Ashika Rangnath: ಕೂರ್ಗ್ ಶೈಲಿಯಲ್ಲಿ ಉಡುಗೆ ತೊಟ್ಟ ಆಶಿಕಾ, ಸೋಶಿಯಲ್ ಮೀಡಿಯಾದಲ್ಲಿ ಮಿಂಚಿಂಗ್

ಕನ್ನಡ ಚಿತ್ರರಂಗದ ಮುದ್ದು ಮುಖದ ಸುಂದರಿ ಆಶಿಕಾರವರು(Ashika Ranghanath) ತಮ್ಮ ಪ್ರತಿಭೆಯ ಮೂಲಕ ಸಿನಿಪ್ರಿಯರನ್ನು ರಂಜಿಸಿದ್ದು ಪಡ್ಡೆ ಹುಡುಗರ ಮನಸನ್ನು ಗೆದ್ದವರು.

ಟಾಲಿವುಡ್ ಗೂ ಎಂಟ್ರಿ ಕೊಟ್ಟ ನಟಿ ಆಶಿಕಾ:

ನಟಿ ಆಶಿಕಾರವರು “ಕ್ಲೀನ್ ಆಂಡ್ ಕ್ಲಿಯರ್ ಫ್ರೆಶ್ ಫೇಸ್” ಸ್ಪರ್ಧಿಸಿದ್ದು ಅಲ್ಲಿಂದ ಅವರ ಸಿನಿ ಪಯಣ ಪ್ರಾರಂಭವಾಯಿತು. ಮಹೇಶ್ ಬಾಬುರವರ ಕ್ರೇಜಿಬಾಯ್(Crazy Boy) ಸಿನಿಮಾದಲ್ಲಿ ಆಶಿಕಾರವರನ್ನು ಪರಿಚಯಿಸುವ ಮೂಲಕ ಸಿನಿಮಾ ರಂಗದಲ್ಲಿ ಅವರಿಗೆ ಅವಕಾಶವನ್ನು ಕಲ್ಪಿಸಿದರು. ಇದಾದ ಬಳಿಕ ಇವರಿಗೆ ಒಂದಾದ ಬಳಿಕ ಒಂದು ಅವಕಾಶಗಳು ಬಂದಿದ್ದು ಕೇವಲ ಕನ್ನಡ ಅಲ್ಲದೆ ತಮಿಳು, ತೆಲುಗಿನಲ್ಲೂ ಸಹ ಬ್ಯುಸಿಯಾಗಿದ್ದಾರೆ.

Ashika Rangnath new look
Image Source: Instagram

ಕೂರ್ಗ್ ಸ್ಟೈಲ್ ನಲ್ಲಿ ಮಿಂಚಿದ ನಟಿ:

ಕೇವಲ ಸಿನಿಮಾರಂಗದಲ್ಲಿ ಅಲ್ಲದೆ ಪಾರ್ಟಿ ಫ್ರೆಂಡ್ಸ್ ಹೀಗೆ ಗೆಳೆಯರೊಂದಿಗೆ ಸಮಯವನ್ನು ಕಳೆಯುವ ಇವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ(Social Media) ಫೋಟೋ ಅಪ್ಲೋಡ್(Upload) ಮಾಡುತ್ತಿರುತ್ತಾರೆ. ಇದೀಗ ಕೂರ್ಗ್ ಶೈಲಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋವಂದನ್ನು ಶೇರ್ ಮಾಡಿದ್ದು ತನ್ನ ಪ್ರೀತಿ ಪಾತ್ರರ ಮದುವೆಗೆ ರೆಡಿಯಾಗಿರುವುದಾಗಿ ಕಮೆಂಟ್ ನಲ್ಲಿ ಹಂಚಿಕೊಂಡಿದ್ದಾರೆ.

Ashika Rangnath new look
Image Source: Instagram