Samantha: ನಟಿ ಸಮಂತಾ ಕತ್ತಲ್ಲಿ ಮಂಗಳಸೂತ್ರ, ಬೆರಗಾದ ಅಭಿಮಾನಿಗಳು

ನಟಿ ಸಮಂತಾ(Actress Samantha) ಹಾಗೂ ನಾಗಚೈತನ್ಯ(Nagachaitanya) ಅವರು ವಿಚ್ಛೇದನ ಪಡೆದದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಬಹು ವರ್ಷಗಳಿಂದ ಪ್ರೀತಿಸಿ ಮದುವೆಯಾಗಿ, 4 ವರ್ಷಗಳ ಕಾಲ ಮದುವೆಯ ಬಂಧನದಲ್ಲಿದ್ದು ನಂತರ ಸಂಸಾರದಲ್ಲಿ ವೈಮನಸ್ಸು ಬಂದು ದೂರವಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇತ್ತೀಚಿಗೆ ಮಾಧ್ಯಮದಲ್ಲಿ ಸಮಂತಾ ರವರ ಒಂದು ಫೋಟೋ ವೈರಲ್ ಆಗಿದ್ದು ಜನರಲ್ಲಿ ಆಶ್ಚರ್ಯ ಹುಟ್ಟಿಸಿದೆ.

ಸಮಂತಾ ಕತ್ತಿನಲ್ಲಿ ಮಂಗಳಸೂತ್ರ:

ನಟಿ ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್(Divorce) ಆದ ಬಳಿಕ ಮಂಗಳಸೂತ್ರವನ್ನು ಧರಿಸಿದೇ ಇರುವ ಸಮಂತಾರ ಕುತ್ತಿಗೆಯಲ್ಲಿ ಮಂಗಳಸೂತ್ರ ಇರುವ ಫೋಟೋ ಭಾರೀ ಸದ್ದು ಮಾಡಿದ್ದು ಜನರಲ್ಲಿ ಪ್ರಶ್ನೆಯನ್ನುಂಟು ಮಾಡಿದೆ.

samantha mangalsutra
Image Source: Neews18

ಮತ್ತೆ ಒಂದಾಗಿದ್ದಾರಾ ನಾಗಚೈತನ್ಯ & ಸಮಂತಾ?

ಕುತ್ತಿಗೆಯಲ್ಲಿ ಮಂಗಳಸೂತ್ರವಿರುವ ಫೋಟೋ ಇತ್ತೀಚೆಗೆ ವೈರಲ್(Viral) ಆಗಿದ್ದು ಜನರಲ್ಲಿ ಹಲವು ಪ್ರಶ್ನೆಗಳು ಮೂಡಿದೆ. ಇವರಿಬ್ಬರು ಒಂದಾದರೇ ಎನ್ನುವ ಕುತೂಹಲ ಉಂಟುಮಾಡಿತ್ತು.
ಆದರೆ ಅದು ಸಮಂತಾ ಅವರ ಹೊಸ ಸಿನಿಮಾದ ಪೋಸ್ಟರ್ ಆಗಿದ್ದು ಅದರಲ್ಲಿನ ಪಾತ್ರಕ್ಕಾಗಿ ಅಷ್ಟೇ ಅವರು ಮಂಗಳಸೂತ್ರ ಧರಿಸಿದ್ದಾರೆ ಎನ್ನಲಾಗಿದೆ.