Rashmika Mandanna : ಇದ್ಯಾವುದಕ್ಕೂ ನನಗೆ ಸಮಯವಿಲ್ಲ …!

ಕುಟುಂಬ ಸದಸ್ಯರೊಂದಿಗೆ ಕಳೆಯಲು ಸಮಯವಿಲ್ಲ,ಇನ್ನು ಪ್ರೇಮ ಪ್ರಕರಣಗಳಿಗೆ ಸಮಯ ಎಲ್ಲಿದೆ

Rashmika Mandanna : ‘ನೀವು ಯಾರನ್ನಾದರೂ  ಪ್ರೀತಿಸುತ್ತಿದ್ದರೆ, ಆ ಸಂಬಂಧವನ್ನು ಉಳಿಸಿಕೊಳ್ಳಲು ನೀವು ಸಾಕಷ್ಟು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಸಾಕಷ್ಟು ಸಮಯವನ್ನು ಅವರಿಗಾಗಿ ಮೀಸಲಿಡಬೇಕಾಗುತ್ತದೆ . ಸದ್ಯ ನಾನು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೇನೆ. ಪ್ರೀತಿಸಲು ಸಮಯವಿಲ್ಲ’ ಎನ್ನುತ್ತಾರೆ ಕನ್ನಡದ ಕುವರಿ ರಶ್ಮಿಕಾ ಮಂದಣ್ಣ. ಸದ್ಯ ಈ ನಟಿ ಸೌತ್ ಹಾಗೂ ಹಿಂದಿ ಚಿತ್ರರಂಗದಲ್ಲೂ ಸಖತ್ ಸದ್ದು ಮಾಡುತ್ತಿದ್ದಾರೆ. ‘ಪುಷ್ಪಾ’ ಚಿತ್ರದ ಮೂಲಕ ಈ ನಟಿ ದೇಶಾದ್ಯಂತ ಯುವಜನತೆಯನ್ನು ತಲುಪಿ ನ್ಯಾಷನಲ್  ಕ್ರಶ್ ಎಂದು ಗುರುತಿಸಿಕೊಂಡರು.

‘ನಿನ್ನನ್ನು ನ್ಯಾಷನಲ್ ಕ್ರಶ್ ಎಂದು ಕರೆಯುತ್ತಾರೆ, ಅಲ್ಲವೇ? ಪ್ರೀತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು?ಯಾರೊಂದಿಗಾದರೂ ಸಂಬಂಧವಿದೆಯೇ?

ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಈ ಪ್ರಶ್ನೆಗಳನ್ನು ಕೇಳಿದ್ದು ರಶ್ಮಿಕಾ ಉತ್ತರಿಸಿದ್ದು ಹೀಗೆ, ತೆಲುಗು, ತಮಿಳು, ಹಿಂದಿಯಲ್ಲಿ ಸಾಕಷ್ಟು ಸಿನಿಮಾ ಮಾಡುತ್ತಿದ್ದು  ಬ್ಯುಸಿಯಾಗಿರುವ ಕಾರಣ ಕುಟುಂಬ ಸದಸ್ಯರೊಂದಿಗೆ ಕಳೆಯಲು ಸಮಯ ಸಿಗುತ್ತಿಲ್ಲ ,ಇನ್ನು ಪ್ರೇಮ ಪ್ರಕರಣಗಳಿಗೆ ಸಮಯ ಎಲ್ಲಿದೆ ಎಂದು ಸುಂದರಿ ಮರು ಪ್ರಶ್ನಿಸಿದ್ದಾರೆ. ಪ್ರೀತಿಯನ್ನು ಉಳಿಸಿಕೊಳ್ಳುವುದು ಸುಲಭವಲ್ಲ ಎಂಬ ಮಾತನ್ನು  ರಶ್ಮಿಕಾ ಹೇಳಿದ್ದಾರೆ.

ಅದಕ್ಕೆ ತುಂಬಾ ತಾಳ್ಮೆ ಬೇಕು. ಸಮಯವೂ ಬಹಳ ಮುಖ್ಯ . ನನಗೆ ಮನೆಯಲ್ಲಿ ಕುಟುಂಬಸ್ಥರ ಜೊತೆ ಕಾಲ ಕಳೆಯಲು ಸಮಯ ಸಿಗದ ಕಾರಣ ,ಮನೆಯವರು ಬೇಸರದಲ್ಲಿದ್ದರೆ . ಈಗ ನಾನು ಯಾವುದೇ ಸಂಬಂಧದಲ್ಲಿಲ್ಲ.

ನಾನು ಯಾರನ್ನು ಪ್ರೀತಿಸುತ್ತಿಲ್ಲ ,ನಾನು ಯಾರನ್ನಾದರೂ ಪ್ರೀತಿಸಿದರೆ, ಅದನ್ನು ಮೊದಲು ಮೀಡಿಯಾದ ಮೂಲಕ ತಿಳಿಸುತ್ತೇನೆ ಎಂದಿದ್ದಾರೆ .