾವಿದರ ಪಟ್ಟಿ ಬಿಡುಗಡೆ ಮಾಡಿದ IMDB:
ಪ್ರತಿ ವಾರವೂ ಜನರ ಮನೆ ಮಾತಾಗಿ ಜನಪ್ರಿಯವಾಗುವ ಕಲಾವಿದರ ಪಟ್ಟಿಯನ್ನು IMDB ಬಿಡುಗಡೆ ಮಾಡುತ್ತಿದ್ದು ಈ ವಾರವೂ ಸಹ ಬಿಡುಗಡೆ ಮಾಡಿದೆ. ಈ ವಾರದ ಪಟ್ಟಿಯಲ್ಲಿ ನಟಿ ಸಮಂತಾರವರು ಮೊದಲ ಸ್ಥಾನದಲ್ಲಿದ್ದಾರೆ.

ಜನಪ್ರಿಯ ಕಲಾವಿದರಲ್ಲಿ ಅಗ್ರ ಸ್ಥಾನ ಪಡೆದ ನಟಿ ಸಮಂತಾ:
ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿದ ಸಮಂತಾ(Samantha) ರವರು ಜನರ ಮೆಚ್ಚುಗೆಯನ್ನು ಪಡೆದು ಇದೀಗ IMDB ಬಿಡುಗಡೆ ಮಾಡಿರುವ ಜನಪ್ರಿಯ ಕಲಾವಿದರಲ್ಲಿ ಅಗ್ರ ಸ್ಥಾನ ಪಡೆದು ಮಿಂಚಿದ್ದಾರೆ. ಅನೇಕ ನಟ ನಟಿಯರನ್ನು ಹಿಂದಿಕ್ಕಿ ಸಿನಿಮಾ ಕ್ಷೇತ್ರದಲ್ಲಿ ಮುಂದುವರೆಯುತ್ತಿರುವುದು ಹೆಮ್ಮೆಯ ವಿಷಯ.