Rashmika Mandanna: ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣರ ಸಂಭಾವನೆ ಎಷ್ಟು ಗೊತ್ತೇ?

ಪಡ್ಡೆ ಹುಡುಗರ ಮನಸನ್ನು ಗೆದ್ದಿರುವ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ(Rashmika Mandanna) ಕಿರಿಕ್ ಪಾರ್ಟಿ(Kirik Party) ಚಿತ್ರದ ಮೂಲಕ ಕೆಲವೇ ನಿಮಿಷಗಳ ಅಭಿನಯದಿಂದ ಪ್ರೇಕ್ಷಕರ ಮನಗೆದ್ದಿದ್ದು, ಈ ಸಿನಿಮಾ ಬಳಿಕ ಅವರ ಸಿನಿ ಪರದೆಯಲ್ಲಿ ಹೊಸ ಹೊಸ ಚಿತ್ರಗಳು ಮೂಡಿಬಂದಿದೆ. ಸ್ಯಾಂಡಲ್ವುಡ್(Sandalwood) ನಿಂದ ಬಾಲಿವುಡ್(Bollywood) ತನಕ ಬಹು ಬೇಡಿಕೆಯ ನಟಿ ಇವರಾಗಿದ್ದು, ಯಾವುದೇ ಪಾತ್ರ ನೀಡಿದರೂ ಜೀವಂತಿಕೆ ನೀಡಿ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ.

ರಶ್ಮಿಕಾ ಮಂದಣ್ಣರ ಸಿನಿ ಪ್ರಯಾಣ:
ರಶ್ಮಿಕಾ ಮಂದಣ್ಣ ಕೇವಲ ಕನ್ನಡ ಸಿನಿಮಾ ರಂಗವಲ್ಲದೆ ಹಿಂದಿ,ತಮಿಳ್ ಹೀಗೆ ಬಹುಭಾಷ ಚಿತ್ರಗಳಲ್ಲಿ ನಟಿಸಿ ಎಲ್ಲ ಸಿನಿ ಪ್ರಿಯರ ಮನಗೆದ್ದು, ಪಡ್ಡೆ ಹುಡುಗರ ಪಾಲಿನ ನ್ಯಾಶನಲ್ ಕ್ರಶ್(National Crush) ಎನಿಸಿಕೊಂಡಿದ್ದಾರೆ. ಹೀಗೆ ಅವರು ಚಿತ್ರರಂಗದಲ್ಲಿ ಬೆಳೆಯಲು
ಕಿರಿಕ್ ಪಾರ್ಟಿ ಚಿತ್ರಕ್ಕೆ ಇವರನ್ನು ಆಯ್ದುಕೊಂಡ ನಟ ರಕ್ಷಿತ್ ಹಾಗೂ ರಿಷಬ್ ರನ್ನು ಮರೆಯುವಂತಿಲ್ಲ.
ರಶ್ಮಿಕಾ ಮಂದಣ್ಣರ ಸಂಭಾವನೆ ಎಷ್ಟು ಗೊತ್ತೇ?
ರಶ್ಮಿಕಾ ರವರ ಆಸ್ತಿ ವಿವರ ತಿಳಿದರೆ ಎಲ್ಲರೂ ಬೆಚ್ಚಿ ಬೀಳುತ್ತಾರೆ. ಒಂದು ಸಿನಿಮಾದಲ್ಲಿ 4 ಕೋಟಿಗಿಂತಲೂ ಹೆಚ್ಚು ಆದಾಯ ಪಡೆಯುವ ಬಹು ಬೇಡಿಕೆಯ ನಟಿ ಇವರಾಗಿದ್ದು, ಇವರ ಮಾಸಿಕ ಆದಾಯ 60ಲಕ್ಷ ದಷ್ಟಿದೆ. ಕೇವಲ ಸಿನಿಮಾದಿಂದ ಅಲ್ಲದೆ ಜಾಹಿರಾತುಗಳಲ್ಲಿ ಆಕ್ಟ್ ಮಾಡಿ ಹಣವನ್ನು ಸಂಪಾದಿಸುತ್ತಿದ್ದು, ಇವರ ಆಸ್ತಿಯ ಮೊತ್ತ 64 ಕೋಟಿಯಷ್ಟಿರುತ್ತದೆ ಎಂದು ತಿಳಿದು ಬಂದಿದೆ.
