Rashmika Mandanna: ನ್ಯಾಶನಲ್ ಕ್ರಷ್ ರಶ್ಮಿಕಾ ಮಂದಣ್ಣ ಇವರ ವಯಸ್ಸೆಷ್ಟು ಗೊತ್ತಾ?

ಕಿರಿಕ್ ಪಾರ್ಟಿಯ(Kirik Party) ಮೂಲಕ ರಕ್ಷಿತ್ ಶೆಟ್ಟಿಗೆ(Rakshit Shetty) ನಾಯಕಿಯಾಗಿ ಮಿಂಚಿದ್ದ ರಶ್ಮಿಕಾ ಮಂದಣ್ಣ(Rashmika Mandanna) ತಮ್ಮ ಅಪ್ರತಿಮ ಪ್ರತಿಭೆಯ ಮೂಲಕ ನ್ಯಾಶನಲ್ ಕ್ರಷ್(National Crush) ಆಗಿರುವುದು ತಮಗೆಲ್ಲರಿಗೂ ತಿಳಿದೇ ಇದೆ. ನಟನೆಯಲ್ಲಿ ಆಸಕ್ತಿ ಹೊಂದದೇ ಸಿನಿಮಾರಂಗ ಪ್ರವೇಶಿಸಿರುವ ಇವರು ಬಾಲಿವುಡ್,ಟಾಲಿವುಡ್ ನಲ್ಲೂ ಸಹ ಮಿಂಚುತ್ತಿದ್ದಾರೆ.

ತಮಿಳು ಚಿತ್ರದಲ್ಲಿ ಸೈ ಎನಿಸಿಕೊಂಡು ಬಾಲಿವುಡ್ ಗೆ ಎಂಟ್ರಿ ಕೊಟ್ಟ ನಟಿ:
ವಿಭಿನ್ನ ರೀತಿಯ ಕಥೆಯನ್ನು ಆರಿಸಿ ಒಂದಾದ ನಂತರ ಹಿಟ್ ಚಿತ್ರವನ್ನು ನೀಡಿ ಜನರನ್ನು ಮನರಂಜಿಸಿರುವುದಲ್ಲದೆ ಡಿಯರ್ ಕಾಮ್ರೆಡ್(Dear Comrade) ಚಿತ್ರದಲ್ಲಿ ವಿಜಯ ದೇವರಕೊಂಡ(Vijay Devardkonda) ಅವರ ಜೊತೆ ನಟಿಸಿ ಇದೀಗ ಬಾಲಿವುಡ್ ಗೆ(Bollywood) ಎಂಟ್ರಿ ಕೊಡಲಿದ್ದಾರೆ. ಕನ್ನಡ , ತಮಿಳ್,ತೆಲುಗು, ಹಿಂದಿ ಹೀಗೆ ಎಲ್ಲಾ ಭಾಷೆಗಳಲ್ಲಿ ಬಹು ಬೇಡಿಕೆಯ ನಟಿಯಾಗಿದ್ದು ಇನ್ನೂ ಚಿಕ್ಕವರಂತೆ ಕಾಣುತ್ತಿದ್ದಾರೆ.
ನ್ಯಾಶನಲ್ ಕ್ರಷ್ ರಶ್ಮಿಕಾರ ವಯಸ್ಸೆಷ್ಟು ಗೊತ್ತಾ?
ನೋಡಲು ಸುಂದರವಾಗಿ ಚಿಕ್ಕ ಹುಡುಗಿಯಂತಿರುವ ರಶ್ಮಿಕಾರವರ ವಯಸ್ಸು ಎಷ್ಟಿರಬಹುದು ಎನ್ನುವ ಕುತೂಹಲ ಎಲ್ಲರಿಗೂ ಇದ್ದೇ ಇದೆ. ಏಪ್ರಿಲ್ 5 1996 ರಲ್ಲಿ ಜನಿಸಿದ ಇವರಿಗೆ ಕೇವಲ 27 ವರ್ಷ ವಾಗಿದ್ದು ಇಷ್ಟು ಚಿಕ್ಕ ವಯಸ್ಸಿಗೆ ಬಹುತೇಕ ಸಾಧನೆ ಮಾಡಿದ್ದಾರೆ.