Anushka Shetty: ಚಿತ್ರರಂಗ ದಿಂದ ಹೊರಬಂದ ಟಾಲಿವುಡ್ ನಟಿ, ಸಿಹಿ ಸುದ್ದಿ ಕೊಟ್ಟ ಅನುಷ್ಕಾಶೆಟ್ಟಿ.

ತೆಲುಗು ಚಿತ್ರರಂಗ ದಲ್ಲಿ ಅಭಿನಯಿಸಿ, ಟಾಲಿವುಡ್ (Tollywood) ನಟಿಯರಲ್ಲಿ ಒಬ್ಬರಾಗಿ ಎಲ್ಲರ ಮನಸ್ಸನ್ನು ಗೆದ್ದ ಅನುಷ್ಕಾಶೆಟ್ಟಿ ಇದೀಗ ಮದುವೆ ಆಗುವ ನಿರ್ಧಾರ ಮಾಡಿದ್ದಾರೆ. ಆದ್ದರಿಂದ ಚಿತ್ರರಂಗದಿಂದ ದೂರ ಇರುವುದಾಗಿ ತಿಳಿಸಿದ್ದಾರೆ.

ಚಿತ್ರರಂಗ ದಿಂದ ದೂರ ಸರಿದ ಅನುಷ್ಕಾಶೆಟ್ಟಿ:
ತೆಲುಗು ಚಿತ್ರರಂಗದಲ್ಲಿ ತನ್ನದೇ ಆದ ಛಾಪ್ ಅನ್ನು ಮೂಡಿಸಿ, ಅಭಿಮಾನಿಗಳ ಮನೆಮಾತಾಗಿದ್ದಾರೆ,ಬಾಹುಬಲಿ ನಂತರ ಭಾಗಮತಿ ಚಿತ್ರದಲ್ಲಿ ನಟಿಸಿದ್ದರು,ಅದಾದ ಬಳಿಕ ಯಾವುದೇ ಸಿನೆಮಾ ಬಿಡುಗಡೆಯಾಗಿಲ್ಲ.ಅನುಷ್ಕಾಶೆಟ್ಟಿ ಅವರ ಸಿನೆಮಾ ಬಿಡುಗಡೆಯಾಗಿ ಒಂದು ವರ್ಷ ಆಗಿದೆ,ಇದೀಗ ಯಾವುದೇ ಆಫರ್ ಬಂದರು ಒಪ್ಪಿಕೊಳ್ಳುತ್ತಿಲ್ಲ ಹಾಗೆಯೇ ಚಿತ್ರದ ಚಿತ್ರೀಕರಣಕ್ಕೂ (shooting) ಹೋಗುತ್ತಿಲ್ಲ ಎಂಬ ಎಲ್ಲಾ ಜಾಲತಾಣಗಳಲ್ಲಿ ಕೇಳಿಬರುತ್ತಿದೆ.

ಮದುವೆಯ ಸಿಹಿಸುದ್ದಿ ಕೊಟ್ಟ ಅನುಷ್ಕಾಶೆಟ್ಟಿ:
ಟಾಲಿವುಡ್ ನಟಿ ಅನುಷ್ಕಾಶೆಟ್ಟಿ ಇದೀಗ ಮದುವೆ ಆಗುದಾಗಿ ತಿಳಿಸಿದ್ದಾರೆ, ಅದರಿಂದಾಗಿ ಚಿತ್ರರಂಗದಿಂದ ದೂರ ಸರಿದಿದ್ದಾರೆ, ಅನುಷ್ಕಾಶೆಟ್ಟಿ ಮನೆಯವರು ಹುಡುಗನನ್ನು ನೋಡುತ್ತಿರುವುದಾಗಿ ತಿಳಿಸಿದ್ದಾರೆ, ಅಷ್ಟೇ ಅಲ್ಲದೆ ಅನುಷ್ಕಾ ಹಾಗೂ ಕುಟುಂಬದವರು ಕೇದಾರಾನಾಥ್ ಅಲ್ಲಿ ಪೂಜೆ ಸಲ್ಲಿಸಿರುವುದು ಕೂಡ ಎಲ್ಲಾ ಜಾಲತಾಣಗಳಲ್ಲಿ ಕೇಳಿಬರುತ್ತಿದೆ.

ಸ್ವಲ್ಪ ಸಮಯದ ಹಿಂದೆ ಅನುಷ್ಕಾಶೆಟ್ಟಿ ಹಾಗೂ ನಟ ಪ್ರಭಾಸ್ ಇಬ್ಬರು ಪ್ರೀತಿಸುತ್ತಿರುವ ವಿಷಯ ಎಲ್ಲಾ ಕಡೆ ಕೇಳಿಬರುತ್ತಿತ್ತು, ಆದರೆ ನಟ ಪ್ರಭಾಸ್ ನಾವು ಇಬ್ಬರು ಒಳ್ಳೆಯ ಸ್ನೇಹಿತರು ಅದನ್ನು ಹೊರತಾಗಿ ನಮ್ಮ ಮಧ್ಯ ಬೇರೆ ತರಹ ರಿಲೇಶನ್ ಶಿಪ್ ಇಲ್ಲ ಎಂದು ಎಲ್ಲರಿಗೂ ತಿಳಿಸಿದ್ದಾರೆ