Meghana Raj: ಎಲ್ಲರ ಗಮನಸೆಳೆದ ಮೇಘನಾರಾಜ್ ನ್ಯೂ ಹೇರ್ ಸ್ಟೈಲ್

ಮೇಘನಾ ರಾಜ್(Meghana Raj) ಸ್ಯಾಂಡಲ್ ವುಡ್ ನ(Sandalwood) ನಟಿಯರಲ್ಲಿ ಒಬ್ಬರಾದ ಇವರು ಬಹುಕಾಲದಿಂದ ದೂರ ಉಳಿದಿದ್ದರು. ನಟ ಚಿರು ಸರ್ಜಾ(Chiri saeja) ಅಗಲಿದ ನಂತರ ಬೇಸರದಲ್ಲಿದ್ದ ಇವರು ತನ್ನ ಮಗ ರಾಯನ್ ಸರ್ಜಾರ(Rayan Raj) ಆರೈಕೆ ಮಾಡುತ್ತಾ ಚಿತ್ರರಂಗದಿಂದ ಸ್ವಲ್ಪ ಸಮಯ ದೂರ ಉಳಿದಿದ್ದರು. ಇದೀಗ ಚಿತ್ರರಂಗಕ್ಕೆ ಮತ್ತೊಮ್ಮೆ ಎಂಟ್ರಿ ನೀಡಿದ್ದು ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.
ತತ್ಸಮ ತದ್ಭವ ಸಿನಿಮಾ ಮೂಲಕ ಮೇಘನಾ ಮರು ಆಗಮನ:
ಮಹಿಳಾ ಪ್ರಧಾನ ವಾದ ತತ್ಸಮ ತದ್ಭವದಲ್ಲಿ ನಟಿ ಮೇಘನಾ ರಾಜ್ ನಟಿಸಿದ್ದು ಈ ಕಥೆ ಅವರು ಈ ಹಿಂದೆ ಅಭಿನಯಿಸಿರುವ ಕಥೆಗಳಿಗೆ ವಿಭಿನ್ನವಾಗಿದೆ ಎನ್ನಲಾಗಿದೆ. ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿ ಮೇಘನಾ ಹೇಗೆ ಅಭಿನಯಿಸಿದ್ದಾರೆ ಎಂದು ಪ್ರೇಕ್ಷಕರ ಕುತೂಹಲದ ವಿಷಯವಾಗಿದೆ.

ಡಿಫ್ರೆಂಟ್ ಹೇರ್ ಸ್ಟೈಲ್ ಮೂಲಕ ಮನಸೆಳೆದ ನಟಿ:
ನಟಿ ಮೇಘನಾರಾಜ್ ಫ್ಯಾಮಿಲಿ ಟ್ರಿಪ್(Family Trip) ಗೆಂದು ಕೂರ್ಗ್(Coorg) ಗೆ ಹೋಗಿದ್ದು ತನ್ನ ಮಗ ಹಾಗೂ ಫ್ಯಾಮಿಲಿಯೊಂದಿಗೆ ಸಮಯವನ್ನು ಕಳೆಯುತ್ತಿದ್ದಾರೆ. ಚಿತ್ರೀಕರಣ ಮುಗಿಸಿ ಟ್ರಿಪ್ ಗೆ ಹೊರಟ ಇವರು ಕೆಲವು ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಬಿಟ್ಟಿದ್ದು ಇವರ ಹೇರ್ ಸ್ಟೈಲ್ ಬದಲಾಗಿರುವುದು ಗಮನಿಸಬಹುದು. ಆದರೆ ಇದು ಸಿನಿಮಾಕ್ಕಾಗಿ ಮಾಡಿದ ಚೇಂಜಸ್ ಎಂದು ತಿಳಿದು ಬಂದಿದ್ದು, ಈ ಹೇರ್ ಸ್ಟೈಲ್ ನಲ್ಲೂ ನಟಿ ಮುದ್ದಾಗಿ ಕಾಣಿಸುತ್ತಿದ್ದಾರೆ ಎನ್ನಲಾಗಿದೆ.