Actress SreeLeela: ವಿಜಯ್ ದೇವರಕೊಂಡ ಹೊಸ ಸಿನಿಮಾಗೆ ಕನ್ನಡದ ಬೆಡಗಿ ಶ್ರಿ ಲೀಲಾ

ರಶ್ಮಿಕಾ (ರಶ್ಮಿಕಾ ಮಂದಣ್ಣ) ಬಳಿಕ ತೆಲುಗು ಚಿತ್ರರಂಗದಲ್ಲಿ (Tollywood) ಮತ್ತೊಬ್ಬ ಕನ್ನಡತಿ ಶ್ರಿ ಲೀಲಾ ಹವಾ ಶುರುವಾಗಿದೆ. ನಟಿ ಶ್ರಿ ಲೀಲಾಗೆ ತೆಲಗು ಚಿತ್ರರಂಗ ದಲ್ಲಿ ಬಹಳ ಬೇಡಿಕೆ ಇದ್ದು ವಿಜಯ್ ದೇವರಕೊಂಡ (Vijaya Devarakonda)ಜೊತೆಗೆ ರೋಮ್ಯಾನ್ಸ್ ಮಾಡಲು ತಯಾರಿ ನಡೆಸುತ್ತಿದ್ದಾರೆ.
ಹೊಸ ಪಾತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದ ವಿಜಯ್ ದೇವರಕೊಂಡ ಹಾಗೂ ಶ್ರಿ ಲೀಲಾ : ‘ಲೈಗರ್’ ಸೋಲಿನ ನಂತರ ‘ಜೆರ್ಸಿ’ ನಿರ್ದೇಶಕ ಗೌತಮ್ ಡ್ಯಾಷಿಂಗ್ ಹೀರೋ ವಿಜಯ ದೇವರಕೊಂಡ ಹೊಸ ಸಿನಿಮಾ ಮಾಡುತ್ತಿದ್ದು ಎಲ್ಲರ ಮನ ಗೆಲ್ಲಲು ಸಜ್ಜಗಿದ್ದಾರೆ.

ವಿಜಯ್ ದೇವರಕೊಂಡ ಹಾಗೂ ಶ್ರಿ ಲೀಲಾ ಹೊಸ ಸಿನಿಮಾದ ಮುಹೂರ್ತ ಪೂಜೆಯನ್ನು 2023 ಮೇ 3 ರಂದು ಹೈದರಾಬಾದ್ ಅಲ್ಲಿ ನೆರವೇರಿತು,
ಇದು ವಿಜಯ್ ದೇವರಕೊಂಡ ಅವರ 12ನೇ ಸಿನಿಮಾದ ಪೂಜೆ ಆಗಿದ್ದು ಬಹಳ ಸರಳವಾಗಿ ನೆರವೇರಿಸಿದ್ದರು.ಪೂಜೆ ವೇಳೆ ತಗೆದ ಫೋಟೋಗಳನ್ನು ಸೋಶಿಯಲ್ ಮೀಡಿಯಾ (Social media)ದಲ್ಲಿ ವೈರಲ್ ಆಗುತ್ತಿದೆ.
ಪೂಜೆ ವೇಳೆ ವಿಜಯ್ ದೇವರಕೊಂಡ, ಶ್ರಿ ಲೀಲಾ, ಗೌತಮ್ ಸೇರಿದಂತೆ ಹಲವರು ಪೂಜೆ ವೇಳೆಯಲ್ಲಿ ಉಪಸ್ಥಿತರಿದ್ದರು.
ಇನ್ನು ಪೆಳ್ಳಿ ಸಂದಡಿ, ಧಮಾಕಾ (Dhamaka) ಸಕ್ಸಸ್ ನಂತರ ಶ್ರಿ ಲೀಲಾ 7ಕ್ಕೂ ಅಧಿಕ ತೆಲುಗು ಸಿನಿಮಾ ಗಳಲ್ಲಿ ನಟಿಸುತ್ತಿದ್ದಾರೆ.
ದೇವರಕೊಂಡ – ಲೀಲಾ ಹೊಸ ಶೂಟಿಂಗ್ ಸ್ಟಾರ್ಟ್:
ಇದೆ ತಿಂಗಳು ಜೂನ್ ಇಂದ ವಿಜಯ ದೇವರ ಕೊಂಡ ಹಾಗೂ ಶ್ರಿ ಲೀಲಾ ಅವರ ಹೊಸ ಸಿನಿಮಾ ಶೂಟಿಂಗ್ ಶುರುವಾಗಲಿದ್ದು, ರಶ್ಮಿಕಾ ನಂತರ ಕನ್ನಡದ ಬೆಡಗಿ ಶ್ರಿ ಲೀಲಾ – ವಿಜಯ್ ದೇವರಕೊಂಡ ಜೋಡಿ ತೆರೆಯಮೇಲೆ ಬರಲಿದ್ದು ಎಷ್ಟರ ಮಟ್ಟಿಗೆ ಜನರ ಮನಸ್ಸನ್ನು ಗೆಲ್ಲುತ್ತಾರೆ ಎಂಬುದನ್ನು ಕಾದುನೋಡೋಣ.
