Stock Market : ದೇಶಿಯ ಷೇರು ಮಾರುಕಟ್ಟೆಗಳು ಭಾರಿ ಕುಸಿತ ಕಂಡಿವೆ.. ಸೆನ್ಸೆಕ್ಸ್ 700ಕ್ಕೂ ಹೆಚ್ಚು ಅಂಕ ಕುಸಿದಿದೆ

ದೇಶೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಕುಸಿತ

Stock Market :  ವಾರದ ಮೊದಲ ದಿನವಾದ ಸೋಮವಾರ ದೇಶಿ ಷೇರು ಮಾರುಕಟ್ಟೆಗಳು (Stock Market ) ತೀವ್ರ ಕುಸಿತ ಕಂಡಿವೆ. ಸೆನ್ಸೆಕ್ಸ್ 750ಕ್ಕೂ ಹೆಚ್ಚು ಅಂಕ ಕಳೆದುಕೊಂಡಿದೆ. ಅದೇ ಸಮಯದಲ್ಲಿ ನಿಫ್ಟಿ ಕೂಡ 200 ಪಾಯಿಂಟ್‌ಗಳ ಇಳಿಕೆ ಕಂಡು 17090 ಅಂಕಗಳಿಗೆ ತಲುಪಿದೆ. ಅದೇ ರೀತಿ ರೂಪಾಯಿ ಕೂಡ ಮತ್ತಷ್ಟು ದುರ್ಬಲಗೊಂಡು ಸಾರ್ವಕಾಲಿಕ ಕನಿಷ್ಠ ಮಟ್ಟವಾದ ರೂ.82.64ಕ್ಕೆ ತಲುಪಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 767 ಅಂಕ ಕುಸಿದು 57,424 ಅಂಕಗಳಿಗೆ ತಲುಪಿದೆ. ಅದೇ ಸಮಯದಲ್ಲಿ, ನಿಫ್ಟಿ 205 ಅಂಕಗಳ ಕುಸಿತ ಮತ್ತು 17,103 ನಲ್ಲಿ ವಹಿವಾಟು ಆರಂಭಿಸಿತು.

ಮಾರುಕಟ್ಟೆಯಲ್ಲಿ ಬ್ಯಾಂಕ್, ಆಟೋ ಮತ್ತು ಲೋಹ ವಲಯದ ಶೇರುಗಳು ನಷ್ಟವನ್ನು ಕಂಡವು.ಸೆನ್ಸೆಕ್ಸ್ ಬೆಂಚ್‌ಮಾರ್ಕ್‌ನ ಆರಂಭಿಕ ವಹಿವಾಟಿನಲ್ಲಿ ಎಲ್ಲಾ 30 ಷೇರುಗಳು ನಷ್ಟದೊಂದಿಗೆ ಪ್ರಾರಂಭವಾದವು. ಪ್ರಸ್ತುತ ಸೆನ್ಸೆಕ್ಸ್ 57,498.35 ಮತ್ತು ನಿಫ್ಟಿ 17,101.9 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ. ಮತ್ತೊಂದೆಡೆ, ಏಷ್ಯಾದ ಮಾರುಕಟ್ಟೆಗಳು ಸಹ ನಷ್ಟವನ್ನು ಅನುಭವಿಸುತ್ತಿವೆ. ಸ್ಟ್ರೈಟ್ ಟೈಮ್ಸ್ 3,106, ಹ್ಯಾಂಗ್ ಸೆಂಗ್ 17,298 ಮತ್ತು ನಿಕ್ಕಿ 27,116.11 ಅಂಕಗಳಲ್ಲಿ ವಹಿವಾಟು ನಡೆಸುತ್ತಿವೆ. ಆಕ್ಸಿಸ್ ಬ್ಯಾಂಕ್, ಟಿಸಿಎಸ್ ಮತ್ತು ಪವರ್ ಗ್ರಿಡ್ ಕಾರ್ಪೊರೇಷನ್ ಟಾಪ್ ಗೇನರ್ ಆಗಿದ್ದರೆ, ಟಾಟಾ ಮೋಟಾರ್ಸ್, ಹೀರೊಮೊಟೊಕಾರ್ಪ್, ಹಿಂಡಾಲ್ಕೊ ಮತ್ತು ಎಚ್‌ಡಿಎಫ್‌ಸಿ ನಷ್ಟವನ್ನು ಮುಂದುವರಿಸಿವೆ