Kiccha Sudeep New Movie: ಕಿಚ್ಚನ ಮುಂದಿನ ಸಿನೆಮಾ ಯಾವುದು ಗೊತ್ತ? ಹೊಸ ಸಿನೆಮಾಗೆ ಡೈರೆಕ್ಟರ್-ಪ್ರೊಡ್ಯೂಸರ್ ಕೂಡ ಫಿಕ್ಸ್

ವಿಕ್ರಾಂತ್ ರೋಣ(Vikranth Rona) ಸಿನೆಮಾ ಬಿಡುಗಡೆಯಾಗಿ ಕೆಲವೇ ತಿಂಗಳುಗಳು ಕಳೆದಿದೆ, ಇದೀಗ ಅಭಿನಯ ಚಕ್ರವರ್ತಿ ಎಂದು ಹೆಸರಾದ ಕಿಚ್ಚ ಸುದೀಪ್ ಅವರ ಮುಂದಿನ ಸಿನೆಮಾ ಯಾವುದು ಎಂಬ ಕುತೂಹಲ ಇದೆ,
ಬಿಗ್ ಬಾಸ್(Bigg Boss) ರಿಯಾಲಿಟಿ ಶೋ ನಡೆಸಿಕೊಟ್ಟ ಬಳಿಕ ಕ್ರಿಕೆಟ್ ಹಬ್ಬದಲ್ಲಿ ಬ್ಯುಸಿ ಆಗಿದ್ದರು, ಆ ಬಳಿಕ ಕಿಚ್ಚ ಸುದೀಪ್ ಅವರ ಹೊಸ ಚಿತ್ರ ಯಾವುದು ಎಂಬುದು ತಿಳಿದುಬಂದಿದೆ.
ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ?
ಹೌದು, ಕಿಚ್ಚ ಸುದೀಪ್ ಅವರ 46ನೇ ಸಿನೆಮಾ ಯಾವುದು ಹಾಗೆ ಯಾರ ಜೊತೆ ನಡೆಯಲಿದೆ ಎನ್ನುವ ಚಿಕ್ಕ ವಿಷಯ ಎಲ್ಲಾ ಕಡೆ ಸುದ್ದಿಯಲ್ಲಿದೆ, ಹಾಗೆ ಪ್ರೊಡಕ್ಷನ್ ಹೌಸ್(Production house) ಯಾವುದು ಎಂಬುದು ಕೂಡ ತಿಳಿದುಬಂದಿದೆ.
Kalaippuli S Thanu (ಕಲೈಪುಳಿ ಎಸ್ ತನು):
ಇವರು ತಮಿಳು ಚಿತ್ರರಂಗದ ಖ್ಯಾತ ಪ್ರೊಡಕ್ಷನ್ ಹೌಸ್ ಆಗಿರುವ ವಿ ಕ್ರಿಯೇಷನ್ ನ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬರಲಿದೆ ಎಂಬ ಸುದ್ದಿ ಎಲ್ಲಾ ಚಾಲತಾಣಗಳಲ್ಲಿ ಸುದ್ದಿ ಹರಡಿದೆ.
ಇನ್ನು ಸಿನೆಮಾದ ನಿರ್ಮಾಪಕರು :
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸಿರುವ ಆಲ್ ಟೈಮ್ ಬ್ಲಾಸ್ಟರ್ ಸಿನೆಮಾ ಕಬಾಲಿ ಯನ್ನು ನಿರ್ಮಿಸಿದ್ದು ಹಾಗೂ ನಾಯಕನಟ ಧನುಷ್ ನಟಿಸಿರುವ ಕರ್ಣನ್ ಸಿನೆಮಾ ಇವರಿಗೆ ಅನುಭವ ಇದ್ದು, ಇನ್ನು ಮುಂದೆ ಬರುವ ಕಿಚ್ಚನ ಸಿನೆಮಾದ ಬಗ್ಗೆ ಹೆಚ್ಚಿನ ನಿರೀಕ್ಷೆಯಲ್ಲಿದ್ದು, ಸಿನೆಮಾ ತೆರೆಯ ಮೇಲೆ ಹೇಗೆ ಬರಲಿದೆ ಎಂದು ಕಾಡುನೋಡೋಣ.