Actress Ramya: ಗೌಡ್ರು ಹುಡುಗ ಸಿಗೋವರೆಗೂ ರಮ್ಯಾ ಮದ್ವೆ ಆಗಲ್ವಂತೆ!

ಹುಡುಗಿಗೆ 25 ವರ್ಷ ಆಗುತ್ತಿರುವಾಗಲೇ ಮದುವೆ ಯಾವಾಗ ಎನ್ನುವ ಜನರಿಗೆ ಕಮ್ಮಿಯಿಲ್ಲ. ಇದು ಸಿನಿಮಾ ತಾರೆಯರಿಗೂ ಹೊರತು ಪಡಿಸಿಲ್ಲ. ಮದುವೆಯಾಗದ ನಟ ನಟಿಯರಿಗೆ ಸಂದರ್ಶನದ ಸಂದರ್ಭದಲ್ಲಿ ಕೇಳುವ ಮಾಮೂಲಿ ಪ್ರಶ್ನೆಯಾಗಿದೆ.
ಮದುವೆ ಆಗಲಿದ್ದಾರಾ ನಟಿ ರಮ್ಯ:
ಸ್ಯಾಂಡಲ್ವುಡ್ ಕ್ವೀನ್(Sandalwood queen) ರಮ್ಯಾ(Ramya) ರವರು ಅನೇಕ ಸಿನಿಮಾಗಳಲ್ಲಿ ಅಭಿನಯಿಸಿ ಮೋಹಕತಾರೆ ಎನ್ನುವ ಬಿರುದು ಪಡೆದುಕೊಂಡವರು. ಆದರೆ ಸಿನಿಮಾ ಕ್ಷೇತ್ರವನ್ನು ಬಿಟ್ಟು ಚುನಾವಣೆ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಇದೀಗ ಮರಳಿ ಸಿನಿಮಾದಲ್ಲಿ ಅಭಿನಯಿಸಿದವರು. ಸದ್ಯಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ.

ಸ್ವಯಂವರ ಏರ್ಪಡಿಸಿ ಹುಡುಗ ಸಿಗುತ್ತಿಲ್ಲ ಎಂದ ರಮ್ಯಾ:
ಚುನಾವಣೆ ಪ್ರಚಾರದಲ್ಲಿರುವ ರಮ್ಯಾರವರಿಗೆ ಮದುವೆ ಯಾವಾಗ ಎಂಬ ಪ್ರಶ್ನೆಗೆ ನನಗೆ ಹುಡುಗ ಸಿಗುತ್ತಿಲ್ಲ ಮಂಡ್ಯ ದಲ್ಲಿ ಸ್ವಯಂವರ ನಡೆಸಿ ನೀವೆ ಹುಡುಗನನ್ನು ಹುಡುಕಿ ಎಂದು ತಿಳಿಸಿದ್ದಾರೆ. ಮೋಹಕ ತಾರೆಗೆ ಹುಡುಗ ಸಿಗಲಿಲ್ಲ ಎನ್ನುವುದು ನಂಬಲಾರದ ವಿಷಯವಾದರೂ ಪ್ರೇಕ್ಷಕರು ಮಾತ್ರ ರಮ್ಯಾರವರ ರಿಯಲ್ ಹೀರೋ ಹೇಗಿರಬಹುದು ಎಂದು ಕುತೂಹಲದಿಂದ ಕಾಯುತ್ತಿದ್ದಾರೆ.