Kavya Gowda: ಕಿರುತೆರೆ ನಟಿ ಕಾವ್ಯ ಗೌಡರ ಹೊಸ ಮನೆ ಹೇಗಿದೆ ಗೊತ್ತಾ?

ನಿಮಗೆ ರಾಧಾರಮಣ,ಗಾಂಧಾರಿ ಹೀಗೆ ಅನೇಕ ಸೀರಿಯಲ್ ಗಳಲ್ಲಿ ನಟಿಸಿರುವ ಕಿರುತೆರೆ ನಟಿ ಕಾವ್ಯ ಗೌಡರ(Kavya Gowda) ಪರಿಚಯ ಈಗಾಗಲೆ ಇದೆ ಎನ್ನುಕೊಳ್ಳತ್ತೇನೆ. ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆಗಿರುವ ಕಾವ್ಯ ಗೌಡ ಅವರು ಹೊಸ ಮನೆಯನ್ನು ನಿರ್ಮಿಸಿದ್ದು ಬಹಳ ವಿಶಿಷ್ಟವಾಗಿದೆ ಎಂದು ಹೇಳಲಾಗಿದೆ.

kavyagowda house warming
Image Source: Nesws18

ಕಾವ್ಯ ಗೌಡರ ವೈಯಕ್ತಿಕ ಜೀವನ:

ನಟಿ ಕಾವ್ಯ ಗೌಡರವರು ಎರಡು ವರ್ಷದ ಹಿಂದೆ ಅಂದರೆ 2021 ರಲ್ಲಿ ಸೋಮಶೇಖರ್(Somshekar) ಎನ್ನುವ ಉದ್ಯಮಿ ಜೊತೆ ವಿವಾಹವಾಗಿದ್ದು, ಸಂತಸದಲ್ಲಿದ್ದಾರೆ. ಈ ಜೋಡಿಗಳು ಬಹಳಷ್ಟು ಬಾರಿ ಟೂರ್ ಗಳಿಗೆ ಹೋಗುತ್ತಿದ್ದು , ಟೂರ್ ಗಾಗಿ ಹೊರ ದೇಶ ಅಂದರೆ ದುಬೈ(Dubai) ಹೀಗೆ ಬೇರೆ ಬೇರೆ ದೇಶಕ್ಕೆ ಹೋಗುತ್ತಿರುತ್ತಾರೆ. ಇವರ ಫ್ರೀ ವೆಡ್ಡಿಂಗ್ ಶೂಟ್ ಸಹ ದುಬೈ ನಲ್ಲಿ ನಡೆದಿದೆ ಎನ್ನಲಾಗಿದೆ.

kavyagowda house warming
Image Source: Instagram

ಹೊಸ ಮನೆಯ ಸಂಭ್ರಮದಲ್ಲಿ ನಟಿ ಕಾವ್ಯ ಗೌಡ:

ಇತ್ತೀಚಿಗೆ ಕಾವ್ಯ ಗೌಡ ರವರು ಹೊಸ ಮನೆಯನ್ನು ಕಟ್ಟಿಸಿದ್ದು ಇದು ವಿಶಿಷ್ಟ ಹಾಗೂ ವಿಭಿನ್ನವಾಗಿದೆ. ಇವರ ಮನೆಯಲ್ಲಿ ಅನೇಕ ಕಡೆಗಳಲ್ಲಿ ಮರದಿಂದ ವಿನ್ಯಾಸ ಮಾಡಿದ ಹಾಗೆ ಕಾಣುತ್ತದೆ. ಗೃಹ ಪ್ರವೇಶವನ್ನು ಅದ್ದೂರಿಯಾಗಿ ನಡೆಸಿದ ಇವರು, ಕೆಂಪು ಬಣ್ಣದ ಸೀರೆಯನ್ನುಟ್ಟು ಮನಮೋಹಕವಾಗಿ ಕಾಣಿಸಿಕೊಂಡಿದ್ದು, ಬಂದವರ ಹೊಗಳಿಕೆಗೆ ಪಾತ್ರರಾಗಿದ್ದಾರೆ.

kavyagowda house warming
Image Source: News18